“ಬಿಜೆಪಿ ಮಂದಿ ಎಲ್ಲೆಲ್ಲಾ ಗಲಭೆ ಎಬ್ಬಿಸಿದ್ದಾರೆ ಅವೆಲ್ಲಾ ಸತ್ಯ ಆಗಿದೆಯೇ? ಉತ್ತರ ಕನ್ನಡದಲ್ಲಿ ಪರೇಶ್ ಮೇಸ್ತಾ ಸಾವಿನ ನಂತರ ಗಲಭೆ ಎಬ್ಬಿಸಿದ್ರಲ್ಲ. ಬಿಜೆಪಿಯ ಯಾವ ಮಂದಿ ಈಗ ಪರೇಶ್ ಮೇಸ್ತಾ ಬಗ್ಗೆ ಮಾತಾಡ್ತಿದ್ದಾರೆ ತೋರಿಸಿ. ಬಿಜೆಪಿ ಮಂದಿ ಬೆಂಕಿ ಹಚ್ಚುವ ಕಡೆಗೆಲ್ಲ ಸತ್ಯ ಶೋಧನಾ ಮಾಡ್ತಾರಂತೆ. ರಾಜ್ಯದಲ್ಲಿ ಬರಗಾಲ ಬಂದಾಗ ಯಾಕೆ ಬಂದಿಲ್ಲ ಇವರ ಸತ್ಯ ಶೋಧನಾ ಸಮಿತಿ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಎಲ್ಲೇ ಗಲಭೆಗಳಾಗಲಿ ಬಿಜೆಪಿ ಸುಲಭವಾಗಿ ಅದರ ಅವಕಾಶ ಪಡೆದುಕೊಳ್ಳೋಕೆ ಶುರು ಮಾಡುತ್ತೆ. ನಾಗಮಂಗಲದಲ್ಲಾದ ಗಲಭೆ ಬಗ್ಗೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯೇ ಮಾತಾಡ್ತಿದ್ದಾರೆ. ಹಾಗಾದ್ರೆ ನರೇಂದ್ರ ಮೋದಿಗೆ ಯಡಿಯೂರಪ್ಪ ಪೋಕ್ಸೋ ಪ್ರಕರಣದ ಅರಿವಿಲ್ವಾ? ಮುನಿರತ್ನ ದಲಿತರ ಬಗ್ಗೆ, ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದು ಯಾಕೆ ನರೇಂದ್ರ ಮೋದಿ ಮಾತಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಿಜೆಪಿ ಮಂದಿ ಯಾವುದೇ ಗಲಭೆಯನ್ನು ತನ್ನ ಅವಕಾಶ ಪಡೆಯಲು ಬಹಳ ಸುಲಭವಾಗಿ ಇಳಿದುಬಿಡುತ್ತೆ ಎಂದು ಹೇಳಿದ್ದಾರೆ.