ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ಮಾಡಿ ಬಿಜೆಪಿ ಪಕ್ಷ ಇಂದು ನೇಮಿಸಿದೆ. ಅವರ ಜೊತೆ ಜೊತೆಗೇ ಕೇಂದ್ರ ಸಚಿವ ಸಿ.ಆರ್ ಪಾಟೀಲ್ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಸಹ-ಪ್ರಭಾರಿಗಳನ್ನಾಗಿ ನೇಮಿಸಲಾಗಿದೆ.
ಬಿಹಾರ ವಿಧಾನಸಭೆಯ ಎಲ್ಲಾ 243 ಸ್ಥಾನಗಳಿಗೆ ಚುನಾವಣೆ ಅಕ್ಟೋಬರ್-ನವೆಂಬರ್ 2025ರಲ್ಲಿ ನಡೆಯಲಿದೆ. ಹಿಂದಿನ ಚುನಾವಣೆಗಳು ಅಕ್ಟೋಬರ್-ನವೆಂಬರ್ 2020ರಲ್ಲಿ ನಡೆದವು.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣಾ ಉಸ್ತುವಾರಿ:
ಹಾಗೆಯೇ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗೂ ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.
ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರನ್ನು ಪಶ್ಚಿಮ ಬಂಗಾಳ ಚುನಾವಣಾ ಉಸ್ತುವಾರಿಯನ್ನಾಗಿ ಹಾಗೂ ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಸಹ-ಪ್ರಭಾರಿಯಾಗಿ ಹೆಸರಿಸಲಾಗಿದೆ.
ಬಿಜೆಪಿ ಬೈಜಯಂತ್ ಪಾಂಡ ಅವರನ್ನು ತಮಿಳುನಾಡಿಗೆ ಪಕ್ಷದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದರೆ, ಮುರಳೀಧರ್ ಮೊಹೋಲ್ ಅವರನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ.