ಬೆಂಗಳೂರು: ಸರ್ಕಾರ ಅಕ್ರಮ ರೇಷನ್ ಕಾರ್ಡುಗಳ ವಿರುದ್ಧದ ಹೋರಾಟವನ್ನು ಮುಂದುವರೆಸಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೂರಾರು ಅಕ್ರಮ ಕಾರ್ಡುಗಳನ್ನು ಅದು ಕ್ಯಾನ್ಸಲ್ ಮಾಡಿದೆ. ಸರ್ಕಾರಿ ನೌಕರರು, ಹಣವಂತರು ಕೂಡಾ ಬಿಪಿಎಲ್ ಕಾರ್ಡ್ ಇಟ್ಟುಕೊಂಡ ಕುರಿತು ಸುದ್ದಿಯಾಗುತ್ತಿವೆ.
ಈ ನಡುವೆ ಗೊಂದಲಗಳಿಂದಾಗಿ ಕೆಲವು ಅರ್ಹ ಕಾರ್ಡುಗಳು ಸಹ ಕ್ಯಾನ್ಸಲ್ ಆಗಿವೆ ಎನ್ನಲಾಗುತ್ತಿದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ಸೈಟಿನಲ್ಲಿ ನಿಮ್ಮ ಕಾರ್ಡ್ ರದ್ದಾಗಿದೆಯೇ ಎನ್ನುವುದನ್ನು ಚೆಕ್ ಮಾಡಬಹುದು.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಒಟ್ಟು 10,97,621 ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸುವ ಕೆಲಸ ಶೀಘ್ರ ಗತಿಯಲ್ಲಿದ್ದು, ಸರಕಾರಿ ನೌಕರಿಯಲ್ಲಿರುವವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು, ಮತ್ತು ಆರ್ಥಿಕವಾಗಿ ಸಬಲರಾಗಿರುವವರು ಸಹ ಬಿಪಿಎಲ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ. ಈ ಹಿನ್ನಲೆ ಆಹಾರ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಹುಡುಕಿ ರದ್ದು ಪಡಿಸುವ ಕಾರ್ಯ ನಡೆದಿದ್ದು ಅಂತಹ ಅನರ್ಹ ಪಟ್ಟಿಯನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದು.
ಮೊದಲಿಗೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಲಿಂಕ್ https://ahara.kar.nic.in/Home/Homeಕ್ಲಿಕ್ ಮಾಡಬೇಕು.
ನಂತರ ಅದರಲ್ಲಿ ಇ-ರೇಷನ್ ಕಾರ್ಡ್ (E-ration card) ನಲ್ಲಿ show cancelled/suspended list ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3: ನಂತರ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಬೇಕು ನಂತರ go ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ತಾಲೂಕಿನಲ್ಲಿ ಆ ತಿಂಗಳಿನಲ್ಲಿ ರದ್ದಾದ ಎಲ್ಲಾ ರೇಷನ್ ಕಾರ್ಡುದಾರರ ಪಟ್ಟಿ ಬರುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ.