ಆಲೂರು : ತಾಲೂಕು ಮಿನಿ ವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಬುಧವಾರ “ ಹಾಸನ ಲೋಕಾಯುಕ್ತ ಘಟಕದ ವತಿಯಿಂದ ಜನ ಸಂಪರ್ಕ ಸಭೆ ನಡೆಯಿತು.
ತಾಲೂಕು ಕಂದಾಯ ಇಲಾಖೆ, ತಾಲೂಕು ಪಂಚಾಯಿತ್ ಕಾರ್ಯಾಲಯ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಅರಣ್ಯ ಇಲಾಖೆ, ಭೂದಾಖಲೆಗಳ ಸಹಾಯಕ ನಿರ್ದೇಶಕ ಇಲಾಖೆ ಸೇರಿದಂತೆ ಒಟ್ಟು 17 ದೂರಗಳು ಸಲ್ಲಿಕೆಯಾಗಿದವು. ಸ್ಥಳದಲ್ಲೇ ಜಮೀನು ಖಾತೆ, ಪ್ಲಾಂಟಿಗ್ ಕುರಿತು ಹೆಚ್ಚಿನ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಿ ಪರಿಹಾರ ಕಂಡುಕೊಡಲಾಯಿತು.
ಹಾಸನದ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಕೆ. ಶಿಲ್ಪಾ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ಒಟ್ಟು 17 ದೂರುಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಎರಡು ದೂರುಗಳನ್ನು ತಹಶೀಲರ್ ಮತ್ತು ADLR ಅವರಿಗೆ ಸ್ಥಳದಲ್ಲೇ ಇತ್ಯರ್ಥ ಪಡಿಸಲು ಸೂಚನೆ ನೀಡಲಾಗಿದೆ. ಇನ್ನೂ ಉಳಿದ ದೂರಗಳಿಗೆ ಕಾಲಮಿತಿಯಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ತಾಲೂಕು ಮಟ್ಟದಲ್ಲಿ ಭ್ರಷ್ಟಚಾರ ಕುರಿತು ಜಾಗೃತಿ ಮೂಡಿಸಲು ಈ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಲು ಅವಕಾಶ ಕಲ್ಪಿಸಲು ತಹಸಿಲ್ದಾರ್ ಹಾಗೂ ಇ.ಓ ಅವರಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಇರುವುದು ಅವರನ್ನು ಪದೇ ಪದೇ ಸತಾಯಿಸುವ ಕಾರ್ಯ ಮಾಡಬಾರದು. ಇತ್ತೀಚೀನ ದಿನಗಳಲ್ಲಿ ಕಂದಾಯ ಇಲಾಖೆಯ ವಿರುದ್ಧ ಅನೇಕ ದೂರುಗಳು ಬುರುತ್ತಿದೆ. ಪೌತಿ ಖಾತೆ ಬದಲಾಣೆಗೆ ಲಂಚ ನೀಡುವ ಸ್ಥಿತಿ ಇದ್ದು ಇದರ ವಿರುದ್ಧ ದೂರ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿದೆ ಎಂದ ಅವರು ಲೋಕಾಯುಕ್ತದ ನಿಯಮಗಳು ಹಾಗೂ ಭ್ರಷ್ಟಚಾರದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ ಶರ್ಮ, ಭೂದಾಖಲೆಗಳ ಸಹಾಯಕ ನಿರ್ದೇಶಕ ರವಿಶಂಕರ್, ಲೊಕಾಯುಕ್ತ ಇಲಾಖೆ ಸಿಬ್ಬಂದಿಗಳಾದ ಉಮೇಶ್, ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
