ರಾಹುಲ್ ಜೊತೆ ನೇರ ಚರ್ಚೆಗೆ ಬಿಜೆಪಿ ರೆಡಿ… ಆದರೆ ಮೋದಿ ಬರಲ್ವಂತೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ನೇರ ಚರ್ಚೆಗೆ ಬಿಜೆಪಿ ಗ್ರೀನ್ ಸಿಗ್ನಲ್ ನೀಡಿದೆ. ಪಕ್ಷವು ತಮ್ಮ ಪಕ್ಷದ ಪರವಾಗಿ ಚರ್ಚೆಯಲ್ಲಿ ಭಾಗವಹಿಸಲು ಯುವ ಮೋರ್ಚಾ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ಅವರನ್ನು ಕಣಕ್ಕಿಳಿಸಿದೆ.

ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಬೇಕೆಂದು ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಕೇಳಿಕೊಂಡಿದ್ದಾರೆ. ರಾಜಕೀಯ ವಾರಸುದಾರರು ಮತ್ತು ಸಾಮಾನ್ಯರ ನಡುವೆ ಈ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌, ದೆಹಲಿ ಹೈಕೋರ್ಟ್‌ನ ಮಾಜಿ ಸಿಜೆ ನ್ಯಾಯಮೂರ್ತಿ ಅಜಯ್‌ ಪಿ.ಶಾ ಮತ್ತು ‘ದಿ ಹಿಂದೂ’ ನಿಯತಕಾಲಿಕದ ಮಾಜಿ ಸಂಪಾದಕ ಎನ್‌.ರಾಮ್‌ ಅವರು ರಾಹುಲ್‌ ಗಾಂಧಿ ಮತ್ತು ಪ್ರಧಾನಿ ಮೋದಿ ನಡುವೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ಎಕ್ಸ್’ ವೇದಿಕೆಯಲ್ಲಿ ಪ್ರಧಾನಿ ಮೋದಿ ಕೂಡ ಇದರಲ್ಲಿ ಭಾಗಿಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಆದರೆ, ಪ್ರಧಾನಿ ಜತೆ ಚರ್ಚಿಸುವ ಅರ್ಹತೆ ರಾಹುಲ್‌ಗೆ ಇಲ್ಲ ಎಂದು ಟೀಕಿಸಿದ ಬಿಜೆಪಿ, ತಮ್ಮ ಪಕ್ಷದ ಪರವಾಗಿ ಬಿಜೆವೈಎಂ ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಅವರನ್ನು ನಾಮನಿರ್ದೇಶನ ಮಾಡುತ್ತಿರುವುದಾಗಿ ಘೋಷಿಸಿತು. ಚರ್ಚೆಗೆ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಪಕ್ಷ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು