Wednesday, May 21, 2025

ಸತ್ಯ | ನ್ಯಾಯ |ಧರ್ಮ

ಕರುನಾಡಿನ ಮಡಿಲಿಗೆ ಬೂಕರ್ ಪ್ರಶಸ್ತಿ: ಬಾನು ಮುಷ್ತಾಕ್‌ಗೆ ಅಭಿನಂದಿಸಿದ ಡಿಸಿಎಂ

ಬೆಂಗಳೂರು: 2022ರ ನಂತರ ಭಾರತಕ್ಕೆ ಮತ್ತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದ್ದು, ಅದರಲ್ಲೂ  ಈ ಬಾರಿ ಕನ್ನಡದ ಹೆಮ್ಮಯ ಲೇಖಕಿ ಬಾನು ಮುಷ್ತಾಕ್ ಅವರು ಪ್ರಶಸ್ತಿಯನ್ನ ತಮ್ಮ ಮಡಿಲಿಗೇರಿಸಿಕೊಂಡ ಹಿನ್ನಲೆಯಲ್ಲಿ, ಇವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಭಿನಂದನೆಯನ್ನ ತಿಳಿಸಿದ್ದಾರೆ.

ಈ ಕುರಿತು ತಮ್ಮ ʼಎಕ್ಸ್‌ʼನಲ್ಲಿ   ಪೋಸ್ಟ್‌ ಮಾಡಿದ್ದು, ಕನ್ನಡ ಸಾಹಿತ್ಯದ ಗರಿಮೆಯನ್ನು ಬಾನೆತ್ತರಕ್ಕೇರಿಸಿದ್ದೀರಿ, ನಿಮ್ಮ “ಹಾರ್ಟ್ ಲ್ಯಾಂಪ್” ಸಣ್ಣ ಕಥೆಗಳ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ವಿಚಾರ ಎಂದು ಬಾನು ಮುಷ್ತಾಕ್ ಅವರನ್ನ ಹೋಗಳಿದ್ದಾರೆ.

ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ ಎಂದು ಸಂತೋಷ ವ್ಯಕ್ತಪಡಿಸಿರುವ ಅವರು,  ಬಾನು ಮುಷ್ತಾಕ್  ಹಾಗೂ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.

ಜೊತೆಗೆ ಇನ್ನಷ್ಟು ಉತ್ತಮ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ, ಸಾಹಿತ್ಯ ಸೇವೆಯು ಜಗದಗಲ ಹೆಸರು ಮಾಡಲಿ ಎಂದು  ಡಿ. ಕೆ. ಶಿವಕುಮಾರ್‌ ಅವರು ಶುಭಹಾರೈಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page