ಮುಂಬೈ : ಪ್ರೀತಿಸಿ ಮದುವೆಯಾದ ಯುವಕ ಬುರ್ಖಾ ಧರಿಸಲಿಲ್ಲವೆಂಬ ಕಾರಣಕ್ಕೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆ ಇಕ್ಬಾಲ್ ಮೊಹಮ್ಮದ್ ಶೇಖ್ ಎಂಬ ಮುಸ್ಲಿಂ ಯುವಕ ಮತ್ತು ರೂಪಾಲಿ ಎಂಬ ಹಿಂದೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇಕ್ಬಾಲ್ ಮನೆಯಲ್ಲಿಯೇ ವಾಸವಿದ್ದರು. ಇಬ್ಬರೂ ಒಂದು ಮಗುವನ್ನೂ ಪಡೆದಿದ್ದರು. ದಿನ ಕಳೆದಂತೆ ಇಕ್ಬಾಲ್‌ನ ಕುಟುಂಬಸ್ಥರು ಮುಸ್ಲಿಂ ಆದ ಕಾರಣ ರೂಪಾಲಿಗೆ ಬುರ್ಖಾ ಧರಿಸಲು ಒತ್ತಾಯಿಸುತ್ತಿದ್ದರು. ಆದರೆ ರೂಪಾಲಿ ಅದಕ್ಕೆ ನಿರಾಕರಿಸಿದ ಕಾರಣ ಇಬ್ಬರ ಮಧ್ಯೆ ಜಗಳ ಉಂಟಾಗಿರುವುದು ಭೀಕರ ಹತ್ಯೆಗೆ ಕಾರಣವಾಗಿದೆ.
ರೂಪಾಲಿ ಹಿಂದೂ ಆಗಿದ್ದರಿಂದ ಮದುವೆಯ ನಂತರ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಇಕ್ಬಾಲ್ ಮತ್ತು ಅವನ ಕುಟುಂಬಸ್ಥರು ಅವಳ ಮೇಲೆ ಹಿಜಾಬ್ ಹೇರಿಕೆ ಮಾಡುತ್ತಿದ್ದದ್ದು ಪ್ರತಿದಿನ ಜಗಳಕ್ಕೆ ಕಾರಣವಾಗಿತ್ತು. ಇದರಿಂದ ಮನನೊಂದ ರೂಪಾಲಿ ಇಕ್ಭಾಲ್‌ನಿಂದ ವಿಚ್ಛೇದನ ಬೇಕೆಂದು ಹೇಳಿ ಅವರ ಮನೆಯವರಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು.
ಆದರೆ ಸೋಮಾವಾರ ರಾತ್ರಿ ರೂಪಾಲಿ ಜೊತೆ ಮಾತನಾಡಬೇಕೆಂದು ಹೇಳಿ ಚೆಂಬೂರು ಪ್ರದೇಶದ ಲೋಖಂಡೆ ಮಾರ್ಗದಲ್ಲಿನ ನಾಗೇವಾಡಿಯ ಬಳಿಗೆ ಅವಳನ್ನು ಕರೆಸಿಕೊಂಡಿದ್ದ. ಈ ವೇಳೆ ಬುರ್ಖಾ, ವಿಚ್ಚೇಧನ ಕುರಿತಂತೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಇಕ್ಭಾಲ್ ರೂಪಾಲಿಯ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದ ಪೋಲೀಸರು ಸ್ಥಳಕ್ಕೆ ಆಗಮಿಸಿ ರೂಪಾಲಿಯ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಇಕ್ಬಾಲ್‌ನನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೋಲೀಸರು ತಿಳಿಸಿದ್ದಾರೆ.