ಬಿಜೆಪಿ ಸಂಸದರ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ, ಸಿಬ್ಬಂದಿ ಮೇಲೆ ಹಲ್ಲೆ

ಉತ್ತರಪ್ರದೇಶ: ಬಿಜೆಪಿ ಸಂಸದರೊಬ್ಬರ ಕಚೇರಿಯ ಮೇಲೆ ದಾಳಿ ಮಾಡಿ ಅಲ್ಲಿನ ಪೀಠೋಪಕರಣ ಧ್ವಂಸ ಮಾಡಿ, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಭದೋಹಿ ಸಂಸತ್‌ ಕ್ಷೇತ್ರದಲ್ಲಿ ನಡೆದಿದೆ.

ಏಕಾಏಕಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕಂಪ್ಯೂಟರ್ ಅಪರೇಟರ್ ಪ್ರದೀಪ್‌ ಮಂಡ್ 27ಾವರೊಡನೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್‌ಗೆ ಥಳಿಸಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ, ಗಲಾಟೆಯಲ್ಲಿ ಪ್ರದೀಪ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ, ಪ್ರದೀಪ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಪರಾಧ ವಿಭಾಗದ ಪೋಲೀಸ್ ಅಧಿಕಾರಿ ವಿನೋದ್ ಯಾದವ್‌ ತಿಳಿಸಿದ್ದಾರೆ.

ಆರೋಪಿಗಳನ್ನು ತೌಸೀಫ್ ಸರೋಜ್, ವಿಶಾಲ್ ಮತ್ತು ಸತ್ಯಂ ಗುರುತಿಸಲಾಗಿದ್ದು,‌ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು