Friday, July 5, 2024

ಸತ್ಯ | ನ್ಯಾಯ |ಧರ್ಮ

ಬ್ರಿಟನ್ ಪ್ರಧಾನಿಯಾಗಲಿರುವ ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ಯಾರು?

ಬ್ರಿಟಿಷ್ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಪ್ರಚಂಡ ಜಯ ಸಾಧಿಸಿದೆ. ಇದೀಗ ಆ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿಯಾಗಲಿದ್ದಾರೆ.

ಸ್ಟಾರ್ಮರ್ 2015ರಿಂದ ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾಂಕ್ರಸ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಸ್ಟಾರ್ಮರ್‌ಗೆ 61 ವರ್ಷ. ಅವರು ರೈಗೇಟ್ ಗ್ರಾಮರ್ ಸ್ಕೂಲ್, ಲೀಡ್ಸ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದರು. ಅವರ ಪತ್ನಿ ವಿಕ್ಟೋರಿಯಾ ಅಲೆಕ್ಸಾಂಡರ್ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಔದ್ಯೋಗಿಕ ಚಿಕಿತ್ಸಕರಾಗಿದ್ದಾರೆ. ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ.

ಸ್ಟಾರ್ಮರ್‌ ತಂದೆ ಉಪಕರಣ ತಯಾರಕರಾಗಿದ್ದರು. ತಾಯಿ ದಾದಿಯಾಗಿ ಕೆಲಸ ಮಾಡುತ್ತಿದ್ದರು.

ಈ ಲೇಬರ್ ಪಕ್ಷದ ನಾಯಕ ತಾನು “ಕಾರ್ಮಿಕ ವರ್ಗದ ಹಿನ್ನೆಲೆಯಿಂದ” ಬಂದವನು ಎಂದು ಪರಿಚಯಿಸಿಕೊಳ್ಳುತ್ತಾರೆ.

ಸ್ಟಾರ್ಮರ್‌ ರಾಯಗೇಟ್ ಗ್ರಾಮರ್ ಶಾಲೆಗೆ ಸೇರಿದ ಎರಡು ವರ್ಷಗಳ ನಂತರ ಅದು ಖಾಸಗಿ ಶಾಲೆಯಾಯಿತು. ಅವರಿಗೆ 16 ವರ್ಷ ತುಂಬುವವರೆಗೆ ಆತನ ಶಾಲಾ ಶುಲ್ಕವನ್ನು ಸ್ಥಳೀಯ ಕೌನ್ಸಿಲ್ ಪಾವತಿಸುತ್ತಿತ್ತು.

ಸ್ಟಾರ್ಮರ್ ತನ್ನ ಕುಟುಂಬದಲ್ಲಿ ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಿದ ಮೊದಲ ವ್ಯಕ್ತಿ. ಲೀಡ್ಸ್‌ನಲ್ಲಿ ಕಾನೂನು ಅಧ್ಯಯನ ಮಾಡಿದ ಅವರು ನಂತರ ಆಕ್ಸ್‌ಫರ್ಡ್‌ಗೆ ಹೋದರು.

1987ರಲ್ಲಿ ಬ್ಯಾರಿಸ್ಟರ್ ಪದವಿ ಪಡೆದ ನಂತರ ಅವರು ಮಾನವ ಹಕ್ಕುಗಳ ಕಾನೂನಿನಲ್ಲಿ ಪರಿಣತಿ ಪಡೆದರು. ಕೆರಿಬಿಯನ್ ಮತ್ತು ಆಫ್ರಿಕಾದಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಕೈದಿಗಳ ಪರವಾಗಿ ವಾದಿಸಿದರು.

ಮೆಕ್ ಡೊನಾಲ್ಡ್ ಪರಿಸರವನ್ನು ಹಾಳು ಮಾಡುತ್ತಿದೆ ಎಂದು ಕರಪತ್ರಗಳನ್ನು ಹಂಚಿದ್ದ ಮ್ಯಾಕ್ ಲೇಬಲ್ ಕಾರ್ಯಕರ್ತರ ವಿರುದ್ಧಾ ಆ ಸಂಸ್ಥೆ ಮೊಕದ್ದಮೆ ಹೂಡಿತು. 90ರ ದಶಕದ ಉತ್ತರಾರ್ಧದಲ್ಲಿ, ಅವರು ಆ ಕಾರ್ಯಕರ್ತರಿಗೆ ತಮ್ಮ ಕಾನೂನು ಸೇವೆಗಳನ್ನು ಉಚಿತವಾಗಿ ನೀಡಿದರು.

2008ರಲ್ಲಿ ಸ್ಟಾರ್ಮರ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್‌ಗಳ ನಿರ್ದೇಶಕರಾಗಿ ನೇಮಿಸಲಾಯಿತು.

2015ರಲ್ಲಿ ಸ್ಟಾರ್ಮರ್‌ ಮೊದಲ ಬಾರಿಗೆ ಸಂಸದರಾಗಿ ಗೆದ್ದರು.

ಅವರು 2015ರಲ್ಲಿ ಉತ್ತರ ಲಂಡನ್‌ನ ಹಾಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷದ ಹೀನಾಯ ಸೋಲಿನ ನಂತರ, ಕೀರ್ ಸ್ಟಾರ್ಮರ್ ಏಪ್ರಿಲ್ 2020ರಲ್ಲಿ ಪಕ್ಷದ ನಾಯಕನ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು.

Related Articles

ಇತ್ತೀಚಿನ ಸುದ್ದಿಗಳು