Monday, June 17, 2024

ಸತ್ಯ | ನ್ಯಾಯ |ಧರ್ಮ

ಬೊಮ್ಮಾಯಿ ಮಾಮ ತೋರಿದ ದುರಹಂಕಾರ ಇನ್ನು ನನ್ನ ಕಣ್ಣಮುಂದಿದೆ : ನಿರ್ದೇಶಕ ಪವನ್ ಒಡೆಯರ್

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ ಹೀನಾಯವಾಗಿ ಸೋತಿದ್ದಯ ಈ ಬಗ್ಗೆ ಸ್ಯಾಂಡಲ್​ವುಡ್​ನ ನಿರ್ದೇಶಕರ ಪವನ್ ಒಡೆಯರ್, ಬೊಮ್ಮಾಯಿ ಮಾಮಗೆ ದುರಹಂಕಾರ ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದರೆ ಬಿಜೆಪಿ ಪಕ್ಷವು 66 ಕ್ಷೇತ್ರಗಳಲ್ಲಷ್ಟೆ ಗೆಲ್ಲಲು ಶಕ್ತವಾಗಿದೆ. ಇದೀಗ ಹೊಸ ಸರ್ಕಾರ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿರುವ ವೇಳೆಯಲ್ಲಿ ಸ್ಯಾಂಡಲ್​ವುಡ್​ನ ನಿರ್ದೇಶಕ ಪವನ್ ಒಡೆಯರ್ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ತಮ್ಮ ಸಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಬರೆದುಕೊಂಡಿರುವ ಪವನ್ ಒಡೆಯರ್, ”ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ “ಡೊಳ್ಳು”ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ. ಸಿದ್ದರಾಮಯ್ಯ ಸರ್ ಗೆ ಒಂದೇಒಂದು ಬಾರಿ ಕರೆ ಮಾಡಿದ್ದೆವು. “ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ” ಎಂದು ಬಿಜೆಪಿ ಸರ್ಕಾರ ತೊಲಗಿದ್ದಕ್ಕೆ ಸಂತೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು