ಟಿ-20 ವಿಶ್ವಕಪ್‌ನಿಂದ ಬುಮ್ರಾ ಹೊರಗುಳಿದಿಲ್ಲ: ಸೌರವ್‌ ಗಂಗೊಲಿ

ನವದೆಹಲಿ: ಮುಂಬರುವು ಟಿ-20 ವಿಶ್ವಕಪ್‌ನಿಂದ ಭಾರತ ತಂಡದ  ಪ್ರಮುಖ ಬೌಲರ್‌ ಜಸ್ಪ್ರೀತ್‌ ಬುಮ್ರಾ ಅವರು ಹೊರಬಿದ್ದಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಬುಮ್ರಾ ಅವರು ಅಭ್ಯಾಸ ನಡೆಸುತ್ತಿರುವ ವೇಳೆ ಬೆನ್ನುನೋವಿನಿಂದ ಬಳಲುತ್ತಿದ್ದು, ಮೂರು ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದರು.ಈ ಹಿನ್ನಲೆ ಬುಮ್ರಾ ಅವರಿಗೆ ಸ್ಕ್ಯಾನ್‌ ಮಾಡಲಾಗಿದ್ದು, ಬುಧವಾರ ತಿರುವನಂತಪುರಂನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರೀಕೆಟ್‌ ಅಕಾಡೆಮಿಗೆ (ಎನ್‌ಸಿಎ) ಕರೆದೊಯ್ಯಲಾಯಿತು ಎಂದು ಮಾಹಿತಿ ನೀಡಿದರು.

ಬುಮ್ರಾ ಅವರ ಬೆನ್ನುನೋವಿಗೆ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸೌರವ್‌ ಗಂಗೊಲಿ ಅವರು ಬುಮ್ರಾ ಇನ್ನೂ ವಿಶ್ವಕಪ್‌ನಿಂದ ಹೊರಗುಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು