Home ದೇಶ ಬಿಆರ್ ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತಕ್ಕೆ ಬಲಿ

ಬಿಆರ್ ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತಕ್ಕೆ ಬಲಿ

0

ಹೈದರಾಬಾದ್: ಸಿಕಂದರಾಬಾದ್ ಕಂಟೋನ್ಮೆಂಟ್ ಶಾಸಕಿ ಲಾಸ್ಯ ನಂದಿತಾ ನಿಧನರಾಗಿದ್ದಾರೆ. ಹೈದರಾಬಾದ್ ಹೊರ ವರ್ತುಲ ರಸ್ತೆಯಲ್ಲಿ ಅವರ ವಾಹನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಸೀಟ್ ಬೆಲ್ಟ್ ಧರಿಸದ ಕಾರಣ ಗಂಭೀರ ಗಾಯಗೊಂಡು ಕಾರಿನಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರು ಪ್ರಯಾಣಿಸುತ್ತಿದ್ದ ವಾಹನ ಅತಿವೇಗವಾಗಿ ಬಂದಿದ್ದು, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಶಂಕಿಸಲಾಗಿದೆ. ಲಾಸ್ಯ ನಂದಿತಾ ಇತ್ತೀಚೆಗೆ ನಲ್ಗೊಂಡದಲ್ಲಿ ಬಿಆರ್‌ಎಸ್ ಆಯೋಜಿಸಿದ್ದ ಬಹಿರಂಗ ಸಭೆಗೆ ಹೋಗಿದ್ದರು. ಹೋಗಿ ಬರುವಾಗ ಆಕೆಯ ಕಾರು ಅಪಘಾತಕ್ಕೀಡಾಗಿದೆ. ಆದರೆ ಆ ವೇಳೆ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಹೊರ ಬಂದಿದ್ದರು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ರಸ್ತೆ ಅಪಘಾತಕ್ಕೀಡಾಗಿದ್ದಾರೆ.

ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಗೆದ್ದ ಯುವ ಶಾಸಕರಲ್ಲಿ ಲಾಸ್ಯ ನಂದಿತಾ ಕೂಡ ಒಬ್ಬರು. ಕಂಟೋನ್ಮೆಂಟ್‌ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಗೆದ್ದಿರುವ ಸಾಯಣ್ಣ ಅವರ ಪುತ್ರಿ. ಅನಾರೋಗ್ಯದಿಂದ ಸಾಯಣ್ಣ ಚುನಾವಣೆಗೂ ಮುನ್ನವೇ ಮೃತಪಟ್ಟಿದ್ದರು. ಇದರೊಂದಿಗೆ ಲಾಸ್ಯ ನಂದಿತಾ ಅವರ ಪುತ್ರಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಬಿಆರ್‌ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಂದೆಯಂತೆಯೇ ಜನರ ಸಮಸ್ಯೆಗಳಿಗೆ ಹೋರಾಡುವ ಗುಣದಿಂದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಲಾಸ್ಯ ನಂದಿತಾ 2015ರಲ್ಲಿ ತಮ್ಮ ತಂದೆ ದಿವಂಗತ ಶಾಸಕ ಜಿ.ಸಾಯಣ್ಣ ಅವರ ಹಾದಿಯಲ್ಲೇ ರಾಜಕೀಯ ಪ್ರವೇಶಿಸಿದ್ದರು. 2015ರಲ್ಲಿ ನಡೆದ ಕಂಟೋನ್ಮೆಂಟ್ ಬೋರ್ಡ್ ಚುನಾವಣೆಯಲ್ಲಿ ನಾಲ್ಕನೇ ವಾರ್ಡ್ ಪಿಕೆಟ್ ನಿಂದ ಪಾಲಿಕೆ ಸದಸ್ಯೆಯಾಗಿ ಸ್ಪರ್ಧಿಸಿದ್ದರು. 2016ರ GHMC ಚುನಾವಣೆಯಲ್ಲಿ ಕವಾಡಿಗುಡ ವಿಭಾಗದಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಕಂಟೋನ್ಮೆಂಟ್ ಹಾಲಿ ಶಾಸಕರಾಗಿದ್ದ ಸಾಯಣ್ಣ ಅವರು ಅನಾರೋಗ್ಯದ ಕಾರಣ ಫೆಬ್ರವರಿ 19, 2023ರಂದು ನಿಧನರಾದರು ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಲಾಸ್ಯ ಬಿಆರ್‌ಎಸ್ ಪರವಾಗಿ ಗೆದ್ದರು.

You cannot copy content of this page

Exit mobile version