Home ಬೆಂಗಳೂರು ಸೋಮವಾರ ಸಚಿವ ಸಂಪುಟ ವಿಸ್ತರಣೆ 20 ಸಚಿವರಿಗೆ – ಪ್ರಮಾಣವಚನ ನಿರೀಕ್ಷೆ

ಸೋಮವಾರ ಸಚಿವ ಸಂಪುಟ ವಿಸ್ತರಣೆ 20 ಸಚಿವರಿಗೆ – ಪ್ರಮಾಣವಚನ ನಿರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲವನ್ನು ಸೋಮವಾರ ಸಂಜೆ ವಿಸ್ತರಿಸಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.ಲೋಕಭವನದ ಗಾಜಿನಮನೆಯಲ್ಲಿ ಅಂದು ಸಂಜೆ 5 ಗಂಟೆಗೆ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಸಿದ್ಧತೆ

ಪ್ರಮಾಣವಚನ ಕಾರ್ಯಕ್ರಮಕ್ಕೆ ಡಿಪಿಆರ್ ಎಲ್ಲಾ ಸಿದ್ಧತೆ ನಡೆಸಿರುವುದಲ್ಲದೆ, ಸರ್ಕಾರ ಬಯಸುವವರಿಗೆ ಆಹ್ವಾನಪತ್ರ ಕಳುಹಿಸಲು ತಯಾರಿ ಮಾಡಿದೆ.ರಾಜ್ಯದಲ್ಲಿ ತಲೆದೋರಿರುವ ಬರ ಹಾಗೂ ಕಾವೇರಿ ಜಲ ವಿವಾದ ಹಿನ್ನೆಲೆಯಲ್ಲಿ ಸಮಾರಂಭವನ್ನು ಆದಷ್ಟು ಸರಳವಾಗಿ ಹಾಗೂ ಹೆಚ್ಚು ಜನ ಜಮಾಯಿಸದಂತೆ ನೋಡಿಕೊಳ್ಳಿ ಎಂದು ಡಿಪಿಆರ್ ಮತ್ತು ಗೃಹ ಇಲಾಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.ಮಂತ್ರಿ ಆಗುವವರ ಬೆಂಬಲಿಗರು ಲೋಕಭವನದ ಹೊರಗೆ ಹಾಗೂ ಆಸುಪಾಸಿನಲ್ಲಿ ಸಂಭ್ರಮಾಚರಣೆ ಮಾಡದಂತೆ, ಪಟಾಕಿ ಸಿಡಿಸದಂತೆ ಕಟ್ಟಾದೇಶ ಮಾಡಲಾಗಿದೆ.

ಪಟ್ಟಿ ಮುಖ್ಯಮಂತ್ರಿ ಕೈಸೇರಿಲ್ಲ

ಸಂಭಾವ್ಯ ಸಚಿವರ ಪಟ್ಟಿ ಇನ್ನೂ ಮುಖ್ಯಮಂತ್ರಿ ಕೈಸೇರಿಲ್ಲ, ಆದರೆ, ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇವಾಲ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಂದ ಒಪ್ಪಿಗೆ ಪಡೆದ ಪಟ್ಟಿಯನ್ನು ರಾಜ್ಯಕ್ಕೆ ಖುದ್ದು ತರಲಿದ್ದಾರೆ.ನಗರಕ್ಕೆ ಧಾವಿಸುತ್ತಿದ್ದಂತೆ ತಾವು ತಂಗಲಿರುವ ಹೋಟೆಲ್‌ಗೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಕರೆಸಿಕೊಂಡು ವರಿಷ್ಠರ ಸಂದೇಶ ನೀಡಲಿದ್ದಾರೆ.ಸರ್ಕಾರ ಮತ್ತು ಪಕ್ಷ ಸಂಘಟನೆ ಗಮನದಲ್ಲಿ ಇಟ್ಟುಕೊಂಡು ರಾಹುಲ್ ಗಾಂಧಿ ಮತ್ತು ಖರ್ಗೆ, ಮುಖ್ಯಮಂತ್ರಿ ಶಿವಕುಮಾರ್ ತಂಡಕ್ಕೆ ಸಮರ್ಥರನ್ನು ಆಯ್ಕೆ ಮಾಡಿದ್ದಾರೆ.

You cannot copy content of this page

Exit mobile version