ಬೆಂಗಳೂರು : ನಗರದಲ್ಲಿ ಸಿಸಿಬಿ (CCB) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಮಾದಕವಸ್ತು ನಿಗ್ರಹದಳದ ಅಧಿಕಾರಿಗಳು ವಿದೇಶಿ ಪ್ರಜೆಯನ್ನು (Foreign citizen) ಬಂಧಿಸಿದ್ದು, ಈತನಿಂದ 11 ಕೆಜಿಗೂ ಅಧಿಕ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ನೈಜೀರಿಯಾ ಮೂಲದ ಎಜಿಕೆ ನೈಗೂ ಒಕಾಫಾರ್ ಎಂಬಾತ ಬೆಂಗಳೂರಲ್ಲಿ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ MDMA ಕ್ರಿಸ್ಟಲ್ ಮತ್ತು 1040 ಎಕ್ಸ್‌ಟಸ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಪದೇ ಪದೇ ಡ್ರಗ್ ಕೇಸ್ ನಲ್ಲಿ ವಿದೇಶಿ ಪ್ರಜೆಗಳು ಸಿಕ್ಕಿ ಬೀಳುತ್ತಿದ್ದು ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.ಈತ 2017ರಲ್ಲಿ ಬ್ಯುಸಿನೆಸ್ ವಿಸಾದಡಿಯಲ್ಲಿ ನೈಜೀರಿಯಾ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ., ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿ, ಆ ಬಳಿಕ ಇಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
