ಧೇಮಾಜಿ (ಅಸ್ಸಾಂ): ಇಬ್ಬರು ಮಕ್ಕಳು ಸೇರಿದಂತೆ 7 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೇಶಿಯ ದೋಣಿಯೊಂದು ಲಾಲಿ ನದಿಯಲ್ಲಿ ಪಲ್ಟಿಯಾಗಿರುವ ಘಟನೆ ಜೊನೈ ಉಪವಿಭಾಗದ ಕಂಗ್ಕನ್ ಚಪೋರಿ ಪ್ರದೇಶದ ಬಳಿ ನಡೆದಿದೆ.
ಘಟನೆಯಲ್ಲಿ ಒಂದು ವರ್ಷದ ಮಗು ನಾಪತ್ತೆಯಾಗಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಎಸ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಘಟನೆಯ ನಂತರ, ಸ್ಥಳೀಯರು ಆರು ಜನರನ್ನು ರಕ್ಷಿಸಿದ್ದಾರೆ ಆದರೆ ಒಂದು ವರ್ಷದ ಮಗು ನಾಪತ್ತೆಯಾಗಿದೆ ಎಂದು ತಿಳಿಸಿದರು.
ಘಟನೆ ಕುರಿತು ಸ್ಥಳಿಯರು ನಮಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಘಟನೆ ನಡೆದ ಸ್ಥಳಕ್ಕೆ ದಾವಿಸಿದ ಎಸ್‌ಡಿಆರ್‌ಎಫ್ ಮತ್ತು ಧೇಮಾಜಿ ಜಿಲ್ಲೆಯ ಅಗ್ನಿಶಾಮಕ ಸೇವೆಗಳ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಮಾಹಿತಿ ನೀಡಿದರು.