Home ಬ್ರೇಕಿಂಗ್ ಸುದ್ದಿ “ಬಿಜೆಪಿಗೆ ಭ್ರಷ್ಟಾಚಾರದ ಬಿರುದು ಕೊಟ್ಟವನೇ ಬಿವೈ ವಿಜಯೇಂದ್ರ” : ರಮೇಶ್ ಜಾರಕಿಹೋಳಿ

“ಬಿಜೆಪಿಗೆ ಭ್ರಷ್ಟಾಚಾರದ ಬಿರುದು ಕೊಟ್ಟವನೇ ಬಿವೈ ವಿಜಯೇಂದ್ರ” : ರಮೇಶ್ ಜಾರಕಿಹೋಳಿ

0

“ನಾವು ಯಡಿಯೂರಪ್ಪ ಮಗ ವಿಜಯೇಂದ್ರ ನಾಯಕತ್ವವನ್ನು ಹಿಂದೆಯೂ ಒಪ್ಪಿಲ್ಲ, ಮುಂದೆಯೂ ಒಪ್ಪಲ್ಲ. ಅಧ್ಯಕ್ಷ ಯಾರಾಗ್ಬೇಕು ಅಂತ ಪಕ್ಷ ನಿರ್ಧಾರ ಮಾಡುತ್ತೆ. ಆತನಿಗೆ ಪಕ್ಷದ ಸಿದ್ಧಾಂತ ಅನ್ನೋದು ಗೊತ್ತಿಲ್ಲ. ಬಿಜೆಪಿಗೆ ಭ್ರಷ್ಟಾಚಾರದ ಬಿರುದು ಕೊಟ್ಟವನೇ ಬಿವೈ ವಿಜಯೇಂದ್ರ. ಆದರೆ ಯಡಿಯೂರಪ್ಪರಿಗೆ ನಾವು ವಿರೋಧ ಮಾಡಲ್ಲ” ಹೀಗೆಂದು ಸ್ವಪಕ್ಷೀಯ ನಾಯಕತ್ವದ ವಿರುದ್ಧವೇ ಕಿಡಿಕಾರಿದ್ದು ಸಾಹುಕಾರ್ ರಮೇಶ್ ಜಾರಕಿಹೊಳಿ.

ಭಾರತೀಯ ಜನತಾ ಪಾರ್ಟಿಗೆ ಒಬ್ಬನದೇ ನಾಯಕತ್ವ ಕೊಡೋದು ಈ ಸಂದರ್ಭಕ್ಕೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಂತೆ. ಹೀಗಿರುವಾಗ ನನಗೂ ಅಧಿಕಾರ ಬೇಡ, ಯತ್ನಾಳ್ ಗೂ ಬೇಡ. ಬಿಜೆಪಿಗೆ ಹೈಕಮಾಂಡ್ ಸಾಮೂಹಿಕ ನಾಯಕತ್ವ ಕೊಡಲಿ. ಆಗ ಪಕ್ಷ ಬೆಳೆಸೋಧು ಹೇಗೆ ಅಂತ ತೋರಿಸ್ತೀವಿ. ಆದರೆ ಯಾವುದೇ ಕಾರಣಕ್ಕೂ ವಿಜಯೇಂದ್ರ ಒಪ್ಪೋ ಮಾತೇ ಇಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಈ ನಡುವೆ “ಯಡಿಯೂರಪ್ಪರಿಗೆ ನಮ್ಮ ವಿರೋಧ ಇಲ್ಲ. ಆದರೆ ಅವರಿಗೆ ವಯಸ್ಸಾಗಿದೆ. ಅವರು ನಿವೃತ್ತಿ ತಗೆದುಕೊಳ್ಳಲಿ. ಅಗತ್ಯ ಬಿದ್ದರೆ ಅವರ ಸಲಹೆ ತಗೆದುಕೊಳ್ಳುತ್ತೇವೆ. ಆದರೆ ಏಕ ವ್ಯಕ್ತಿಯಿಂದ ಬಿಜೆಪಿ ಪಕ್ಷ ಕಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ ಪಕ್ಷಕ್ಕೆ ಸಾಮೂಹಿಕ ನಾಯಕತ್ವ ಬೇಕು” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ “ವಿಜಯೇಂದ್ರ ಕೈಯಲ್ಲೇ ಪಕ್ಷ ಇದ್ದರೆ ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳಬೇಕಾದೀತು. ಕಳೆದ ಚುನಾವಣೆಯಲ್ಲೇ ವಿಜಯೇಂದ್ರ ಹಣೆಬರಹ ಗೊತ್ತಾಗಿದೆ. ಇಷ್ಟಾದಮೇಲೂ ಆತನನ್ನು ಉಳಿಸಿಕೊಂಡರೆ ಪಕ್ಷಕ್ಕೇ ಆಪತ್ತು. ಹೀಗಾಗಿ ಪಕ್ಷಕ್ಕೆ ಸಾಮೂಹಿಕ ನಾಯಕತ್ವ ಬೇಕು” ಎಂದು ರಮೇಶ್‌ ಜಾರಕಿಹೊಳಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ.

You cannot copy content of this page

Exit mobile version