ಬೆಂಗಳೂರು : ಇಂದು (ಮಾ.6) ಸಿಎಂ ಸಿದ್ದರಾಮಯ್ಯ (Siddaramaiah) ಮಂಡಿಸಿದ 2026-27 ನೇ ಸಾಲಿನ ಬಜೆಟ್ (Karnataka budget 2026) ಅನ್ನು ವಿರೋಧ ಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೆಯೇಂದ್ರ (BY Vijayendra) ನೇತೃತ್ವದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ಮಾಡಲಾಗಿದೆ.
ಈ ಭಾರಿಯ ಬಜೆಟ್ ಖಾಲಿ ಚೊಂಬು.. ಚೊಂಬು ಚೊಂಬು..ಖಾಲಿ ಚೊಂಬು ಎಂದು ಘೋಷಣೆಗಳನ್ನು ಕೂಗಿದ್ದಾರೆ.ವಿಧಾನ ಸೌಧ ಮುಂಭಾಗ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಕರ್ನಾಟಕದ ಜನರಿಗೆ ಖಾಲಿ ಚೊಂಬು ಕೊಟ್ಟಿದೆ. ಇದೊಂದು ಚೊಂಬಿನ ಬಜೆಟ್ ಎಂದು ಪ್ರತಿಭಟಿಸಿದೆ. ಈ ಪ್ರತಿಭಟನೆ ವೇಳೆ ಬಿ.ವೈ ವಿಜಯೇಂದ್ರಗೆ ಶಾಸಕ ಸುನೀಲ್ ಕುಮಾರ್, ಎಂ ಎಲ್ ಸಿ ರವಿಕುಮಾರ್ ಮತ್ತಿತರರು ಸಾಥ್ ನೀಡಿದ್ದಾರೆ.ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೂರು ನಾಮ ಎಳೆದಿದೆ.ರಾಜ್ಯಕ್ಕೆ ಸಾಲದ ಬಜೆಟ್ ನೀಡಿದ ಮುಖ್ಯಮಂತ್ರಿಗೆ ಧಿಕ್ಕಾರ.ನಮ್ಮ ಕೃಷಿಕರಿಗೆ ಕೂಡ ಈ ಸರ್ಕಾರ ಮೂರು ನಾಮ ಎಳೆದಿದೆ, ಯುವಜನತೆಗೆ ಮೋಸ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
