ಬಿಜೆಪಿ ಕಾರ್ಯಾಧ್ಯಕ್ಷನ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆತ : ಆರೋಪಿ ಬಂಧನ

ತಮಿಳುನಾಡು : ದಿಂಡಿಗಲ್‌ ಜಿಲ್ಲೆಯ ಬಿಜೆಪಿ ಕಾರ್ಯಾಧ್ಯಕ್ಷ ಪೌಲರಾಜ್‌ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆತ ಘಟನೆಗೆ  ಸಂಬಂಧಪಟ್ಟಂತೆ ಒಬ್ಬರನ್ನು ಬಂಧನ ಮಾಡಲಾಗಿದೆ.‌

ದಕ್ಷಿಣ ಜಿಲ್ಲೆ ವಲಯಗಳ ಪೆಟ್ರೋಲ್ ಡಿಪೋಗಳ ಮಾಲೀಕರಿಗೆ  ʼಚಿಲ್ಲರೆ ಮೋಡ್‌ನಲ್ಲಿ ಪೆಟ್ರೋಲ್ಅನ್ನು ಬಾಟಲುಗಳ ಮುಖಾಂತರ ಸರಬರಾಜು ಮಾಡಬಾರದು ಎಂದು ದಕ್ಷಿಣ ವಲಯದ ಐಜಿ ಪೋಲೀಸ್‌ ಆಸ್ರ ಗರ್ಗ್‌ ಸೂಚನೆ ನೀಡಿದ್ದರು.

ಈ ಹಿನ್ನಲೆ ದಕ್ಷಿಣ ಜಿಲ್ಲೆಗಳ ಪ್ರಮುಖ ವ್ಯಕ್ತಿಗಳ ಕಚೇರಿ ಮತ್ತು ಮನೆಗಳ ಸುತ್ತ  ಮತ್ತು ಇತರೆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಗೆಂದು ಸುಮಾರು 20000 ಸಾವಿರ ಪೋಲೀಸರನ್ನು ನಿಯೋಜಿಸಲಾಗಿತ್ತು. ಭದ್ರತೆ ಹೆಚ್ಚಾಗಿದ್ದರಿಂದ ಮುಖ್ಯ ಸ್ಥಳಗಳಲ್ಲಿ ಪೋಲೀಸರು ಸುತ್ತುವರೆಯಲ್ಪಟ್ಟಿದ್ದರು .

ಇಂತಹ ಹೆಚ್ಚಿನ ಭದ್ರತೆಯ ಮದ್ಯೆಯೂ  ಸೆಪ್ಟಂಬರ್‌ 25 ರಂದು ದಿಂಡಿಗಲ್‌ ಜಿಲ್ಲೆಯ ಬಿಜೆಪಿ ಕಾರ್ಯಾಧ್ಯಕ್ಷ ಪೌಲರಾಜ್‌ ಅವರ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆದು ತಲೆಮರೆಸಿಕೊಂಡಿದ್ದ 29 ವರ್ಷದ ಸಿಕಂದರ್‌ ಎಂಬಾತನನ್ನು ಇಂದು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುತ್ತದೆ  ಎಂದು ದಕ್ಷಿಣ ವಲಯದ ಐಜಿ ಪೋಲೀಸ್‌ ಆಸ್ರ ಗರ್ಗ್‌ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು