Thursday, June 19, 2025

ಸತ್ಯ | ನ್ಯಾಯ |ಧರ್ಮ

40% ಸರ್ಕಾರಕ್ಕೆ ಲಂಚವೇ ಸರ್ವಸ್ವ: ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳ ಭರ್ತಿಯಲ್ಲಿ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದಿರುವ ಹಿನ್ನಲೆ, ಲಂಚ ಪಡಿದುಕೊಂಡಾದರು ಉದ್ಯೋಗ ನೀಡಿ ಎಂದು ಟ್ವೀಟ್‌ ಮಾಡುವ ಮೂಲಕ ವಿರೋಧ ಪಕ್ಷ ಕಾಂಗ್ರೆಸ್‌ ರಾಜ್ಯ ಸರ್ಕಾರವನ್ನು ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗಾಕಾಂಕ್ಷಿಗಳು ನೋಟಿಫಿಕೇಶನ್‌ಗಾಗಿ ಕಾಯುತ್ತಿದ್ದಾರೆ. ಮಂಜೂರಾದ ಕೆಲವೇ ಹುದ್ದೆಗಳು ಮಾರಾಟವಾಗುತ್ತಿವೆ. ಪೆನ್, ಪುಸ್ತಕಗಳೇ ಅಭ್ಯರ್ಥಿಗಳ ಆಸ್ತಿ. ಲಂಚವಿಲ್ಲದೆ ಕೆಲಸ ಮಾಡದ 40% ಸರ್ಕಾರಕ್ಕೆ ಅವುಗಳೇ ಲಂಚವಾಗಿ ನೀಡುತ್ತಿದ್ದಾರೆ. ಈ ಲಂಚ ಪಡೆದಾದರೂ ಕೆಲಸ ಕೊಡಿ ಬೊಮ್ಮಾಯಿ ಅವರೇ! ಎಂದು ರಾಜ್ಯ ಕಾಂಗ್ರೆಸ್‌ ಘಟಕ ವ್ಯಂಗಿಸಿದೆ.

40% ಸರ್ಕಾರದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ, ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯ್ತಾ ಇದಾರೆ, ಲಂಚ ಪಡೆದಾದ್ರೂ ಕೆಲಸ ಕೊಡಿ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇ. ಬನ್ನಿ ಅವರ ಅಳನ್ನು ಕೇಳಿಸಿಕೊಳ್ಳಿ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತ ಪಡಿಸಿದೆ.

ಕಾಂಗ್ರೆಸ್‌ ಟ್ವೀಟ್

ವೇದಿಕೆ ಹುಲಿ  ಬೊಮ್ಮಾಯಿ ಅವರೇ, ಬನ್ನಿ KPSC ಅಭ್ಯರ್ಥಿಗಳ ಎದುರು ನಿಂತು ನಿಮ್ಮ ದಮ್ಮು ತಾಕತ್ತು ತೋರಿಸಿ. ಬಿಜೆಪಿಯ ‘ಡಾನ್ಸಿಂಗ್ ಸ್ಟಾರ್ಸ್’ ಸಚಿವರೇ, ಬನ್ನಿ ಪ್ರತಿಭಟನಾ ನಿರತ ಅಭ್ಯರ್ಥಿಗಳ ಎದುರು ನಿಮ್ಮ ನೃತ್ಯ ಕೌಶಲ್ಯ ತೋರಿಸಿ. ಜನಸ್ಪಂದನೆ ಎಂಬ ಜಾತ್ರೆ ಮಾಡಿದ 40% ಸರ್ಕಾರ ಈ ಯುವ ಸಮುದಾಯಕ್ಕೆ ಸ್ಪಂದನೆ ಮಾಡ್ತಿಲ್ಲ ಏಕೆ? ಎಂದು ಕಾಂಗ್ರೆಸ್‌ ಗುಡುಗಿದೆ.

ಲಂಚ ಪಡೆದು PSI ಪರಿಕ್ಷಾರ್ಥಿಗಳಿಗೆ ಬ್ಲೂಟೂತ್ ನೀಡಿದ 40% ಸರ್ಕಾರಕ್ಕೆ ಲಂಚ ಕೊಡಲಾಗದ ಅಭ್ಯರ್ಥಿಗಳು ಬ್ಲೂಟೂತ್ ಅನ್ನೇ ಲಂಚವಾಗಿ ಕೊಡ್ತಿದಾರೆ. ಪವರ್ ಲೆಸ್ ಸಿಎಂಗೆ ಅಭ್ಯರ್ಥಿಗಳು ಪವರ್ ಬ್ಯಾಂಕ್ ನೀಡಲು ತಯಾರಿದ್ದಾರೆ, ಅದನ್ನು ಪಡೆದಾದರೂ ಉದ್ಯೋಗ ನೀಡುವ ಪವರ್ ತೋರಿಸುವಿರಾ ಬೊಮ್ಮಾಯಿ ಅವರೇ? ನಿಮ್ಮ ‘ಜನಸ್ಪಂದನೆ’ ತೋರುವಿರಾ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

40% ಸರ್ಕಾರ ಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ. ಬೊಮ್ಮಾಯಿ ಅವರೇ, ಈ ರೊಟ್ಟಿಯ ಲಂಚದಲ್ಲಿ ಯುವಕರ ಬದುಕಿನ ಕನಸಿದೆ, ಭವಿಷ್ಯದ ಆತಂಕವಿದೆ, ಶ್ರಮವಿದೆ, ಪ್ರಾಮಾಣಿಕತೆಯಿದೆ. ಇದನ್ನು ಪಡೆದಾದರೂ ಉದ್ಯೋಗ ನೀಡಿ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page