ಹೊಸದಿಲ್ಲಿ, ಜೂ.17: ಲೋಕಸಭೆ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಸೋಮವಾರ ತಿಳಿಸಿವೆ.
ಉಪಸಭಾಪತಿ ಸ್ಥಾನವನ್ನು ಪಕ್ಷವು ಮಿತ್ರಪಕ್ಷಗಳಿಗೆ ನೀಡಬಹುದೆನ್ನುವ ಅಂಶ ಬಹಿರಂಗವಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಜೆಡಿಯು ಮತ್ತು ಟಿಡಿಪಿ ಜೊತೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದೇ 26ರಂದು ಸ್ಪೀಕರ್ ಚುನಾವಣೆ ನಡೆಯಲಿದೆ.
ಸ್ಪೀಕರ್ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸುವ ಪ್ರಸ್ತಾವನೆಗಳನ್ನು ಹಿಂದಿನ ದಿನ ಮಧ್ಯಾಹ್ನದವರೆಗೆ ಸಲ್ಲಿಸಬಹುದು. ಒಂದು ವೇಳೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡದಿದ್ದರೆ, ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಇಂಡಿಯಾ ಒಕ್ಕೂಟ ಬಯಸಿದೆ. ಸ್ಪೀಕರ್ ಅಭ್ಯರ್ಥಿಯ ನಿರ್ಧಾರವನ್ನು ಎನ್‌ಡಿಎ ಮೈತ್ರಿಕೂಟದಲ್ಲಿ ಆಂತರಿಕವಾಗಿ ಚರ್ಚಿಸಲಾಗುವುದು ಎಂದು ಟಿಡಿಪಿ ವಕ್ತಾರ ಪಟ್ಟಾಭಿರಾಂ ಹೇಳಿದ್ದಾರೆ.