Thursday, September 11, 2025

ಸತ್ಯ | ನ್ಯಾಯ |ಧರ್ಮ

ಜನ ಹೋರಾಟಕ್ಕೆ ಜಯ: ಅದಾನಿಗೆ ಮಂಜೂರು ಮಾಡಲಾಗಿದ್ದ 108 ಹೆಕ್ಟೇರ್‌ ಭೂಮಿ ಹಿಂಪಡೆದ ಸರ್ಕಾರ

ಅಹಮದಾಬಾದ್, ಜುಲೈ 5: ಮುಂದ್ರಾ ಪೋರ್ಟ್ ಬಳಿ ಪ್ರಮುಖ ಕೈಗಾರಿಕೋದ್ಯಮಿ ಅದಾನಿಗೆ ಮಂಜೂರು ಮಾಡಿದ್ದ 108 ಹೆಕ್ಟೇರ್ ಗೋಮಾಳ ಭೂಮಿಯನ್ನು ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಗುಜರಾತ್ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ನವಿನಾಳ್ ಗ್ರಾಮಸ್ಥರ ಅವಿರತ ಹೋರಾಟದಿಂದ ರಾಜ್ಯದ ಬಿಜೆಪಿ ಸರಕಾರ ಹಿನ್ನಡೆಯಾಯಿತು. 2005ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅದಾನಿ ಪೋರ್ಟ್ಸ್ ಮತ್ತು ಎಸ್ ಇಝಡ್ ಲಿಮಿಟೆಡ್ ಗೆ ಸರ್ಕಾರ 231 ಎಕರೆ ಭೂಮಿ ಮಂಜೂರು ಮಾಡಿತ್ತು.

2010ರಲ್ಲಿ ಆ ಸ್ಥಳದಲ್ಲಿ APSEZ ಫೆನ್ಸಿಂಗ್ ಆರಂಭಿಸಿದಾಗ ಈ ವಿಷಯ ಗ್ರಾಮಸ್ಥರಿಗೆ ತಿಳಿಯಿತು. ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದಾನಿಗೆ ಜಮೀನು ಮಂಜೂರು ಮಾಡಿದ ನಂತರ ಕೇವಲ 45 ಎಕರೆ ಗೋಮಾಳ ಭೂಮಿ ಉಳಿದಿದೆ ಎಂದು ಅವರು ಪ್ರತಿಪಾದಿಸಿದರು. ಈಗಾಗಲೇ ಗೋಮಾಳದ ಕೊರತೆ ಇರುವಾಗ ಸರಕಾರ ಆ ಜಮೀನು ಮಂಜೂರು ಮಾಡಿರುವುದು ಕಾನೂನು ಬಾಹಿರವಾಗಿದ್ದು, ಜಮೀನು ಸಮುದಾಯದ ಸಂಪನ್ಮೂಲವಾಗಿದೆ ಎಂದು ವಿವರಿಸಿದರು.

ಜಾನುವಾರು ಮೇಯಿಸಲು ಹೆಚ್ಚುವರಿಯಾಗಿ 387 ಹೆಕ್ಟೇರ್ ಮೀಸಲಿಡಲಾಗುವುದು ಎಂದು ಸರ್ಕಾರ ಅಫಿಡವಿಟ್ ಸಲ್ಲಿಸಿದಾಗ 2014ರಲ್ಲಿ ಪ್ರಕರಣವನ್ನು ವಜಾಗೊಳಿಸಲಾಯಿತು. ನಂತರ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳದ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರವು ಪಂಚಾಯಿತಿಗೆ ಕೇವಲ 17 ಹೆಕ್ಟೇರ್ ಭೂಮಿ ಮಂಜೂರು ಮಾಡಲು ಲಭ್ಯವಿದ್ದು, ಅವರಿಗೆ ಏಳು ಕಿಲೋಮೀಟರ್ ದೂರದಲ್ಲಿ ಪರ್ಯಾಯ ಜಮೀನು ಮಂಜೂರು ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ಗ್ರಾಮಸ್ಥರು ಸಾಧ್ಯವಿಲ್ಲ ಎಂದರು. ಈಗ ಅದಾನಿಗೆ ಮಂಜೂರಾಗಿದ್ದ ಭೂಮಿಯನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page