ಮೈಸೂರು: ಇಲ್ಲಿನ JLB ರಸ್ತೆಯಲ್ಲಿರುವ ಮಹಾರಾಣಿ ಸೈನ್ಸ್ ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ವಿಭಾಗದಲ್ಲಿ ಕಟ್ಟಡ ಕುಸಿದಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ. ಇಂದು ಬೆಳಗಿನ ಹೊತ್ತು ಕಟ್ಟಡ ಕುಸಿದಿದ್ದು, ಇದಕ್ಕೆ ಕಟ್ಟಡ ಶಿಥಿಲವಾಗಿರುವುದೇ ಕಾರಣ ಎನ್ನಲಾಗುತ್ತಿದೆ.

ಪೀಪಲ್ ಮೀಡಿಯಾ ಈ ಕುರಿತು ಅಲ್ಲಿನ ಸಿಬ್ಬಂಧಿಯೊಬ್ಬರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆಯಾದರೂ ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ಕುಸಿದಿರುವ ಸಾಧ್ಯತೆಯಿದೆ.