Home ಅಪರಾಧ ಸ್ನೇಹಿತನ ಭೇಟಿಗೆಂದು ದೆಹಲಿಗೆ ಬಂದು ಆತನಿಂದಲೇ ಅತ್ಯಾಚಾರಕ್ಕೀಡಾದ ಬ್ರಿಟಿಷ್‌ ಮಹಿಳೆ

ಸ್ನೇಹಿತನ ಭೇಟಿಗೆಂದು ದೆಹಲಿಗೆ ಬಂದು ಆತನಿಂದಲೇ ಅತ್ಯಾಚಾರಕ್ಕೀಡಾದ ಬ್ರಿಟಿಷ್‌ ಮಹಿಳೆ

0

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಸ್ನೇಹಿತನ ಸುಳ್ಳುಗಳನ್ನು ನಂಬಿ, ಆತನನ್ನು ಭೇಟಿಯಾಗಲು ಯುವತಿಯೊಬ್ಬಳು ಬ್ರಿಟನ್‌ನಿಂದ ಭಾರತಕ್ಕೆ ಬಂದು ಅವನಿಂದಲೇ ಅತ್ಯಾಚಾರಕ್ಕೆ ಈಡಾದ ಘಟನೆಯೊಂದು ವರದಿಯಾಗಿದೆ.

ಹೋಟೆಲ್ ಕೋಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೈಲಾಶ್, ಇನ್‌ಸ್ಟಾಗ್ರಾಮ್‌ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದ. ಆಕೆ ಇತ್ತೀಚೆಗೆ ಅವನನ್ನು ಭೇಟಿ ಮಾಡಲೆಂದು ಭಾರತಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ಮಹಿಳೆ ಮಹಿಪಾಲಪುರದಲ್ಲಿ ಹೋಟೆಲ್ ಕೊಠಡಿಯೊಂಧನ್ನು ಕಾಯ್ದಿರಿಸಿದ್ದರು.

ಆಕೆಯನ್ನು ಭೇಟಿಯಾಗಲು ಬಂದ ಕೈಲಾಶ್, ಆ ಮಹಿಳೆಯೊಂದಿಗೆ ಆಕ್ಷೇಪಾರ್ಹವಾಗಿ ವರ್ತಿಸಿದ್ದಾನೆ. ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆ ಅವರಿಂದ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿದರು. ಕೈಲಾಶ್ ಮೊದಲು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ನಂತರ ಅಲ್ಲಿಂದ ತಪ್ಪಿಸಿಕೊಂಡು ರಿಸೆಪ್ಷನ್ ತಲುಪಲು ಲಿಫ್ಟ್ ಹತ್ತಿದಾಗ ಅವನ ಸ್ನೇಹಿತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಭಾರತಕ್ಕೆ ಬಂದ ಮಹಿಳೆ ಮೊದಲು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಪ್ರಯಾಣ ಬೆಳೆಸಿದರು. ಅವರು ಕೈಲಾಶ್ ನನ್ನು ಕೂಡ ಅಲ್ಲಿಗೆ ಬರಲು ಹೇಳಿದ್ದರು. ಆದರೆ ಅವನು ತನಗೆ ಬರಲು ಸಾಧ್ಯವಿಲ್ಲ ನೀನೇ ಅವಳನ್ನು ದೆಹಲಿಗೆ ಬಾ ಎಂದಿದ್ದನು. ತನ್ನೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಕಷ್ಟಪಡುತ್ತಿದ್ದ ಕೈಲಾಶ್, ಗೂಗಲ್ ಅನುವಾದವನ್ನು ಬಳಸುತ್ತಿದ್ದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಬಹಿರಂಗಪಡಿಸಿದ್ದಾರೆ. ಈ ಘಟನೆಯನ್ನು ಈಗ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನ್ ಗಮನಕ್ಕೆ ತರಲಾಗಿದೆ.

You cannot copy content of this page

Exit mobile version