ಲಾಸ್ ವೇಗಾಸ್ . ಏಪ್ರಿಲ್ 20 : ಜಗತ್ತಿನ ಅತಿ ಹೆಚ್ಚು ಜನ ಪ್ರೇಕ್ಷಕ ವರ್ಗವನ್ನು ಹೋಂದಿರುವ WWE ಕ್ರೀಡೆಯ ಸ್ಟಾರ್ ಕ್ರೀಡಾಪಟು ಬ್ರಾಕ್ ಲೆಸ್ನರ್ ನಿವೃತ್ತಿ ಸೂಚನೆಯನ್ನು ನೀಡಿದ್ದಾರೆ.
ಏಪ್ರಿಲ್ 20 ಭಾನುವಾರದಂದು ಲಾಸ್ ವೇಗಾಸ್ ನಲ್ಲಿ ನಡೆದ ವ್ರೆಸಲ್ ಮೇನಿಯಾ 42ನೇ ಆವೃತ್ತಿಯಲ್ಲಿ ಹೊಸ ಉದಯೋನ್ಮುಖ ಆಟಗಾರ ಓಬಾ ಫೆಮಿ ಅವರ ವಿರುದ್ಧದ ಪಂದ್ಯದಲ್ಲಿ ಬ್ರಾಕ್ ಲೆಸ್ನರ್ ಪರಾಭವಗೊಂಡರು.
ನಂತರ ರಿಂಗ್ ನಲ್ಲಿಯೇ ತಮ್ಮ ಬೂಟು ಹಾಗು ಕೈಗವಸು ಬಿಚ್ಚಿಟ್ಟು ಭಾವುಕರಾದರು. ಓಬಾ ಫೆಮಿ ಮತ್ತು ಬ್ರಾಕ್ ಲೆಸ್ನರ್ ಅವರ ವೀರಾವೇಶದ ಪಂದ್ಯದಲ್ಲಿ ಬ್ರಾಕ್ ಲೆಸ್ನರ್ ಅವರ ಸೋಲನ್ನು ಅರಗಿಸಿಕೊಳ್ಳಲು ಪ್ರೇಕ್ಷಕರಿಂದ ಸಾಧ್ಯವಾಗಲಿಲ್ಲ ಎಂಬುದು ಪಂದ್ಯದ ನಂತರದಲ್ಲಿನ ಪ್ರೇಕ್ಷಕನ್ನು ಕಂಡಾಗ ಅರ್ಥವಾಗುತ್ತದೆ.
ಬ್ರಾಕ್ ಲೆಸ್ನರ್ ಅವರು ತಮ್ಮ ದೀರ್ಘಕಾಲದ ಮ್ಯಾನೇಜರ್ ಪಾಲ್ ಹೆಮನ್ ಅವರಿಗೆ ಅಪ್ಪುಗೆಯನ್ನು ನೀಡಿ ರಿಂಗ್ ನಿಂದ ಹೊರನಡೆದರು.
48 ವರ್ಷದ ಬ್ರಾಕ್ ಲಿಸ್ನರ್ ಹೆವೀವೈಟ್ ಚಾಂಪಿಯನ್ ಶಿಪ್ ಪಟ್ಟದ ಜೊತೆಗೆ ಹಲವಾರು ಚಾಂಪಿಯನ್ ಪಂದ್ಯಗಳನ್ನು ಗೆದ್ದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇನ್ನು ಮುಂದೆ WWE ಕ್ರೀಡೆಯಲ್ಲಿ ಬ್ರಾಕ್ ಲೆಸ್ನರ್ ಇಲ್ಲದಿರುವುದ್ನು ಊಹಿಸಲು ಬಹುಶಃ ಪ್ರೇಕ್ಷಕರಿಗೆ ಕಷ್ಟವಾಗಬಹುದು.
ಸಧ್ಯದ ಮಟ್ಟಿಗೆ ಬ್ರಾಕ್ ಲಿಸ್ನರ್ ಅವರ ಕಡೆಯಿಂದ ಅಧಿಕೃತವಾಗಿ ನಿವೃತ್ತಿ ಬಗ್ಗೆ ಹೇಳಿಕೆ ಬಂದಿಲ್ಲ. ಆದರೆ ಬ್ರಾಕ್ ಲೆಸ್ನರ್ ಅವರು ಕೊನೆಯ ಪಂದ್ಯದಲ್ಲಿ ಕಣ್ಣೀರಾಗಿದ್ದನ್ನು ಕಂಡಾಗ ನಿವೃತ್ತಿಯ ಸೂಚನೆ ಸಿಗುತ್ತದೆ.
