ಕನ್ನಿಯಕುಮಾರಿ: ಕಳೆದ ಕೆಲವು ವಾರಗಳಿಂದ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತ ಜಯಕುಮಾರ್ (45) ಎಂಬುವನನ್ನು ಜಿಲ್ಲಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ಸರಣಿ ಅಪರಾಧಿಯಾಗಿದ್ದು, ಈ ಹಿಂದೆ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಈತ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ಆಕೆಯ ಸೆಲ್ ಫೋನ್ ಮೂಲಕ ಆಕೆಯನ್ನು ಸಂಪರ್ಕಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
BJP functionary arrested for sexually harassing female doctor: ಪ್ರಕರಣದ ವಿವರಗಳ ಕುರಿತು ಮಾತನಾಡಿದ ಪೊಲೀಸರು, ಜಯಕುಮಾರ್ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ಬಳಿಯ ಪಾರ್ವತಿಪುರಂ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಮತ್ತು ಕೆಲವು ವಾರಗಳ ಹಿಂದೆ ಚಿಕಿತ್ಸೆಗಾಗಿ ನಾಗರಕೋಯಿಲ್ ಬಳಿಯ ಕೊಟ್ಟಾರ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ. ಅವನು ತನ್ನ ದೀರ್ಘಕಾಲದ ಅನಾರೋಗ್ಯದ ಕಾರಣ ಆಗಾಗ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ. ಈ ಅವಧಿಯಲ್ಲಿ, ತುರ್ತು ಸಂದರ್ಭದಲ್ಲಿ ವೈದ್ಯೆಯನ್ನು ಸಂಪರ್ಕಿಸಲು ಫೋನ್ ಕೊಡುವಂತೆ ಆಕೆಯ ಬಳಿ ವಿನಂತಿಸಿದ್ದ. ಆದರೆ ಆತ ಆಕೆಯೊಂದಿಗೆ ಅನಗತ್ಯವಾಗಿ ಫೋನ್ ಮೂಲಕ ಮಾತನಾಡಲು ಆರಂಭಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವರ್ತನೆಯಿಂದ ನೊಂದ ವೈದ್ಯೆ ಕೊಟ್ಟಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಕೊಟ್ಟಾರ್ ಪೊಲೀಸರು ಬಿಜೆಪಿ ಮುಖಂಡ ಜಯಕುಮಾರ್ ವಿರುದ್ಧ ಐಪಿಸಿ (ಭಾರತೀಯ ದಂಡ ಸಂಹಿತೆ) 4 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
2022ರಲ್ಲಿ ನಿವೃತ್ತರಾದ ಸಬ್ ಇನ್ಸ್‌ಪೆಕ್ಟರ್ ಅವರಿಗೆ ಹಣ ವಂಚಿಸಿದ ಪ್ರಕರಣ ಸೇರಿದಂತೆ ಸೇರಿದಂತೆ ಆತನ ವಿರುದ್ಧ ಕನಿಷ್ಠ 10 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯಕುಮಾರ್ ಈಗಾಗಲೇ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಒಡನಾಟ ಹೊಂದಿದ್ದ ಮತ್ತು ಇತ್ತೀಚೆಗಷ್ಟೇ ಬಿಜೆಪಿ ಸೇರಿ ತನ್ನನ್ನು ಬಿಜೆಪಿ ನಾಯಕನೆಂದು ಕರೆದುಕೊಳ್ಳುತ್ತಿದ್ದ.