Saturday, November 23, 2024

ಸತ್ಯ | ನ್ಯಾಯ |ಧರ್ಮ

ಒಕ್ಕಲಿಗರ ಸೌಹಾರ್ದತೆ, ಚನ್ನಪಟ್ಟಣದ ಫಲಿತಾಂಶ ಭವಿಷ್ಯದ ಜಾತಿ ರಾಜಕಾರಣ ಧ್ರುವೀಕರಣದ ಸಂಕೇತ

ಒಂದು ವೇಳೆ ಕರುನಾಡಲ್ಲಿ ಒಕ್ಕಲಿಗರ ಮನಸ್ಥಿತಿ ಕೋಮುವಾದದತ್ತ ಹೊರಳಿದರೇ, ಅನುಮಾನವೇ ಬೇಡ ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟ ಒಣಗಿ ಹೋಗಲಿದೆ.

ಕರ್ನಾಟಕಕ್ಕೆ ಕೋಮುವಾದದ ಅಲೆಗಳು ಎಷ್ಟು ಬಾರಿ ಬಡಿಯುತ್ತಿದ್ದರೂ ಅದನ್ನು ಬಂಡೆಯಂತೆ ನಿಂತು ಪ್ರತಿರೋಧ ಒಡ್ಡುತ್ತಿರುವ ನಿರ್ಣಾಯಕ ಸಮುದಾಯ ಒಕ್ಕಲಿಗರದ್ದು. ಹೀಗೆ ಅನಿಸಲು ಕಾರಣ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು. ಆ ಚುನಾವಣೆ ಇಬ್ಬರು ಹಿಂದೂ ಸಮಾಜದ ಅಭ್ಯರ್ಥಿಗಳ ಮಧ್ಯೆ ನಡೆದರೂ ಅದನ್ನು ಗೌಡ ಮತ್ತು ಮುಸ್ಲಿಮರ ಹೋರಾಟ ಎಂಬ ಭಾವನೆ ಬಿತ್ತಲಾಯಿತು. ಆದರೇ ಒಕ್ಕಲಿಗ ಸಮುದಾಯದ ರಕ್ತದಲ್ಲೆ ಜಾತ್ಯಾತೀತತೇ ಸೌಹಾರ್ದತೆ ಒಟ್ಟಾಗಿ ಹರಿಯುತ್ತಿದೆ.. ಇಂದಲ್ಲ ಮಹಾಕವಿ ಕುವೆಂಪು ಅಂದು ಕೊಟ್ಟ ವಿಶ್ವ ಮಾನವ ಸಂದೇಶ ಆ ರಕ್ತದಲ್ಲಿ ವಿಲೀನಗೊಂಡಿದೆ.ಅದು ಫಲಿತಾಂಶವಾಗಿ ಪ್ರಕಟವಾಯಿತು.

ಜಾತಿ ಧರ್ಮ ಕಂದಾಚಾರದಿಂದ ಸಿಡಿದೆದ್ದು ಬಂದ ಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಈ ರಾಜ್ಯದ ಬಹುದೊಡ್ಡ ಜನಾಂಗ. ಇವರು ಏನಾದರೂ ಬಸವಣ್ಣನವರನ್ನು ಪಾಲಿಸಿದ್ದೇ ಆಗಿದ್ದಲ್ಲಿ ಇಂದು ಬಿಜೆಪಿಗೆ ಈ ರಾಜ್ಯದಲ್ಲಿ ನೆಲೆಯೇ ಇರುತ್ತಿರಲಿಲ್ಲ. ಆದರೇ ಆ ಜನಾಂಗದ ಕೆಲವೊಂದು ನಾಯಕರದ ಬಸವನ ಗೌಡ ಯತ್ನಾಳ್ ಅಂತವರ ಕೋಮುದ್ವೇಷ ತುಂಬಿದ ಹೊಡಿ ಬಡಿ ಕಡಿ ಮಾತುಗಳು ಬಸವಣ್ಣನ ಆಶಯದ ಬೆಂಕಿ ಹಚ್ಚಿದಂತೆ ಕಾಣುತ್ತದೆ. ಇನ್ನೂ ನಮ್ಮನ್ನು ಆಳಿದಂತಹ ಯಡಿಯೂರಪ್ಪ, ಬಸವರಾಜ್ ಬೊಮ್ಮಯಿ ಅಂತವರು ಅಧಿಕಾರದ ಆಸೆಗಾಗಿ ಬಸವಣ್ಣನವರ ಆಶಯಕ್ಕೆ ಸಮಾದಿ ಕಟ್ಟಿ ಪರಮ ಕೋಮುವಾದವನ್ನು ಪೋಷಿಸಿಕೊಂಡು ಹಿಜಾಬ್ ಹಲಾಲ್ ಅಂತೆಲ್ಲ ಬೊಬ್ಬಿಟ್ಟ ಊರು ಹಾಳು ಮಾಡುವವರನ್ನು ಬೆಳೆಸಿಕೊಂಡು ಬಸವಣ್ಣನ ತತ್ವಕ್ಕೆ ದ್ರೋಹ ಬಗೆದು ಬಿಟ್ಟರು. ಇವರ ಈ ನಡೆಗಳು ನೈಜ ಬಸವಣ್ಣನವರ ಅನುಯಾಯಿಗಳಾದ ಲಿಂಗಾಯತ ಸಮುದಾಯ ಪ್ರಜ್ಞಾವಂತರು ತಲೆ ತಗ್ಗಿಸುವಂತೆ ಮಾಡಿದೆ. ಹಾಗೆಯೇ ಸೈಧಾಂತಿಕ ಬದ್ದತೆಯಿಲ್ಲದ ಅಮಾಯಕ ಲಿಂಗಾಯತ ಸಮುದಾಯದ ಯುವ ಸಮೂಹವನ್ನು ಕೇವಲ ರಾಜಕೀಯ ಲಾಭ ಮಾತ್ರ ಯೋಚಿಸಿದ ನಾಯಕರೆನಿಸಿಕೊಂಡ ಕೆಲವರು ದ್ವಂದ್ವಕ್ಕೆ ತಳ್ಳಿದ್ದಾರೆ.

ಆದರೇ ಕುವೆಂಪು ಬಸವಣ್ಣನಂತೆ ಧರ್ಮ ಸ್ಥಾಪಕರಲ್ಲ. ಯಡಿಯೂರಪ್ಪ , ಬಸವರಾಜ್ ಬೊಮ್ಮಾಯಿಗಳ ಹಾಗೆ ಕೋಮುವಾದವನ್ನು ಅಪ್ಪಿಕೊಂಡು ಡಿ ಕೆ ಶಿವಕುಮಾರ ಅಂತವರು ಕೋಮುವಾದವನ್ನು ಬಳಸಿಕೊಂಡು ಮುಂದಡಿ ಇಡುವುದು ಕಷ್ಟದ ಕೆಲಸವೂ ಆಗಿರಲಿಲ್ಲ. ಇಟ್ಟಿದ್ದರೇ ಇವತ್ತು ರಾಜ್ಯದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಇರುತ್ತಿತ್ತು. ಕ್ಷಣ ಕ್ಷಣಕ್ಕೂ ಮತಾಂಧತೆಗೆ ಪ್ರೇರಪಣೆ ನೀಡುವ ಸಾಮಾಜಿಕ ಜಾಲತಾಣಗಳು ಅಂಗೈಯಲ್ಲೆ ಇದ್ದರೂ, ದೊಡ್ಡ ಗೌಡರು ದಾರಿ ತಪ್ಪಿ ಮತಾಂಧತೆಯ ಬಿಜೆಪಿಗೆ ಹೋದರೂ, ಒಕ್ಕಲಿಗ ಯುವ ಸಮುದಾಯ ಮಾತ್ರ ಕುವೆಂಪು ಅವರನ್ನು ಅನುಸರಿಸುತ್ತಿರೋದು ಚಣ್ಣಪಟ್ಟಣದಲ್ಲಿ‌ ಕಣ್ಣಿಗೆ ಕಟ್ಟಿದಂತಿದೆ.

