Saturday, November 23, 2024

ಸತ್ಯ | ನ್ಯಾಯ |ಧರ್ಮ

ಮಹಿಳೆಯರನ್ನು ಖಿನ್ನತೆಗೆ ತಳ್ಳುವ ಬಾಡಿ ಶೇಮಿಂಗ್‌ ಅನ್ನುವ ಕೆಟ್ಟ ಚಾಳಿ

ಅಂಜನಿ

ನೋಡಪ್ಪ ಇವ್ಳು ಎಷ್ಟು ಸಣ್ಣ ಇದಾಳೆ , ಹೇ ನೋಡೋ ಅವಳು ಎಷ್ಟು ದಪ್ಪ ಇದ್ದಾಳೆ, ಅವಳ ಬಾಡಿ ಕಾಡಂದಿ ತರ ಇದೆ, ಕಾಡೆಮ್ಮೆಯಂಗವಳೆ.. .ಹೀಗೆ ಅತ್ಯಂತ ಹೀನಾಯ ಕಮೆಂಟ್‌ ಪಾಸ್‌ ಮಾಡೋ ಅಂತವ್ರು ನಮ್ಮ ಸುತ್ತ ಮುತ್ತಲೇ ಇದ್ದಾರೆ .ಇಂಥವರಿಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದಂತಹ ಮಾನಸ ದಪ್ಪ ಇದ್ದರೆ….ಏನ್‌ ಪ್ರಾಬ್ಲಮ್ಮೋ ಗೊತ್ತಿಲ್ಲ…….ನಿವೇದಿತ ಗೌಡ ದಪ್ಪ ಆದ್ರೆ ಇವರಿಗೇನು ಖುಷಿನೋ….ಅಥವಾ ಸಮಸ್ಯೆನೋ ಗೊತ್ತಾಗ್ತಿಲ್ಲ……..ಹಾಗೇನೇ ದೊಡ್ಮನೆ ಕುಡಿ ಅಂತ ಈಗೀಗ ಟ್ರೋಲ್‌ಗೆ ಬಲಿಯಾಗ್ತೀರೋ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಗಳು ನೋಡೋಕೆ ಕಪ್ಪಗಿದ್ರೆ….ದಪ್ಪ ಇದ್ರೆ ಇವರು ಯಾಕೆ ಯೋಚನೆ ಮಾಡ್ತಾರೆ ಅನ್ನೋದೂ ಸಹ ಗೊತ್ತಾಗ್ತಿಲ್ಲ….

ಬಾಡಿ ಶೇಮಿಂಗ್! ಉಫ್‌… ಈಗೀಗ ಬಾಡಿ ಶೇಮಿಂಗ್‌ ಅನ್ನೋ ಒಂದು ಕೆಟ್ಟ ಮಾನಸಿಕ ಕಿರುಕುಳವನ್ನು ಕೋಟ್ಯಾಂತರ ಜನ ಗಂಡಸರೂ…ಹೆಂಗಸರೂ ಅನುಭವಿಸ್ತಾಲೇ ಇರ್ತಾರೆ….ಆದರೆ, ನಾನೀಗ ಪರ್ಟಿಕ್ಯುಲರ್‌ ಹೆಣ್ಣು ಮಕ್ಕಳ ಬಾಡೀ ಶೇಮಿಂಗ್‌ ಬಗ್ಗೆ ಮಾತಾಡ್ತಿದಿನಿ. ಹಾಗೇನೇ ಸೋಶಿಯಲ್‌ ಮೀಡಿಯಾ ಅವರಿಗೆ Sexual ಹರಾಸ್‌ ಮಾಡುವಂತಹ, ಮಾನಸಿಕವಾಗಿ ಹಲ್ಲೆ ಮಾಡುವಂತಹ, ಹಾಗೇನೇ ಕಮೆಂಟ್ಸ್‌ ಮುಖಾಂತರ ಹೆಣ್ಣು ಮಕ್ಕಳ ಮಾನಸಿಕ ರೇಪ್‌ ಮಾಡುವಂತಹ ಅಸಹ್ಯ ಮನಸ್ಥಿತಿಗಳ ಬಗ್ಗೆ ಮಾತಾಡ್ತಿದಿನಿ.

ಇನ್ನೂ ಕನ್ನಡದ ಬಿಗ್‌ ಬಾಸ್‌ನಲ್ಲಿ ಲಾಯರ್‌ ಜಗದೀಶ್‌ ಮತ್ತೆ ಆ ಮನೆಯಲ್ಲಿದ್ದ ಮಾನಸ, ಚೈತ್ರ, ಹಂಸ ಮತ್ತಷ್ಟು ಮಂದಿಯ ನಡುವೆ ಆದ ಕೆಲವೊಂದಿಷ್ಟು ಜಗಳದಲ್ಲಿ ಜಗದೀಶ್‌ ವಿರುದ್ಧ ಅವರು ನಡೆದುಕೊಂಡ ರೀತಿ ಅಷ್ಟು ಸರಿ ಇರಲಿಲ್ಲ… ಹೌದು ಒಪ್ಕೊಳೋಣ. ಮಾನಸ ಮಾತನಾಡಿದ್ದು ತಪ್ಪು ಅಂತಾದ್ರೆ ಆಕೆಯ ತಪ್ಪಿನ ಬಗ್ಗೆ ಪ್ರಶ್ನೆ ಮಾಡುವುದು ಒಕೆ. ಆದ್ರೆ, ಆಕೆಯ ದೇಹದ ಆಕಾರದ ವಿಚಾರಕ್ಕೆ ಯಾಕೆ ಬರ್ತೀರಿ ಅನ್ನೋದು ಪ್ರಶ್ನೆ. ಮಾನಸಾಳ ದೇಹವನ್ನು ಆಕೆಯ ಮುಖವನ್ನು ಹಂದಿಗೆ ಹೋಲಿಸೋದು ಸರಿನಾ?

ಇನ್ನು ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ ಮಾಡಿಕೊಂಡ್ರು. …ಪರಸ್ಪರ ಅವರೇ ಒಬ್ಬರಿಗೊಬ್ಬರು ಗೌರವಿಸಿ ಡಿವೋರ್ಸ್‌ ಪಡೆದುಕೊಂಡು ಅವರ ಮುಂದಿನ ಜೀವನ ನೋಡಿಕೊಳ್ತಾ ಇದ್ದಾರೆ. ಆದರೆ ಕೆಲವರು ನಿವೇದಿತಾ ಬಾಡಿ ವೇರಿಯೇಶನ್‌ಗಳನ್ನು ಇಟ್ಟುಕೊಂಡು ಆಕೆಗೆ ಕ್ಯಾರೆಕ್ಟರ್‌ ಲೆಸ್‌ ಸರ್ಟಿಫಿಕೇಟ್‌ಗಳನ್ನು ಕೊಟ್ಟು ಕಮೆಂಟ್‌ ಮಾಡ್ತೀರೋರು ಎಷ್ಟು ಸರಿ? ಹೀಗೆ ಹೇಳ್ತಾ ಹೋದ್ರೆ ಕೋಟಿಗಟ್ಟಲೆ ಹೆಣ್ಣು ಮಕ್ಕಳ ಲಿಸ್ಟ್‌ ಆಗ್ತಾ ಹೋಗುತ್ತೆ.

ಈ ರೀತಿ ಕಮೆಂಟ್‌ ಮಾಡುವವರು ಮೊದಲು ನಿಮ್ಮ ನಿಮ್ಮ ದೇಹದ ಸ್ಥಿತಿಯನ್ನು ಒಮ್ಮೆ ಸ್ವತಃ ನೀವೇ ನೋಡ್ಕೋಳೋದು ಉತ್ತಮ ಅನಿಸುತ್ತೆ. ಹಾಗೇನೇ ನಿಮ್ಮ ಮನೆಯಲ್ಲಿರುವಂತಹ ನಿಮ್ಮ ಅಮ್ಮ, ಅಕ್ಕ, ತಂಗಿ. ಹೆಂಡತಿ, ಮಕ್ಕಳ ದೇಹದ ಸ್ಥಿತಿಯನ್ನು , ಅವರ ಬಣ್ಣವನ್ನೂ ಒಮ್ಮೆ ಯೋಚನೆ ಮಾಡಿ …….ಎಲ್ಲರೂ ಫಿಟ್‌ ಅಂಡ್‌ ಫೈನ್‌..ಫೇರ್‌ ಆಗಿನೇ ಇದಾರ ಅಂತ ಮೊದಲು ನಮ್ಮನ್ನ ನಾವು ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು ಅನಿಸುತ್ತೆ.

ಹೆಣ್ಣು ಅಥವಾ ಗಂಡಿನ ದೇಹ ಫಿಟ್‌ ಇಲ್ಲದೇ ತೀರಾ ದಪ್ಪಾನೋ ಸಣ್ಣನೋ ಇದೆ ಅಂದ್ರೆ ಅವರಿಗೆ ಅವರದ್ದೇ ಆದಂತಹ ಕೆಲವು ಆರೋಗ್ಯ ಸಮಸ್ಯೆಗಳು ಕಾಋಣವಾಗಿರುತ್ತವೆ. ಇಬ್ಬರ ಬಗ್ಗೆನೂ ಯೋಚನೆ ಮಾಡಬೇಕು ಅಂತ ಬಂದಾಗ ಕೆಲವರಿಗೆ ಜನಟಿಕ್ಸ್‌ ಪ್ರಾಬ್ಲಮ್‌ ಅಂದ್ರೆ, ಹಲವರಿಗೆ ಒತ್ತಡದ ಜೀವನ…..ಅವರ ಲೈಫ್‌ ಸ್ಟೈಲ್‌…..ಫುಡ್‌ ರೋಟೀನ್‌…..ನಿದ್ದೆ…….ಟೈಮ್‌ ಮ್ಯಾನೇಜ್‌ಮೆಂಟ್‌ ಇವೆಲ್ಲವೂ ಒಂದು ರೀತಿ ಕಾರಣ ಆಗಿರುತ್ತವೆ. ಇವೆಲ್ಲವನ್ನೂ ಒಂದು ಕಡೆ ಇಟ್ಟು ಕೇವಲ ಹೆಣ್ಣಿನ ದೇಹದ ಬಗ್ಗೇನೇ ಮಾತಾಡ್ಬೇಕು ಅಂದ್ರೆ ಆಕೆಯ ಬಾಡಿ ಹಾರ್ಮೋನಲ್‌ ಚೇಂಚಸ್‌, ಆಕೆಯ ದೇಹದ ಏರು ಪೇರಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರತ್ತೆ……ಸಾಮಾನ್ಯವಾಗಿ 15 ವರ್ಷದಿಂದ 45 ವರ್ಷದ ಹೆಣ್ಣು ಮಕ್ಕಳಿಗೆ pcos ಅಂದ್ರೆ polycystic ovary syndrome ಮತ್ತೆ PCOD ಮೀನ್ಸ್‌ Polycystic Ovarian Disease ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳೋದ್ರಿಂದ ಅವರ ಪೀರಿಯಡ್ಸ್‌ irregular ಆಗುತ್ತೆ, ಅವರ ದೇಹದ ತೂಕ ಹೆಚ್ಚಾಗುತ್ತೆ…..ಅವರ ಮುಖದಲ್ಲಿ ಎಕ್ಸೆಸ್‌ ಆಫ್‌ ಹೇರ್‌ ಕಾಣಿಸಿಕೊಳ್ಳುತ್ತೆ… ಮೊಡವೆಗಳು, ಬ್ಲಾಕ್‌ ಪಿಗ್‌ ಮೆಂಟೇಶನ್‌ ಕಾಣಿಸಿಕೊಳ್ಳುತ್ತೆ ….ಸಮ್‌ ಟೈಮ್ಸ್‌ ಈ ಟೈಮಲ್ಲಿ ಅವರು ಏನೇ ವರ್ಕ್‌ಔಟ್‌ ಮಾಡಿದ್ರು ವರ್ಕ್‌ ಆಗದೇ ಇರುವಂತಹ ಸ್ಥಿತಿ ಇರುತ್ತೆ…..ಇನ್ನೂ ಕೆಲವರು ಈ ಸಮಸ್ಯೆಯ ಟ್ರೀಟ್‌ಮೆಂಟ್‌ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ಮೆಡಿಸಿನ್ಸ್‌ಯಿಂದ ದಪ್ಪ ಆಗಿರೋರು ಇರ್ತಾರೆ……….ಇನ್ನೂ ಸಾಮಾನ್ಯವಾಗಿ ಹೆಣ್ಣು ಮಕ್ಕಳು 40 ವಯಸ್ಸಿನ ನಂತರ ತನ್ನ Menopause ಸ್ಥಿತಿಗೆ ಹೋಗೋದ್ರಿಂದ ಅವರ ಆ ಮುಟ್ಟು ನಿಲ್ಲುವಿಕೆಯ ಸಂದರ್ಭದಲ್ಲಿ ದೇಹದಲ್ಲಿ ಇಷ್ಟ್ರೋಜನ್‌ ಎನ್ನುವ ಹಾರ್ಮೋನ್‌ ಉತ್ಪತ್ತಿ ಆಗೋದು ಕಡಿಮೆ ಆಗುತ್ತೆ…ಹಾಗೇನೇ ಅವರ ದೇಹದ ವ್ಯಾಯಾಮದ ಶಕ್ತಿ ಸಹ ಕಡಿಮೆ ಆಗ್ತಾ ಬರುತ್ತೆ… ಇದರಿಂದ ದೇಹದಲ್ಲಿರೊ ಕ್ಯಾಲೋರೀಸ್‌ ಬೇಗ ಬರ್ನ್‌ ಆಗಲಿಕ್ಕೆ ಶುರುವಾಗಿ ಕೆಲವರಿಗೆ ಫ್ಯಾಟ್‌ಕಂಟೆಂಟ್‌ ಶುರುವಾಗ್ತಾ ಬರುತ್ತೆ …ದೇಹದಲ್ಲಿ ಸೊಂಟದ ಸುತ್ತ ಬೊಜ್ಜು ಬೆಳೆಯೋದಕ್ಕೆ ಸ್ಟಾರ್ಟ್‌ ಆಗುತ್ತೆ.

ಇನ್ನೂ ಕೆಲವರಿಗೆ ಮೆನೋಪಾಸ್‌ ಟೈಮಲ್ಲಿ ಸರಿಯಾಗಿ ನಿದ್ರೆ ಮಾಡಲಿಕ್ಕೆ ಆಗೋದಿಲ್ಲ. ಆಗ ದೇಹದಲ್ಲಿ ಕಾರ್ಟಿಸೋಲ್‌ ಅನ್ನುವಂತಹ ಅಂಶ ಹೆಚ್ಚಾಗೋದ್ರಿಂದ ಶುಗರ್‌ ಲೆವೆಲ್‌ ಕಡಿಮೆ ಆಗಿ, ಆ ಸಮಯದಲ್ಲಿ ಕೊಬ್ಬಿನಾಂಶ ಇರುವಂತಹ ಆಹಾರವನ್ನು ತಿನ್ನಬೇಕು ಅಂತ ದೇಹ ಬಯಸುತ್ತೆ…. ಅಂತಹ ಆಹಾರವನ್ನು ಸೇವಿಸೋದ್ರಿಂದ ದಪ್ಪ ಆಗ್ತಾರೆ….ಮತ್ತೆ ಮೆನೋಪಾಸ್‌ ನಂತರ ಇಷ್ಟ್ರೋಜನ್‌ ಮತ್ತು ಕ್ಯಾಲ್ಶಿಯಂ ಕಂಟೆಂಟ್‌ ಕಡಿಮೆ ಆಗೋದ್ರಿಂದ ಅವರಿಗೆ ಮಂಡಿ ನೋವು ಸ್ಟಾರ್ಟ್‌ ಆಗಿ ಸರಿಯಾಗಿ ನಡೆಯಲಿಕ್ಕೆ ಆಗದೆ ಕೆಲವು ಹೆಂಗಸರು ದಪ್ಪ ಆಗ್ತಾರೆ…..ಕೆಲವರು ಮಕ್ಕಳನ್ನು ಹಡೆದ ನಂತರ ದಪ್ಪ ಆಗ್ತಾರೆ…ಹೀಗೆ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ದೇಹದಲ್ಲಿ ಸವಾಲುಗಳನ್ನು ಫೇಸ್‌ ಮಾಡ್ತಿರುವಾಗ ಅವರ ದೇಹದ ಬಗ್ಗೆ ಕೆಟ್ಟದಾಗಿ ಮಾತಾನಾಡೋದಿಕ್ಕೆ ನಿಮಗೆಲ್ಲಾ ಯಾವ ನೈತಿಕತೆ ಇದೆ ಅಂತ….ಈ ರೀತಿ ಒಂದು ಹೆಣ್ಣಿಗೆ ಆಕೆಯ ದೇಹ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಗಳಿಗೂ ಒಬ್ಬ ಗಂಡಿಗೆ ಆತನ ದೇಹಕ್ಕೆ ಎದುರಾಗುವ ಸವಾಲುಗಳಿಗೂ ತುಂಬಾ ಡಿಫರೆನ್ಸ್‌ಗಳು ಇರೋದ್ರಿಂದ ಒಬ್ಬ ಹೆಣ್ಣಿನ ದೇಹದ ಆಕಾರದ ಬಗ್ಗೆ ಕೀಳಾಗಿ ಮಾತನಾಡುವ ಮುನ್ನ First Educate your Mind about women Issues.

ನಮ್ಮ ನಿಮ್ಮೆಲ್ಲರ ಹಾಗೇ ಕುಟುಂಬ ಒಂದಿಷ್ಟು ಸ್ನೇಹಿತರು ತಮ್ಮದೇ ಪುಟ್ಟ ಪ್ರಪಂಚ ಹೊಂದಿದ ವ್ಯಕ್ತಿಗೆ ಸಂಬಂಧವೇ ಇಲ್ಲದೆ ಆಕೆಯ ರೂಪದ ಕುರಿತ ಹೋಲಿಕೆ ನಡೆಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಇನ್ನೂ ಮಾನಸಳನ್ನೇ ಉದಾಹರಣೆಯಾಗಿ ತೆಗೆದುಕೊಂಡ್ರೆ ಆಕೆ ಮತ್ತು ಆಕೆಯ ಪತಿ ಈ ರೀತಿಯ ಕಮೆಂಟ್‌ಗಳಿಗೆ ಕುಗ್ಗದೇ ಅದನ್ನು ಜೊತೆಯಾಗಿ ನಿಂತು ಎದುರಿಸಿದ್ದು ಧೈರ್ಯದ ನಡೆ. ಆದರೆ ಈ ಮನಸ್ಥಿತಿ ಎಲ್ಲರಿಗೂ ಇರೋದಿಲ್ಲ. ಇರೋದಿಕ್ಕೆ ಸಾಧ್ಯನೂ ಇಲ್ಲ. ನಿಮ್ಮ ಈ ರೀತಿಯ ಬಾಡಿ ಶೇಮಿಂಗ್‌ನಿಂದ ಅವಮಾನಗೊಂಡು ಮಾನಸಿಕ ಹಿಂಸೆಯಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟು ಇವೆ.

