ಬಿಜೆಪಿ ಮುಖಂಡ ದಿ. ಬಿ ಬಿ ಶಿವಪ್ಪ ಅವರ ಪತ್ನಿ ಸುಶೀಲ ಶಿವಪ್ಪ ನಿಧನ

ಸಕಲೇಶಪುರ: ಸಕಲೇಶಪುರದ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸುಶೀಲಾ ಶಿವಪ್ಪ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ.

ರಾಜ್ಯರಾಜಕಾರಣದಲ್ಲಿ ಪ್ರಸಿದ್ಧ ಹೆಸರಾಗಿದ್ದ ಮಾಜಿ ಶಾಸಕ ಬಿ ಬಿ ಶಿವಪ್ಪ ಅವರ ಪತ್ನಿ ಸುಶೀಲಾ ಶಿವಪ್ಪ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವರು ಸುಶೀಲ ಶಿವಪ್ಪ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ತೆರಳಿದ್ದರು.

ಮೃತರ ಅಂತ್ಯಕ್ರಿಯೆ ನ 8ರಂದು ಸಕಲೇಶಪುರ ತಾಲ್ಲೂಕಿನ ಯಸನೂರು ಹೋಬಳಿಯ ಕುಂಬರ ಹಳ್ಳಿ ಎಸ್ಟೇಟಿನಲ್ಲಿ ವೀರಶೈವ ಲಿಂಗಾಯಿತ ವಿಧಿವಿಧಾನದಂತೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು