Friday, April 11, 2025

ಸತ್ಯ | ನ್ಯಾಯ |ಧರ್ಮ

ವೈರಲ್‌ ವಿಡಿಯೋ | ಹರಿದ್ವಾರ: ಭಾರೀ ಮಳೆಗೆ ಕೊಚ್ಚಿ ಹೋದ ಕಾರು, ಬಸ್ಸುಗಳು

ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಹರಿದ್ವಾರವು ಭಾರೀ ಮಳೆಯಿಂದ ಜಲಾವೃತಗೊಂಡಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಮಳೆ ನೀರು ಮನೆಗಳಿಗೆ ನುಗ್ಗಿದೆ.

ಇದರಿಂದ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ಸುಖಿ ನದಿಯಲ್ಲಿ ಏಕಾಏಕಿ ಉಕ್ಕಿ ಹರಿದಿದೆ. ಇದರಿಂದ ಹಲವು ಕಾರು, ಬಸ್‌ಗಳು ಹೊಳೆಯಲ್ಲಿ ಕೊಚ್ಚಿ ಹೋಗಿವೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿದ್ದು, ಮಳೆಯಾಶ್ರಿತ ಸುಖಿ ನದಿ ಸಾಮಾನ್ಯವಾಗಿ ಬತ್ತಿದ ಸ್ಥಿತಿಯಲ್ಲೇ ಇರುತ್ತಿತ್ತು.

ನೀರಿಲ್ಲದ ಕಾರಣ ಅನೇಕರು ಎಂದಿನಂತೆ ಅಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ಶನಿವಾರ ಸುರಿದ ಧಾರಾಕಾರ ಮಳೆಗೆ ನದಿ ಏಕಾಏಕಿ ಉಕ್ಕಿ ಹರಿಯಿತು. ಇದರಿಂದ ಅಲ್ಲಿದ್ದ ಕಾರು ಹಾಗೂ ಇತರೆ ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಸ್ವಲ್ಪ ದೂರದಲ್ಲಿ ನದಿಯು ಗಂಗೆಯನ್ನು ಸೇರುತ್ತದೆ. ಪ್ರವಾಹದ ಹರಿವು ಹೆಚ್ಚಾಗುತ್ತಿರುವುದರಿಂದ ನದಿಯ ಬಳಿ ಯಾರೂ ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page