ಇನ್ನೂ ಈ ರೀತಿ ಬೇರೋಬ್ಬ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿರೋರಿಗೆ ನಿಮ್ಮ ನಿಮ್ಮ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳ ಸೇಫ್ಟಿ ಬಗ್ಗೆ ಮಾತನಾಡುವಂತಹ ಯಾವುದೇ ರೀತಿಯ ನೈತಿಕತೆ ನಿಮಗೆ ಇರೋದಿಲ್ಲ……ಯಾಕಂದ್ರೆ ನೀವು ಬೇರೊಬ್ಬ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನದಲ್ಲಿ, ನೀವು ಅವರ ಬಗ್ಗೆ ಯೋಚನೆ ಮಾಡುವ ರೀತಿಯಲ್ಲೇ ಮತ್ತೊಂದು ಕಡೆ, ಹೀಗೇನೇ ನಿಮ್ಮಂತಹದ್ದೇ ಮನಸ್ಥಿತಿಯುಳ್ಳ, ನಿಮ್ಮದೇ ರೀತಿ ಯೋಚನೆ ಮಾಡುವಂತಹ ಗುಂಪೊಂದು ಈ ಕಡೆ ನಿಮ್ಮ ನಿಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟ ರೀತಿಯಲ್ಲಿ ಕಮೆಂಟ್‌ ಪಾಸ್‌ ಮಾಡ್ತಿರ್ತಾರೆ ಅನ್ನೋದನ್ನೂ ನಿಮ್ಮ ತಲೆಯಲ್ಲಿ ಇರಲಿ.

ಹೆಣ್ಣು ಮಕ್ಕಳು ತನ್ನ ಪೀರಿಯಡ್ಸ್‌ ಟೈಮ್‌ನಲ್ಲಿ ಒಂದು ಸ್ಯಾನಿಟರಿ ಪ್ಯಾಡ್‌ಗಳನ್ನ ಅಂಗಡಿಯಲ್ಲಿ ಕೇಳಲು ಮುಜುಗರ ಮಾಡ್ಕೋತಾಳೆ….ಇನ್ನೂ ಈ ರೀತಿ ಹೆಣ್ಣನ್ನ ಹಿಯಾಳಿಸುವಂತಹ ಮನಸ್ಥಿತಿಗಳಿಗೆ ಹೆದರಿ ಹೆಣ್ಣು ಪೀರಿಯಡ್ಸ್‌ ಆಗೋದೇ ದೊಡ್ಡ ಅಪರಾಧವೇನೋ ಎಂಬಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ತರುವಾಗ ಅದನ್ನ ಯಾರೂ ನೋಡಬಾರದು…ನೋಡಿದ್ರೆ ನನ್ನ ಏನೆಲ್ಲಾ ಅನ್ಕೊತಾರೋ ಅನ್ನುವ ಮನಸ್ಥಿತಿಯಿಂದ ಅದನ್ನು ಕಾಣದಂತೆ ಬ್ಲಾಕ್‌ ಕವರ್‌ ಅಥವಾ ಪೇಪರ್‌ನಲ್ಲಿ ಫುಲ್‌ ಕವರ್‌ ಮಾಡಿ ಬಚ್ಚಿಟ್ಕೊಂಡು ತರುವಂತೆ ಆಗಿದೆ…

ಒಬ್ಬ ಮಹಿಳೆಯ ಇಡೀ ಅಸ್ತಿತ್ವವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುವುದು ಮತ್ತು ಹಾಸ್ಯಾಸ್ಪದವನ್ನಾಗಿಸುವುದು ಅಷ್ಟು ಸಾಮಾನ್ಯವಾಗಿದ್ದರೆ ನಮ್ಮಲ್ಲಿ ಮಾನವೀಯತೆ ಮತ್ತು ನೈತಿಕತೆ ಕೆಟ್ಟು ನಾರುತ್ತಿದೆ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಟ್ರೋಲ್‌ ಮಾಡುವ ಪ್ರತಿಯೊಬ್ಬರೂ ಕೆಟ್ಟವರಲ್ಲ…. ಕಮೆಂಟ್‌ ಮಾಡುವ ಎಲ್ಲರೂ ಕೆಟ್ಟವರು ಅಂತ ಇಲ್ಲಿ ನಾನು ಹೇಳ್ತಿಲ್ಲ….ಕೆಲ ಮನಸ್ಥಿತಿಗಳು ಟ್ರೋಲ್‌ ಮಾಡೋದು ಮಾಡ್ತೀವಿ ಕಮೆಂಟ್‌ ಮಾಡೋದು ಮಾಡ್ತೀವಿ ಎದುರಿಸೋದು ಬಿಡೋದು ನಿಮ್ಮಿಷ್ಟ ಅಂತ ಕೆಲವರು ಕ್ರೂರ ಮೃಗಗಳ ರೀತಿ ಯೋಚನೆ ಮಾಡ್ತಿರೋರು ಇರ್ತಾರೆ…ಹಾಗಾಗೀ ಪರ್ಟಿಕ್ಯುಲರ್‌ ಅಂತವರಿಗೆ ಮತ್ತೆ ಎಲ್ಲಾ ಗಂಡು ಮನಸ್ಥಿತಿಗಳು ಎಲ್ಲಾ ರೀತಿಯ ಹೆಣ್ಣಿನ ಸಮಸ್ಯೆಗಳನ್ನ ಅರಿತುಕೊಳ್ಳಬೇಕಾದದ್ದು ನಾವುಗಳು ನಮ್ಮ ತಾಯಿಗೆ ಅಥವಾ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಆಗುತ್ತೆ.

ಕೊನೆಯದಾಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಬರುವಂತಹ ಯಾವುದೇ ಪೋಸ್ಟ್‌ಗಳು ಅಸಮಾಧಾನ ಉಂಟು ಮಾಡಿದ್ರೆ….ಅಸಮಾಧಾನ ಉಂಟು ಮಾಡಿದ ವಿಷಯವನ್ನು ಅವರಿಗೆ ಅರಿವು ಮೂಡಿಸುವಂತೆ ಕಮೆಂಟ್‌ ಮಾಡಿ ತಿಳಿಸಿ…..ಅದನ್ನು ಬಿಟ್ಟು ಇನ್ನೊಬ್ರ ಬಾಡಿ ಶೇಮೀಂಗ್‌ ಮಾಡಿ ನಿಮಗೆ ಬರುವಂತಹದ್ದು ಏನೂ ಇಲ್ಲ….…..ಪುಟ್ಟ ಪುಟ್ಚ ಮಕ್ಕಳ ಕೈಲೂ ಈಗ ಫೋನ್‌ಗಳು ಬಳಕೆ ಆಗೋದ್ರಿಂದ …..ನೀವು ಒಂದು ಹೆಣ್ಣನ್ನ ಕೆಟ್ಟ ದೃಷ್ಟಿಕೋನದಲ್ಲಿ ನೋಡಿ ಕಮೆಂಟ್‌ ಮಾಡಿದ್ರೆ ನಿಮ್ಮ ನೆಕ್ಸ್ಟ್‌ ಜನರೇಶನ್‌ ಗೆ ನೀವು ಇದನ್ನೇ ಪ್ರವೋಕ್‌ ಮಾಡಿದಾಗೆ ಆಗುತ್ತೆ… …..ನಮ್ಮ ಸಾಮಾಜಿಕ ಜಾಲತಾಣಗಳ ಬಳಕೆ ಸಮಾಜದ ಒಳ್ಳೆ ರೀತಿಯ ಬದಲಾವಣೆಗೆ ಉಪಯೋಗಿಸಿಕೊಳ್ಳೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page