ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಚುನಾವಣಾ ಪ್ರಚಾರ ಕಾರ್ಯತಂತ್ರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ತಮಿಳುನಾಡು ರಾಜ್ಯದ ವಿವಿಧ ಸಭೆಗಳಿಂದ ಹರಿದಾಡಿದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕೆಲವರು ಹಾಸ್ಯಾಸ್ಪದವಾಗಿ ಇದನ್ನು “50 ಶೇಡ್ಸ್ ಆಫ್ ಮೋದಿ ಜಿ” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಕೆಲವು ತಮಿಳುನಾಡಿನ ನೆಟ್ಟಿಗರು, ಹೋದ ಕಡೆಗೆಲ್ಲಾ ಆ ಭಾಗಕ್ಕೆ ಸರಿಯಾಗಿ ಬಣ್ಣ ಬದಲಿಸುವ ಊಸರವಳ್ಳಿ ನಮ್ಮ ಮೋದಿಜಿ ಎಂದು ತೀವ್ರವಾಗಿ ಹಾಸ್ಯ ಮಾಡಿ ಮಾತನಾಡಿದ್ದು, ನರೇಂದ್ರ ಮೋದಿಯ ನಾನಾ ಅವತಾರಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ.
ಕೆಲವು ಮೂಲಗಳ ಪ್ರಕಾರ ಕಾರ್ಯಕ್ರಮಕ್ಕೆ ಮೊದಲು ಅವರು ಡಾರ್ಕ್ ಸ್ಕಿನ್ ಟೋನ್ ಬಣ್ಣದ ಮೇಕಪ್ ಬಳಸಿದ್ದಾರೆಂದು ತಿಳಿಸಿದೆ. ಇದು ಸ್ಥಳೀಯ ಜನಸಮೂಹದೊಂದಿಗೆ ಸಂಪರ್ಕ ಸಾಧಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ ಮುಖಚಹರೆಯಲ್ಲಿ (ಚರ್ಮದ ಬಣ್ಣ) ಬದಲಾವಣೆ ಕಂಡುಬಂದಿದೆಯೇ ಎಂಬುದರ ಬಗ್ಗೆ ನೆಟಿಜನ್‌ಗಳು ಚರ್ಚೆ ನಡೆಸುತ್ತಿದ್ದರೂ, “ಡಾರ್ಕ್ ಸ್ಕಿನ್ ಮೇಕಪ್” ಬಳಸಲಾಗಿದೆ ಎಂಬುದಕ್ಕೆ ಯಾವುದೇ ದೃಢಪಟ್ಟ ಸಾಕ್ಷ್ಯಗಳು ಅಥವಾ ನಂಬಿಕಸ್ತ ವರದಿಗಳು ಈವರೆಗೆ ಲಭ್ಯವಾಗಿಲ್ಲ. ಈ ಕುರಿತಾದ ಹೆಚ್ಚಿನ ಚರ್ಚೆಗಳು ಸಾಮಾಜಿಕ ಜಾಲತಾಣಗಳ ಊಹಾಪೋಹಗಳ ಮೇಲೇ ಹರಿದಾಡಿವೆ.
ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಬೆಳಕು ವ್ಯವಸ್ಥೆ, ಕ್ಯಾಮೆರಾ ಫಿಲ್ಟರ್‌ಗಳು ಹಾಗೂ ವೇದಿಕೆಯ ವಿನ್ಯಾಸವು ನರೇಂದ್ರ ಮೋದಿಯ ಬಣ್ಣ ಬದಲಾಗಿರಬಹುದು. ವಿಶೇಷವಾಗಿ ಹೊರಾಂಗಣ ಸಭೆಗಳಲ್ಲಿ ತೀವ್ರ ಬೆಳಕು, ನೆರಳುಗಳು ಹಾಗೂ ಕ್ಯಾಮೆರಾ ಸೆಟ್ಟಿಂಗ್‌ಗಳಿಂದ ಉಂಟಾಗುವ ವ್ಯತ್ಯಾಸಗಳು ದೃಶ್ಯಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟೀಕರಣ ಹೊರಬಂದಿಲ್ಲ. ಹೀಗಾಗಿ, ವಿಶ್ವಾಸಾರ್ಹ ಮಾಹಿತಿ ಲಭ್ಯವಾಗುವವರೆಗೆ ಈ ಚರ್ಚೆಗಳು ವಾಸ್ತವಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಗಳನ್ನೇ ಪ್ರತಿಬಿಂಬಿಸುತ್ತಿವೆ ಎಂದು ಹೇಳಲಾಗುತ್ತಿದೆ.
