ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ BSP ಪಕ್ಷ, ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (I.N.D.I.A) ಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದೆ. ಈ ವರೆಗೆ I.N.D.I.A ಬಣದ ಭಾಗವಲ್ಲದ ಬಹುಜನ ಸಮಾಜ ಪಕ್ಷ (BSP) ಕೆಲವು ಪ್ರಮುಖ ಷರತ್ತುಗಳೊಂದಿಗೆ ಮೈತ್ರಿಗೆ ಸೇರುವ ಬಗ್ಗೆ ಮಾಹಿತಿ ನೀಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ 10 ಸ್ಥಾನಗಳನ್ನ ಗೆದ್ದಿತ್ತು. ಈಗ ಹಲವು ಷರತ್ತುಗಳೊಂದಿಗೆ ಮತ್ತೊಮ್ಮೆ INDIA ಮಿತ್ರಪಕ್ಷಗಳ ಜೊತೆಗೆ BSP ಮೈತ್ರಿ ಮಾಡಿಕೊಳ್ಳಲಿದೆ.
ಬಿಎಸ್ಪಿ ಸಂಸದ ಮಲೂಕ್ ನಗರ್ ಗುರುವಾರ ಮಾತನಾಡಿ, “ಮಾಯಾವತಿ ಜಿ ಅವರನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು” ಎಂದು ಹೇಳಿದರು. ಕುತೂಹಲಕಾರಿ ಸಂಗತಿಯೆಂದರೆ, ಎನ್ಡಿಎ ಮತ್ತು ಎನ್ಡಿಎ ಬಣಗಳೆರಡೂ ಬಡವರ ವಿರೋಧಿ, ಜಾತಿವಾದಿ, ಕೋಮುವಾದಿ, ಶ್ರೀಮಂತರ ಪರ ಮತ್ತು ಬಂಡವಾಳಶಾಹಿ ನೀತಿಗಳನ್ನ ಹೊಂದಿರುವ ಪಕ್ಷಗಳನ್ನು ಒಳಗೊಂಡಿವೆ, ಇದರ ವಿರುದ್ಧ ಬಿಎಸ್ಪಿಯ ಹೋರಾಟ ಮುಂದುವರೆದಿದೆ ಎಂದು ಮಾಯಾವತಿ ಹೇಳಿದ್ದಾರೆ.
ಈ ನಡುವೆ INDIA ಮಿತ್ರಪಕ್ಷಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ತಮ್ಮ ಪ್ರಧಾನಿ ಅಭ್ಯರ್ಥಿ ಎಂಬ ಅಭಿಪ್ರಾಯ ಹೊಂದಿವೆ.