ಒಕ್ಕಲಿಗರನ್ನು ಮತಾಂಧರನ್ನಾಗಿಸಲು ಮತ್ತು ಆ ಮೂಲಕ ಮುಸ್ಲಿಂ ಒಕ್ಕಲಿಗರ ಸಂಬಂಧಕ್ಕೆ ಹುಳಿ ಹಿಂಡಲು ನಾಲಿಗೆ ಮೇಲೆ ಹಿಡಿತವಿಲ್ಲದ ಜಮೀರ್ ಅಹಮದ್ ಖಾನ್ ಹೇಳಿಕೆಯನ್ನು ವ್ಯಾಪಕ ಬಳಸಲಾಯಿತು.ಇದಕ್ಕೆ ಮತಾಂಧತೆಯನ್ನೆ ಉಣಬಡಿಸುತ್ತಿರುವ ಮಾಧ್ಯಮಗಳು ಟೊಂಕ ಕಟ್ಟಿ ಜೊತೆಗೂಡಿದವು..ಆದರೇ ಚನ್ನಪಟ್ಟಣದ ಒಕ್ಕಲಿಗರ ಸಮುದಾಯ ಇದಕ್ಕೆ ಸೊಪ್ಪು ಹಾಕಲಿಲ್ಲ.ಕೇವಲ ಜಮೀರ್ ಹೇಳಿಕೆಗಾಗಿ ಒಂದು ಮುಸ್ಲಿಮ್ ಸಮುದಾಯವನ್ನು ದ್ವೇಷಿಸಿ ಬಿಜೆಪಿ ಓಟು ಹಾಕುವಷ್ಟು ಮೂರ್ಖರು ಅವರಾಗಿರಲಿಲ್ಲ.ದಿನ ಬೆಳಗಾದರೇ ಹೊಡಿ ಬಡಿ ಅನ್ನುವ ಮತಾಂಧರ ಹೇಳಿಕೆಗಳ ನಡುವೆ ನಾಲಿಗೆಯ ಮೇಲೆ ಹಿಡಿತವಿಲ್ಲದ ಜಮೀರ್ ಹೇಳಿಕೆ ನಗಣ್ಯ ಅನಿಸಿರಬಹುದು.ಕೇವಲ ಜಮೀರ್ ಹೇಳಿಕೆಯನ್ನು ಮುಂದಿಟ್ಟು ಕೊಂಡು ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಎಲ್ಲಾ ಪ್ರಯತ್ನಗಳು ನಡೆದವು.ಆದರೇ ಒಕ್ಕಲಿಗರು ಮಾತ್ರ ಮತಾಂಧರ ಬಾಷಣ ಕೇಳದೆ ಕುವೆಂಪು ಅವರ ಹೃದಯಕ್ಕೆ ಕಿವಿಯಾದರು.ಚಣ್ಣಪಟ್ಟಣದಲ್ಲಿ ಜಾತ್ಯಾತೀತತೆ ಗೆಲುವಿನ ನಗು ಬೀರಿದೆ.

ಇನ್ನೂ ಚನ್ನಪಟ್ಟಣ ಜೊತೆಗೆ ರಾಜ್ಯದ ಇನ್ನೆರಡು ಕಡೆಯೂ ಕನ್ನಡಿಗರು ಮತಾಂಧತೆಯ ಸಹಿಸೊಲ್ಲ ಎಂಬ ಸಂದೇಶವನ್ನು ಗಟ್ಡಿಯಾಗಿ ರವಾನ ಮಾಡಿದ್ದಾರೆ.ಕಳೆದ ಬಾರಿ ಚುನಾವಣೆ ಗೆಲ್ಲಲ್ಲು ಹಿಜಾಬ್ , ಅಜಾನ್ , ಜಾತ್ರೆ ವ್ಯಾಪಾರ ಅಂತೆಲ್ಲ ಕರುನಾಡಿಗರನ್ನು ವಿಭಜಿಸಲು ಹೋಗಿ ಮಕಾಡೆ ಮಲಗಿದ್ದ ಬಿಜೆಪಿ ಸುಧಾರಣೆ ಕಂಡಂತೆ ಕಾಣುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ ಮತ್ತೆ ಹಳೆಯ ಚಾಳಿಯನ್ನೆ ಮುಂದುವರೆಸಿತ್ತು.ಈ ಬಾರಿ ವಕ್ಪ್ ವಿಷಯವನ್ನು ಮುಂದಿಟ್ಟು ಕೊಂಡು ಸಮಾಜ .ವಿಘಟನೆ ಮಾಡಲು ಹೊರಟಿತ್ತು.ಕೇವಲ ರೈತರ ಜಮೀನನ್ನು ನೆಪ ಮಾಡಿಕೊಂಡು ಮಾಡಿದ ಬಾಷಣಗಳು ಸಮಾಜವನ್ನು ತುಂಡರಿಸುವಂತೆ ಇತ್ತು.ನರಮೇಧದ ಮಾತುಗಳನ್ನು ಆಡಲಾಯಿತು. ಆದರೇ ಕುವೆಂಪು ಬಸವಣ್ಣನ ನಾಡಿನ ಪ್ರಜ್ಞಾವಂತರು ಮತಾಂಧತೆಯನ್ನು ಸಹಿಸೊಲ್ಲ ಎಂಬ ಸ್ಪಷ್ಟ ಸಂದೇಶ ಮತ್ತೆ ರವಾನೆ ಮಾಡಿದ್ದಾರೆ. ಬಿಜೆಪಿ ಇನ್ನಾದರೂ ತನ್ನ ಒಡಕಿನ ಬುದ್ದಿ ಬದಿಗಿಟ್ಟು ಜೀವಪರ ವರ್ತಿಸುವುದು ಕನ್ನಡಿಗರ ಆಶಯ.

ಮೂರು ಗೆಲುವುಗಳಲ್ಲಿ ಚನ್ನಪಟ್ಟಣ ಗೆಲುವು ವಿಶೇಷವಾದ ಗೆಲುವು‌‌.ಇದರ ಸಂಪೂರ್ಣ ಯಶಸ್ಸು ಒಕ್ಕಲಿಗರ ಅಚಲವಾದ ಸೌಹಾರ್ದತೆಯ ಬದ್ದತೆಗೆ ಸಲ್ಲಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page