ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

‘ಇಂತಹ ವ್ಯಕ್ತಿ ಪಕ್ಕ ಕೂರುವುದೇ ತಪ್ಪು’ ; ಜಗ್ಗೇಶ್ ಗೆ ನಟಿ ರಕ್ಷಿತಾ ಪ್ರೇಮ್ ಡೈರೆಕ್ಟ್ ಹಿಟ್

PPeepal Media Desk

Peepal Media Desk • ಬ್ರೇಕಿಂಗ್ ಸುದ್ದಿ, ಸಿನಿಮಾ

• 1 ನಿಮಿಷದ ಓದು

‘ಇಂತಹ ವ್ಯಕ್ತಿ ಪಕ್ಕ ಕೂರುವುದೇ ತಪ್ಪು’ ; ಜಗ್ಗೇಶ್ ಗೆ ನಟಿ ರಕ್ಷಿತಾ ಪ್ರೇಮ್ ಡೈರೆಕ್ಟ್ ಹಿಟ್

ನಿರ್ದೇಶಕ, ನಟ ಗುರುಪ್ರಸಾದ್ ಸಾವಿನ ನಂತರ ನಟ ಜಗ್ಗೇಶ್ ತನ್ನ ಕಡೆಯಿಂದ ಬಂದ ಮಾತುಗಳಿಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜಗ್ಗೇಶ್ ವಿರುದ್ದ ತೀವ್ರ ಆಕ್ರೋಶ ಕಂಡುಬಂದಿದೆ. ಇದೀಗ ಖಾಸಗಿ ವಾಹಿನಿಯಲ್ಲಿ ಜಗ್ಗೇಶ್ ಪಕ್ಕ ತೀರ್ಪುಗಾರರಾಗಿ ಕೂರುವ ರಕ್ಷಿತಾ ಪ್ರೇಮ್ ಅವರು ಜಗ್ಗೇಶ್ ಗೆ ಡೈರೆಕ್ಟ್ ಹಿಟ್ ನೀಡಿದ್ದಾರೆ.

ಗುರು ಪ್ರಸಾದ್ ಸಾವಿನ ಬಳಿಕ ಅವರು ಅಹಂಕಾರಿ, ಎಡಪಂಥೀಯ ವಿಚಾರಧಾರೆ ಹೊಂದಿದ್ದರು, ದೇವರಿಗೇ ಬಯ್ಯುತ್ತಿದ್ದರು, ಸೋರಿಯಾಸಿಸ್ ಖಾಯಿಲೆಯಿದ್ದರೂ ನಮ್ಮ ತಟ್ಟೆಗೇ ನೇರವಾಗಿ ಕೈ ಹಾಕುತ್ತಿದ್ದರು, ಆತನಿಂದ ನನಗೆ ಕೆಟ್ಟ ಹೆಸರು ಬಂದಿದೆ ಎಂದೆಲ್ಲಾ ಜಗ್ಗೇಶ್ ಮಾತನಾಡಿದ್ದರು. ಸಾವಿನ ನಂತರ ಇಷ್ಟೆಲ್ಲ ಮಾತನಾಡುವ ಜಗ್ಗೇಶ್ ಗುರುಪ್ರಸಾದ್ ಜೀವಂತ ಇರುವಾಗ ಎಲ್ಲಿ ಹೋಗಿದ್ದರು, ಎನ್ನುವ ಮೂಲಕ ಜಗ್ಗೇಶ್ ವಿರುದ್ದ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ಅಷ್ಟೇ ಅಲ್ಲದೆ ಖಾಸಗಿ ವಾಹಿನಿಯಲ್ಲಿ ಜಗ್ಗೇಶ್ ಪಕ್ಕವೇ ಕೂತು ತೀರ್ಪು ನೀಡುವ ನಟಿ ರಕ್ಷಿತಾ ಪ್ರೇಮ್ ಬಗ್ಗೆಯೂ ಪ್ರಸ್ತಾಪಿಸಿ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಗ್ಗೇಶ್, ‘ಗುರುಪ್ರಸಾದ್ ಎಂದರೆ ರಕ್ಷಿತಾ ಪ್ರೇಮ್ ಗೆ ಭಯವಿತ್ತು. ಅವರನ್ನು ಶೋಗೆ ಕರೆಸೋಣವೆಂದು ಹೇಳಿದರೆ ಬೇಕಿದ್ರೆ ನೀವೇ ಇರಿ, ನಾನಂತೂ ಇಲ್ಲಿ ಇರಲ್ಲ ಎಂದು ಎದ್ದು ಹೋಗಿಬಿಡುತ್ತಿದ್ದರು’ ಎಂದು ಜಗ್ಗೇಶ್ ಹೇಳಿಕೆ ನೀಡಿದ್ದಾರೆ.

ಜಗ್ಗೇಶ್ ಅವರ ಈ ಹೇಳಿಕೆಯ ನಂತರ ನಟಿ ರಕ್ಷಿತಾ ಪ್ರೇಮ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ‘ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ಜೊತೆ ನಾವು ಟೇಬಲ್ ಮುಂದೆ ಕೂರುವುದೂ ತಪ್ಪು. ಯಾಕೆಂದರೆ ನಾಳೆ ನೀವು ಅಲ್ಲಿಂದ ಎದ್ದು ಹೋದ ಮೇಲೆ ನಿಮ್ಮ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡಬಹುದು’ ಎಂದು ಸಾಲೊಂದನ್ನು ಹಾಕಿಕೊಂಡಿದ್ದಾರೆ.

ಇದೊಂದು ಸಾಲು ನೇರವಾಗಿ ಜಗ್ಗೇಶ್ ನಿಲುವಿನ ವಿರುದ್ಧವೇ ಇದ್ದು, ಈ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಕೂಡ ಹೆಚ್ಚಾಗಿದೆ.

PPeepal Media Desk

Peepal Media Desk

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು