ಕ್ಯಾಂಪಸ್ ಕನ್ನಡಿ – Peepal Media

CBSE ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ವಿಜಯವಾಡ ಪ್ರಥಮ, ಪ್ರಯಾಗ್ ರಾಜ್ ಕೊನೆಯ ಸ್ಥಾನ
ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (CBSE) 2025 ರ PUC ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿ ಇಂದು ಪ್ರಕಟಿಸಿದೆ. 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದ ಪರೀಕ್ಷೆಯ ಭವಿಷ್ಯ ಇಂದು ಹೊರಬೀಳಲಿದೆ.

ಫೆಬ್ರವರಿ 15 ರಿಂದ ಏಪ್ರಿಲ್ 4, 2025 ರವರೆಗೆ ನಡೆದ CBSE ಬೋರ್ಡ್ ಪರೀಕ್ಷೆಗಳಲ್ಲಿ ಶೇ. 99.60 ರಷ್ಟು ಉತ್ತೀರ್ಣತೆಯೊಂದಿಗೆ ವಿಜಯವಾಡವು ಮೊದಲ ಸ್ಥಾನಕ್ಕೇರಿದೆ. ಇದರ ನಂತರ ತಿರುವನಂತಪುರಂ 99.32% ಮತ್ತು ಚೆನ್ನೈ 97.39% ರಷ್ಟು ಉತ್ತೀರ್ಣತೆಯೊಂದಿಗೆ ನಿಕಟವಾಗಿ ಸ್ಥಾನ ಪಡೆದಿವೆ. ಪ್ರಯಾಗ್‌ರಾಜ್ 79.53% ರೊಂದಿಗೆ ಅತ್ಯಂತ ಕಡಿಮೆ ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ದಾಖಲಿಸಿದೆ.

ಅಧಿಕೃತ ಡಿಜಿಲಾಕರ್ ವೆಬ್ಸೈಟ್ಗೆ ಭೇಟಿ ನೀಡಿ: https://www.digilocker.gov.in.
“ಲಾಗಿನ್” ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಣಿ ವಿವರಗಳನ್ನು ನಮೂದಿಸಿ.
ಲಾಗಿನ್ ಆದ ನಂತರ, CBSE ತರಗತಿ 10 ಅಥವಾ 12 ನೇ ತರಗತಿ ಫಲಿತಾಂಶ ಲಿಂಕ್ ಅನ್ನು ಆಯ್ಕೆ ಮಾಡಿ.
ಅಗತ್ಯ ರುಜುವಾತುಗಳನ್ನು ನಮೂದಿಸಿ ಮತ್ತು “ಸಲ್ಲಿಸು” ಕ್ಲಿಕ್ ಮಾಡಿ.
ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಉಳಿಸಿ ಅಥವಾ ಮುದ್ರಿಸಿ.

ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಬೀಳುತ್ತೆ ಎಫ್ಐಆರ್; ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣ ಹೆಚ್ಚು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ. ಇನ್ನು ಮುಂದೆ ಈ ಪ್ರಕರಣ ಕಂಡುಬಂದರೆ ಮುಲಾಜಿಲ್ಲದೆ ಅಧಿಕಾರಿಗಳು ಮತ್ತು ಶಾಲಾ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.

ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ಒಂದು ವೇಳೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರು ಮತ್ತು ಇಲಾಖಾ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಿದೆ.

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಮಾಡಿಸಬಾರದು ಎಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ. ಈ ಸಂಬಂಧ ಹಲವು ಬಾರಿ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಆದರೂ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಇಲಾಖೆಯು ಗಮನಿಸಿದೆ.

ಸರ್ಕಾರ ಮತ್ತು ಇಲಾಖೆಯು ಕಾಲಕಾಲಕ್ಕೆ ಹೊರಡಿಸಲಾದ ಸೂಚನೆಗಳು ಹಾಗೂ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಆದೇಶಿಸಲಾಗಿದೆ. ಆದರೂ ಸಹ ಇಂತಹ ಸೂಚನೆಗಳನ್ನು ಉಲ್ಲಂಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಆಕ್ಷೇಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹವರ ವಿರುದ್ಧ ಇಲಾಖಾ ವತಿಯಿಂದ ನಿಯಮಾನುಸಾರ ಕಠಿಣ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು. ಅಲ್ಲದೆ, ಪ್ರಥಮ ವರ್ತಮಾನ ವರದಿ (ಎಐಆರ್) ದಾಖಲಿಸಲಾಗುವುದು ಮತ್ತು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಬೀಳುತ್ತೆ ಕ್ರಿಮಿನಲ್ ಕೇಸ್ ; ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ
ಕಳೆದ ಕೆಲವು ವರ್ಷಗಳಿಂದ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ತಗೆದುಕೊಂಡಿದೆ. ಅದರಂತೆ ಪರೀಕ್ಷಾ ಅಕ್ರಮಕ್ಕೆ ಶಾಶ್ವತ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಆದೇಶ ಹೊರಡಿಸಿದೆ.

SSLC, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಯಾವುದೇ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಬಗ್ಗೆ ನಡಾವಳಿ ಹೊರಡಿಸಿದ್ದು, ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿ, ಮಲ್ಲೇಶ್ವರಂ, ಬೆಂಗಳೂರು ಸಂಖ್ಯೆ:ಎ8/ಎಸ್‌ಎಸ್‌ಎಲ್ಸಿ/ಅಕ್ರಮ/44/2019-20ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ.

ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ ಎಂದಿದ್ದಾರೆ.

ಇದರನ್ವಯ ಕಾನೂನು ಬಾಹಿರವಾಗಿ ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರು ಮತ್ತು ಇದಕ್ಕೆ ಸಹಕರಿಸುವವರು / ಪ್ರಚೋದಿಸುವವರು ವಿದ್ಯಾರ್ಥಿಗಳಾಗಿರಲಿ | ಶಿಕ್ಷಕರಾಗಿರಲಿ / ಬಾಹ್ಯ ವ್ಯಕ್ತಿಗಳಾಗಿರಲಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ/ಸಿಬ್ಬಂದಿ ವರ್ಗದವರು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು/ಶಿಕ್ಷಕರು/ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸುವುದು.

ಅಲ್ಲದೆ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆ ಸೂಕ್ತ ಸರ್ಕಾರದ ಆದೇಶ ಹೊರಡಿಸಲು ಹಾಗೂ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳವವರು ಬಾಹ್ಯ ವ್ಯಕ್ತಿಗಳಾಗಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲು ಸೂಕ್ತ ಸರ್ಕಾರದ ಆದೇಶ ಹೊರಡಿಸಬೇಕೆಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಇವರು ಏಕಕಡತದಲ್ಲಿ ಕೋರಿರುತ್ತಾರೆ. ಹಾಗೂ ಸದರಿ ಏಕಕಡತದ ಕಂಡಿಕೆ-7ರಲ್ಲಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರು ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮತ್ತು ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರ ವಿರುದ್ಧ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸುವಂತಹ ದಂಡನೆ ವಿಧಿಸಲು ಸೂಕ್ತವಾದ ಸರ್ಕಾರದ ಆದೇಶವನ್ನು ಜಾರಿಗೊಳಿಸಲು ಶಿಫಾರಸ್ಸು ಮಾಡಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಎಂದಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯ್ದೆ, Karnataka Act No.18 of 2017 The Karnataka Education (Amendment) Act, 2017 ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಾಟ್ಸಾಪ್ ಮುಖಾಂತರ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಇನ್ನಿತರ ಯಾವುದೇ ಪರೀಕ್ಷಾ ಅವ್ಯವಹಾರದ ಅಪರಾಧಕೃತ್ಯದಲ್ಲಿ ಭಾಗಿಯಾದವರಿಗೆ 3 ರಿಂದ 5 ವರ್ಷ ಜೈಲು ಹಾಗೂ ಐದು ಲಕ್ಷದಂಡ ವಿಧಿಸುವ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಎಸ್.ಎಸ್.ಎಲ್.ಸಿ ಮತ್ತು ಪದವಿ ಪೂರ್ವ ಪರೀಕ್ಷಾ ಅಕ್ರಮದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್/ಹಲೋ ಆಪ್ ಅಥವಾ ಇನ್ನಿತರ ಯಾವುದೇ ಆಪ್‌ಗಳ ಮುಖಾಂತರ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು, ಪರೀಕ್ಷಾ ದುರ್ವ್ಯವಹಾರಕ್ಕಾಗಿ ಪ್ರೇರೇಪಿಸುವುದು ಮತ್ತು ಅಧಿಕೃತ ಪ್ರಶ್ನೆಪತ್ರಿಕೆ ಅಲ್ಲದಿದ್ದರೂ, ಪ್ರಶ್ನೆಪತ್ರಿಕೆ ಹೆಸರಿನಲ್ಲಿ ಗೊಂದಲ ಸೃಷ್ಟಿಸುವುದರ ಮೂಲಕ ವಿದ್ಯಾರ್ಥಿಗಳು/ಪೋಷಕರಲ್ಲಿ ಆತಂಕವುಂಟುಮಾಡಿ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯವೆಸಗುವುದು. ಅಲ್ಲದೆ, ಇಲಾಖೆಯ ಮೇಲೆ ಅನಾವಶ್ಯಕ ಸಂಶಯ ಹುಟ್ಟು ಹಾಕಲು ಕಾರಣವಾಗುವುದಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕ ಉಂಟುಮಾಡುವುದು ಅಪರಾಧವೆಂದು ಪರಿಗಣಿಸಲ್ಪಡುತ್ತದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂತಹ ಪರೀಕ್ಷಾ ದುರ್ವ್ಯವಹಾರಗಳನ್ನು ತಡೆಗಟ್ಟುವ ಸಂಬಂಧ Karnataka Act No.18 of 2017 The Karnataka Education (Amendment) Act, 2017 ರಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದ್ದಾಗ್ಯೂ ಇಂತಹ ಪ್ರಕರಣಗಳು ಮನರಾವರ್ತಿಯಾಗುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇಂತಹ ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟಲು ಕಠಿಣ ಕ್ರಮವನ್ನು ಕೈಗೊಳ್ಳುವುದು ಸೂಕ್ತವೆಂದು ಪರಿಗಣಿಸಿ ಮೇಲ್ಕಂಡ ಅಧಿನಿಯಮದಲ್ಲಿನ ದಂಡನೆಯು ಕ್ರಿಮಿನಲ್ ಆರೋಪಕ್ಕೆ ಒಳಗಾಗುವುದನ್ನು ಬಿತ್ತರಿಸಿದ್ದು, ಇದರೊಂದಿಗೆ ಆಡಳಿತಾತ್ಮಕವಾಗಿ ಸೂಕ್ತ ಕ್ರಮವಹಿಸಿದಲ್ಲಿ ಇಂತಹ ದುವರ್ತನೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆಯೆಂದು ಭಾವಿಸಿ • ಕ್ರಿಮಿನಲ್ ಮೊಕದ್ದಮೆಯ ಜೊತೆಗೆ ಇಲಾಖಾ ವಿಚಾರಣೆ ನಡೆಸಿ ಕಠಿಣ ದಂಡನೆ ವಿಧಿಸಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಂದಾಗಿ, ಎಸ್‌ಎಸ್‌ಎಲ್‌ಸಿ, ಪದವಿ ಪೂರ್ವ ಹಾಗೂ ಇಲಾಖೆ ಯಾವುದೇ ಪರೀಕ್ಷೆಗಳಲ್ಲಿನ ದುರ್ವ್ಯವಹಾರಗಳ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಳ್ಳುವ ಮತ್ತು ಸಹಕರಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ವಿಧಿಸಿರುವ ಕ್ರಿಮಿನಲ್‌ ಆರೋಪ ಅಥವಾ ದಂಡ ವಿಧಿಸುವುದರ ಜೊತೆಗೆ ಈ ಕೆಳಕಂಡಂತೆ ಕ್ರಮವಹಿಸಲು ಸಹ ಆದೇಶಿಸಿದ್ದಾರೆ.

1.ಸರ್ಕಾರಿ ಇಲಾಖಾ ಅಧಿಕಾರಿ/ಸಿಬ್ಬಂದಿ ವರ್ಗದವರು ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಬೋಧಕ/ಬೋಧಕೇತರ ಸಿಬ್ಬಂದಿಗಳು ಹಾಗೂ ಇನ್ನಿತರ ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿನ ಯಾವುದೇ ವ್ಯಕ್ತಿಯ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ಅಫೀಲು,ವರ್ಗೀಕರಣ & ಮೇಲ್ಮನವಿ) ನಿಯಮಗಳು 1957ರ ನಿಯಮ 8ರ ಉಪನಿಯಮ (viii)ರಂತೆ ಸೇವೆಯಿಂದ ವಜಾಮಾಡುವ ದಂಡನೆಯನ್ನು ಸೂಕ್ತ ಇಲಾಖಾ ವಿಚಾರಣಾ ಪ್ರಕ್ರಿಯೆಯೊಂದಿಗೆ ಆಯಾ ಸಕ್ಷಮ ಪ್ರಾಧಿಕಾರಿಗಳು ವಿಧಿಸಲು ಕ್ರಮವಹಿಸತಕ್ಕದ್ದು.2. ಉಳಿದಂತೆ ಮೇಲ್ಕಂಡ ರೀತ್ಯಾ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳವವರು ಅನುದಾನ ರಹಿತ ಶಾಲೆಗಳಲ್ಲಿನ ಬೋಧಕ/ಬೋಧಕೇತರ ಸಿಬ್ಬಂದಿಗಳಾಗಿದ್ದಲ್ಲಿ ಅಥವಾ ಬಾಹ್ಯ ವ್ಯಕ್ತಿಗಳಾಗಿದ್ದಲ್ಲಿ ಅಂತಹವರ ವಿರುದ್ಧ Karnataka Act No.18 of 2017 The Karnataka Education (Amendment) Act, 2017 ರನ್ವಯ ಕ್ರಮವಹಿಸತಕ್ಕದ್ದು.. ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅವ್ಯವಸ್ಥೆಯ ಕೂಪವಾಗಿರುವ ಹೊಳೆನರಸೀಪುರ ಬಾಲಕಿಯರ ವಿದ್ಯಾರ್ಥಿ ನಿಲಯ ; ತೀವ್ರ ಹೋರಾಟದ ಮುನ್ಸೂಚನೆ ಕೊಟ್ಟ SFI ಸಂಘಟನೆ
ಹೊಳೆನರಸೀಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರ ಬಾಲಕೀಯರ ವಿದ್ಯಾರ್ಥಿ ನಿಲಯ ಅವ್ಯವಸ್ಥೆ ಕೂಪವಾಗಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಯಾವು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತವರಣವೂ ಇಲ್ಲದೇ ಸಮಸ್ಯೆಗಳೇ ಮೈವೆತ್ತಂತಿರುವ ಜಾಗದಲ್ಲಿ ಪ್ರತಿ ನಿತ್ಯ ವಿದ್ಯಾರ್ಥಿನಿಯರು ದಿನ ಕಳೆಯುತ್ತಿದ್ದಾರೆ.

ಈ ಬಗ್ಗೆ ಗಂಭೀರ ಆರೋಪ ಮಾಡಿರುವ SFI ವಿದ್ಯಾರ್ಥಿ ಸಂಘಟನೆ, ಸಮಸ್ಯೆ ಬಗೆಹರಿಸದೇ ಹೋದರೆ ಗಂಭೀರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಈ ಸಮಸ್ಯೆಗಳ ಬಗ್ಗೆ ನಿಲಯಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರು ಯಾವುದೆ ಪ್ರಯೋಜವಾಗಿರುವುದಿಲ್ಲ, ಸಮಸ್ಯೆಗಳನ್ನು ಬಗೆಹರಿಸುವ ಬದಲು ಮಕ್ಕಳ ಮೇಲೆ ದಮಕಿ ಹಾಕಿ ಬೆದರಿಕೆ ದೌರ್ಜನ್ಯವೆಸಗುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಖಾಲಿ ಮಾಡಿಕೊಂಡು ಹೋಗಿ ಎಂದು ಬೆದರಿಕೆ ಹಾಕುತ್ತಲೆ ಇದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ತಾಲ್ಲೂಕು ಅಧಿಕಾರಿಗಳಿಗೆ  ಬಗ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿರುವುದಿಲ್ಲ.  ಚಂದ್ರಿಕಾರವರಿಗೆ ರಾಜಕೀಯ ಪ್ರಭಾವಿಗಳ ಸಂಪರ್ಕ ಇರುವುದರಿಂದ ಅವರನ್ನು ಏನು ಮಾಡಲು ಸಾದ್ಯವಾಗಿರುವುದಿಲ್ಲ. ಹಾಸ್ಟೆಲ್‌ ನಲ್ಲಿ ತೀರ ಕಳಪೆ ಗುಣಮಟ್ಟದ ಆಹಾರವನ್ನು ತಯಾರಿಸುವುದು ಮತ್ತು ಸ್ವಚ್ಚತೆ ಇಲ್ಲದಿರುವುದರಿಂದ ಈಗಾಗಲೆ ನಾನಾ ರೋಗಗಳು ಹರಡಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿರುವ ಬಗ್ಗೆ ಸಾಕಷ್ಟು ಉದಾಹರಣೆ ಇದ್ದರೂ ಈ ಅವ್ಯವಸ್ಥೆ ಸರಿಪಡಿಸಿಲ್ಲ ಎಂದು ಆರೋಪಿಸಲಾಗಿದೆ.

ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದಿಂದ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ ಇದಾಗಿದ್ದು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಿಸಲು ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೂಡಲೆ ಕಲ್ಪಿಸಬೇಕೆಂದು ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಮತ್ತು ಬೇರೆಯ ನಿಲಯಪಾಲಕರನ್ನು ನೀಯೋಜಿಸಬೇಕು, ಇಲ್ಲವಾದಲ್ಲಿ ಎಸ್‌ ಎಫ್‌ ಐ SFI ಸಂಘಟನೆ ಮುಂದಿನ ಹೋರಾಟದ ಬಗ್ಗೆ ಗಂಭೀರವಾಗಿ ಆಲೋಚಿಸಲಿದೆ ಎಂದು ಮೇಲಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ಇಂದು ದ್ವಿತೀಯ ಪಿಯುಸಿ ಪರೀಕ್ಷೆ – 3 ಫಲಿತಾಂಶ ಪ್ರಕಟ
2024ರ ದ್ವಿತೀಯ ಪಿಯುಸಿ ಪರೀಕ್ಷೆ -3 ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ಪರೀಕ್ಷಾ ಮಂಡಳಿ ಪ್ರಕಟಣೆ ಹೊರಡಿಸಿದೆ.

ದಿನಾಂಕ 24-06-2024 00 05-07-2024 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ -3 ರ ಫಲಿತಾಂಶವನ್ನು ದಿನಾಂಕ: 16-07-2024 ರ ಮಧ್ಯಾಹ್ನ 3.00 ಗಂಟೆಗೆ https://karresults.nic.in ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯಮಂಡಳಿಯ ಅಧ್ಯಕ್ಷರು ಸುತ್ತೋಲೆ ಹೊರಡಿಸಿದ್ದಾರೆ.

ಹೀಗೆ ನೋಡಬೇಕು

ಮೊದಲು ಕೇಳಗೆ ನೀಡಲಾಗಿರುವ ಇಲಾಖೆಯ ಅಧಿಕೃತ ವೆಬ್‌ಸೈಟ್‌ karresults.nic.in ಭೇಟಿ ನೀಡಿ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-3 ರ ಫಲಿತಾಂಶ ಪ್ರಕಟಣೆ ಎಂಬುದರ ಮೇಲೆ ಕ್ಲಿಕ್ ಮಾಡಿ.

ನಂತರ ‘Enter Reg No’ ಎಂದಿರುತ್ತದೆ ಅಲ್ಲಿ ನಿಮ್ಮ ರಜೀಸ್ಟರ್ ನಂಬರ್ ಎಂಟರ್ ಮಾಡಿ, ಅದರ ಕೇಳಗೆ ‘Select Subject’ ಆಯ್ಕೆ ಇರುತ್ತದೆ. ನಿಮ್ಮ ಸಬ್ಬೆಕ್ಟ್ ಆಯ್ಕೆ ಮಾಡಿ.

ಅಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ 2 2nd PUC Result 2024 ಅನ್ನು ನೋಡಬಹುದು.

ನೀಟ್ ಪರೀಕ್ಷೆ, ಮೆರಿಟ್ ಎಂಬ ಹಿಪಾಕ್ರೆಸಿ
ನೀಟ್ ಪರೀಕ್ಷೆ ಮತ್ತದರ ಒಳಗಿನ ಮೆರಿಟ್ ಎಂಬ ಹಿಪಾಕ್ರಸಿ ಬಗ್ಗೆ ಆಕ್ಸ್ಫರ್ಡ್ ವಿಶ್ವಾವಿದ್ಯಾಲಯ/ ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸೈಸ್ನ್ಸ್ ಹಳೆಯ ವಿದ್ಯಾರ್ಥಿ ಸೆಲ್ವಂ ಧರಣಿಧರನ್ ಅವರ ಬರಹವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪ್ರಾಧ್ಯಾಪಕರಾದ ಹರೀಶ್ ಗಂಗಾಧರ್

ಜಗತ್ತಿನಾದ್ಯಂತ ಶಿಕ್ಷಣ ಚಲನಶೀಲತೆಯ ಯಾಂತ್ರಿಕ ವ್ಯವಸ್ಥೆಯಾಗದೆ ಸವಲತ್ತುಗಳ ಕೋಟೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಯಾವ ರೀತಿ ಸಕಾರಾತ್ಮಕ ಕ್ರಮಗಳು ಮೆರಿಟೋಕ್ರೇಸಿಯನ್ನ (ಶ್ರೇಷ್ಠತೆಯ/ಅರ್ಹತೆಯ ವ್ಯಸನ ಅಂದುಕೊಳ್ಳಿ) ಭಂಗಗೊಳಿಸುತ್ತದೆ ಅಥವಾ ನೀಟ್ (NEET) ನಂತಹ ಪರೀಕ್ಷೆಗಳು ಹೇಗೆ ಮೆರಿಟೋಕ್ರೆಸಿಯನ್ನು ಪೋಷಿಸುತ್ತವೆ ಅನ್ನೋದರ ಬಗ್ಗೆ ನಿರಂತರ ಚರ್ಚೆಗಳು ನೆಡೆಯುತ್ತಲೇ ಇರುತ್ತವೆ. ಈ ಎರಡು ಸಂಕುಚಿತ ನೋಟಗಳು ಮತ್ತು ಅನಿಸಿಕೆಗಳು ‘ಮೆರಿಟ್’ ಪದದ ತಿಳುವಳಿಕೆಯ ಕೊರತೆಯಿಂದ ಹುಟ್ಟುತ್ತದೆ.

ಮೆರಿಟ್ ಎಂಬ ಕಲ್ಪನೆಯೇ ಅಮೂರ್ತವು ಅಸ್ಪಷ್ಟವಾದುದಾಗಿದೆ. ಈ ಕಲ್ಪನೆಯೇ ಅತಿದೊಡ್ಡ ವಂಚನೆ ಕೂಡ ಇರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಸಾಮರ್ಥ್ಯ ತೋರಿದರೆ “ಓಹ್ ಆತನಿಗೆ ಒಳ್ಳೆಯ ಮೆರಿಟ್ ಇದೆ” ಎಂದು ತುಂಬಾ ಮುಗ್ಧವಾಗಿ ಒಪ್ಪಿಕೊಂಡು ಬಿಡುವ ಗುಣ ಹಲವರಲ್ಲಿದೆ. ಈ ರೀತಿಯ ಜನಾಭಿಪ್ರಾಯಗಳು ಜಾತಿ ಆಧಾರಿತ ಭೇದಗಳು, ಪೋಷಕರಿಗಿರುವ ಅರಿವು, ಓದಿದ ಶಾಲೆ, ಬದುಕುವ ವಾತಾವರಣ , ಬಾಲ್ಯದಲ್ಲಾದ ನಿಂದನೆ, ದೌರ್ಜನ್ಯದಂತಹ ನಕಾರಾತ್ಮಕ ಅನುಭವಗಳನ್ನ, ತಾತ್ಸಾರಗಳನ್ನ ಮತ್ತು ಅದೇ ತರನಾದ ಸಮರೂಪದ ಅಂಶಗಳನ್ನ ಮರೆತುಬಿಡುತ್ತದೆ. ಈ ಹೋಲಿಕೆಯನ್ನೇ ಗಮನಿಸಿ- ಹಳ್ಳಿಯ ದಲಿತ ಕುಟುಂಬದಲ್ಲಿ ಹುಟ್ಟಿದ ಮಗುವಿಗೆ ದೆಹಲಿಯ ಮೇಲ್ ಮಧ್ಯಮ ವರ್ಗದಲ್ಲಿ ಹುಟ್ಟಿದ ಮಗುವಿಗಿಂತ ಹತ್ತು ಪಟ್ಟು ಹೊರ ಜಗತ್ತಿನ ಅರಿವು ಹಾಗೂ ಸಂಪನ್ಮೂಲದ ಕೊರತೆಯಿರುತ್ತದೆ.

ಹಳ್ಳಿಯ ದಲಿತ ಅಥವಾ ಕೆಳವರ್ಗದವ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗೆ ಸೇರುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಆತ ಪೋಷಕರೊಡನೆ ಕೂಲಿ ಕೆಲಸಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ಇದೇ ಸಮಯಕ್ಕೆ ದೆಹಲಿಯ ಮೇಲ್ ಮಧ್ಯಮ ವರ್ಗದ ಹುಡುಗ ಶ್ರೇಷ್ಠ ಶಾಲೆಗೆ ಸೇರುತ್ತಾನೆ. ಅವನ ಪೋಷಕರಿಗೆ ಆತನ ಭವಿಷ್ಯದ ಬಗ್ಗೆ ನಿರ್ಧಿಷ್ಟ ಕನಸುಗಳಿರುತ್ತವೆ. ಈ ಎಲ್ಲಾ ಸವಲತ್ತುಗಳು ಆತನಿಗೆ ಆರಂಭಿಕ ಮುನ್ನಡೆ ಕೊಡುತ್ತವೆ. ಇಂತಹ ಸನ್ನಿವೇಶದಲ್ಲಿ ವ್ಯಕ್ತಿಯ ಸಾಮರ್ಥ್ಯ, ಪ್ರತಿಭೆಯನ್ನ ಅಳೆಯುವುದಾದರು ಹೇಗೆ? ಹಳ್ಳಿಯ ದಲಿತನ ಮಗನಿಗು, ದೆಹಲಿಯ ಹುಡುಗನಿಗೂ ಒಂದೇ ಪರೀಕ್ಷೆ ಬರೆಯಲು ಹೇಳುವುದು ಅನ್ಯಾಯವಲ್ಲವೇ? ಇಂತಹ ಪರೀಕ್ಷೆಗಳ ಫಲಿತಾಂಶ ಅವರ ಭವಿಷ್ಯ ನಿರ್ಧರಿಸುವುದು ಎಷ್ಟು ಸರಿ? ದೇಶದ ಲಕ್ಷಾಂತರ ಯುವಕರ ಬದುಕು ತರಬೇತಿಯಿಂದ ಉತ್ತೀರ್ಣ ಅಗಬಹುದಂತಹ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಿಂದ ನಿರ್ಧರಿಸುವುದು ಪಕ್ಷಪಾತ ಮತ್ತು ಅನ್ಯಾಯವಲ್ಲವೆ? ಇದು ದೇಶದಲ್ಲಿರುವ ಅಸಮಾನತೆ, ಭೇದಗಳ ಮಹಾ ಕಂದಕಗಳನ್ನ ತ್ವರಿತ ಗತಿಯಲ್ಲಿ ಮತ್ತಷ್ಟು ದೊಡ್ಡದಾಗುವಂತೆ ಮಾಡುತ್ತದೆ ಅಲ್ಲವೆ?

ಎಲ್ಲಾ ಆಯ್ಕೆ ಪ್ರಕ್ರಿಯೆಗಳಲ್ಲೂ, ಮಾನದಂಡಗಳಲ್ಲೂ ಭಿನ್ನತೆ ಮತ್ತು ನ್ಯೂನತೆಗಳಿರುತ್ತದೆ. ಶುದ್ಧ ಮೆರಿಟ್ ಅನ್ನುವುದು ಸುಳ್ಳು ನಂಬಿಕೆ. ಆದರ್ಶನಾಡಿನ (ಉಟೋಪಿಯ) ಪರಿಕಲ್ಪನೆಯ ಪರ್ಫೆಕ್ಟ್ ಮೈಥ್ ಅದು! ನೀತಿರಚಿಸುವವರು ಈ ಎಲ್ಲ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಆದಷ್ಟು ನ್ಯೂನತೆಗಳನ್ನ ಹಾಗೂ ಅಂತರ್ಗತ ಪಕ್ಷಪಾತವನ್ನ ಕುಗ್ಗಿಸುವಂತೆ ನೀತಿ ರಚಿಸಬೇಕಷ್ಟೆ. ತಮಿಳುನಾಡಿನ ಸ್ಟಾಲಿನ್ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಸೇರಲು ಬರೆಯುತ್ತಿದ್ದ ನೀಟ್ ಪರೀಕ್ಷೆಗಳನ್ನ ರದ್ಧುಗೊಳಿಸಿ ಇತ್ತೀಚೆಗೆ ಇದನ್ನೇ ಮಾಡಿದೆ. ತಮಿಳುನಾಡಿನ ಎಲ್ಲ ವಿದ್ಯಾರ್ಥಿಗಳಿಗೂ ಸಮಾನವಾದ, ಸರಳ ಪಠ್ಯ ಪರಿಚಯಿಸಲಿದೆ. ಸರಳ ಪಠ್ಯಕ್ರಮ ಸ್ವಲ್ಪಮಟ್ಟಿಗಾದರು ಎಲ್ಲರಿಗೂ ಸಮತಟ್ಟಾದ ಆಟದ ಮೈದಾನ ಒಡಗಿಸಿಕೊಡುತ್ತದೆಯೆಂದು ಹಲವು ಸಂಶೋಧನೆಗಳು ಸೂಚಿಸಿವೆ.

ಭಾರತದಲ್ಲಿ ನೀಟ್ ಕುರಿತು ಕೆಲವೇ ಕೆಲವು ಸಂಶೋಧನೆಗಳು ನೆಡೆದರು, ಸ್ಪರ್ಧಾತ್ಮಕ ಪರೀಕ್ಷೆಗಳು ಮೆರಿಟ್ ಎಂಬ ಮೂಲ ತತ್ವದ ವಿರೋಧಾಭಾಸವೆ ಆಗಿದೆಯೆಂದು ಅಮೇರಿಕಾದಲ್ಲಿ ನೆಡೆದ ಹಲವು ಸಂಶೋಧನೆಗಳು ಸೂಚಿಸಿವೆ. ಅಮೆರಿಕದಲ್ಲಿ ಕಾಲೇಜು ಬೋರ್ಡ್ ನೆಡೆಸುವ SAT ಪರೀಕ್ಷೆಗಳ ಅಂಕಿಅಂಶಗಳ ಆಧಾರದ ಮೇಲೆ ನೆಡೆದ ಬ್ರೂಕಿಂಗ್ಸ್ ಸಮೀಕ್ಷೆ ಪ್ರಕಾರ, ಪ್ರತಿಷ್ಠಿತ ಐವಿ ಲೀಗ್ ಸ್ಕೂಲ್ನಲ್ಲಿ ಓದುವ ದೇಶದ ಆಗರ್ಭ ಶ್ರೀಮಂತ ಮಕ್ಕಳಿಗೆ (ಮೇಲಿನ 1%) ಬಡ ಕುಟುಂಬದಿಂದ ಬರುವ (ಕೆಳ 20%) ಮಕ್ಕಳಿಗಿಂತ 77ರಷ್ಟು ಹೆಚ್ಚು SAT ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಧ್ಯತೆಯಿರುತ್ತದೆ. ಬಡವರಿಗೆ, ಕರಿಯರಿಗೆ ಹೋಲಿಸಿದರೆ ಉಳ್ಳವರಿಗೆ, ಧನಿಕರಿಗೆ ಮತ್ತು ಬಿಳಿಯರಿಗೆ SAT ಅಷ್ಟೇ ಅಲ್ಲದೆ GRE, GMAT ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ನಿಚ್ಚಳ ಅವಕಾಶಗಳಿವೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ. ಐತಿಹಾಸಿಕವಾಗಿ ತುಳಿತಕ್ಕೆ ಒಳಪಟ್ಟ ಅಫ್ರೋ ಅಮೆರಿಕನ್ರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಕಡಿಮೆ ಅಂಕ ಪಡೆಯುತ್ತಿರುವುದು ಕೂಡ ಈ ಸಮೀಕ್ಷೆಗಳಲ್ಲಿ ದೃಢಪಟ್ಟಿದೆ.

ಅಮೆರಿಕಾದಲ್ಲಿ ವರ್ಗ, ಪೋಷಕರ ಶಿಕ್ಷಣ, ವಿದ್ಯಾರ್ಥಿಗಳ ಬಾಲ್ಯ, ಅವರ ಅನುಭವಗಳು ಇಷ್ಟೆಲ್ಲಾ ಪ್ರಭಾವ ಬೀರುವುದಾದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವ, ತಾರತಮ್ಯ ತುಂಬಿ ತುಳುಕುತ್ತಿರುವ ಭಾರತದಲ್ಲಿ ಮೇಲಿನ ಅಂಶಗಳು ತುಂಬ ಆಳವಾದ ಪರಿಣಾಮವನ್ನೇ ಬೀರುವುದರಲ್ಲಿ ಅನುಮಾನವಿಲ್ಲ.

ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಸ್ಕೂಲಿನಲ್ಲಿ ಪಡೆಯುವ ಅಂಕಗಳು ಅಷ್ಟಾಗಿ ಆದಾಯ ಮತ್ತು ವರ್ಣಗಳ ಅಂತರದಿಂದ ಪ್ರಭಾವಿತವಾಗಿರುವುದಿಲ್ಲ. ಬದಲಾಗಿ ಸ್ಕೂಲಿನಲ್ಲಿ ಪಡೆದ ಅಂಕಗಳು ಮುಂದೆ ಅವರ ವಿಶ್ವವಿದ್ಯಾಲಯದ ಸಾಧನೆಗಳ ಸೂಚಕವಾಗಿರುತ್ತವೆ. ಸ್ಕೂಲಿನಲ್ಲಿ ಒಳ್ಳೆಯ ಅಂಕಗಳನ್ನ ಪಡೆದವರು ಮುಂದೆ ಕಾಲೇಜಿನಲ್ಲಿ ಒಳ್ಳೆಯ ಸಾಮರ್ಥ್ಯ ಪ್ರದರ್ಶಿವುದು ಮತ್ತೆ ಮತ್ತೆ ಸಾಬಿತಾಗಿದೆ.

ಮಿಚಿಗನ್ ವಿಶ್ವವಿದ್ಯಾಲಯ ನಡೆಸಿದ ದೀರ್ಘ ಕಾಲಿಕ ಪ್ರಯೋಗದಿಂದ ಇನ್ನೊಂದು ಅಚ್ಚರಿಯ ವಿಷಯ ಸಾಬಿತಾಗಿದೆ. ಸಮಾಜದ ಅಂಚಿನಲ್ಲಿ ಬದುಕುವ, ತುಳಿತಕ್ಕೊಳಗಾದ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು, ಸಕಾರಾತ್ಮಕ ಕ್ರಮಗಳಿಂದ ಪ್ರವೇಶ ಪಡೆದವರು ಕಾಲೇಜುಗಳಲ್ಲಿ ಮೇಲ್ವರ್ಗ. ಬಿಳಿಯರಿಗಿಂತ ಕಡಿಮೆ ಗ್ರೇಡ್ ತೆಗೆದರೂ ಅವರ ವೃತಿ ಸಾಧನೆಯಲ್ಲಿ ಬಿಳಿಯರಿಗೆ ಸರಿಸಮನಾಗಿ ನಿಲ್ಲಬಲ್ಲರೆಂಬುದು. ಶೋಷಿತ ಹಿನ್ನಲೆಯಿಂದ ಬಂದವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಿಗೆ ಪ್ರವೇಶ ಪಡೆದ ಮೇಲೆ ಹೆಚ್ಚಿನ ಹುರುಪಿನಿಂದ, ಕೆಚ್ಚಿನಿಂದ, ದೃಢತೆಯಿಂದ ಓದಿ ದೊಡ್ಡ ಸಾಧನೆಯನ್ನೇ ಮಾಡುತ್ತಾರೆಂಬುದು. ಬಲು ಯಶಸ್ಸು ಕಾಣುತ್ತಾರೆಂಬುದು.

ಅನಿತಾಳ ಕೇಸನ್ನೆ ತೆಗೆದುಕೊಳ್ಳೋಣ. ಆಕೆ ತಮಿಳು ನಾಡಿನ ಬಡ ದಲಿತರ ಕುಟುಂಬದಲ್ಲಿ ಹುಟ್ಟಿದಳು. ಬಾಲ್ಯದಲ್ಲಿಯೇ ತನ್ನ ತಾಯಿಯನ್ನ ಕಳೆದುಕೊಂಡಳು. ತಂದೆ ಕೂಲಿ ಕಾರ್ಮಿಕ. ಸಮಾಜದಲ್ಲಿ ಅಂತರ್ಗತವಾಗಿರುವ ತಾರತಮ್ಯದ ನಡುವೆಯೂ ಆಕೆ ಸ್ಕೂಲಿನಲ್ಲಿ 1200ಕ್ಕೆ 1176 ಅಂಕ ತೆಗೆದಳು. ಅವಳು ರಾಜ್ಯದ ಟಾಪ್ 0.3%ರಲ್ಲಿ ಸ್ಥಾನ ಪಡೆದಳು. ನೀಟ್ ಪರೀಕ್ಷೆಯಿಲ್ಲದಿದ್ದರೆ ಆಕೆ ತಮಿಳು ನಾಡಿನ ಶ್ರೇಷ್ಠ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳ ಸಮುದಾಯದ ಮೊದಲ ವೈದ್ಯೆಯಾಗುತ್ತಿದ್ದಳು. ಆದರೆ ನೀಟ್ ಪರೀಕ್ಷೆ ಹಾಗಾಗಲು ಬಿಡಲಿಲ್ಲ. ಅವಳಿಗೆ ನೀಟ್ ಪರೀಕ್ಷೆಯಲ್ಲಿ ಉತ್ತಿರ್ಣಳಾಗುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಆಕೆಗೆ ಸರಿಯಾದ ಸಮಯಕ್ಕೆ ಸರಿಯಾದ ತರಬೇತಿ, exposure ಸಿಗಲಿಲ್ಲವೆ? ಅವಳ ಬಳಿ ಸಂಪನ್ಮೂಲಗಳಿದ್ದು, ಅವಕಾಶಗಳಿದ್ದಿದ್ದರೆ, ದುಬಾರಿ ಕೋಚಿಂಗ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದರೆ, ನೀಟ್ ಪರೀಕ್ಷೆಯಲ್ಲಿ ಮೊದಲಿಗನಾದವನನ್ನೇ ಮೀರಿಸುವಂತಹ ಅಂಕವನ್ನೇ ಆಕೆ ಗಳಿಸುತ್ತಿದ್ದಳು. ನೀಟ್ ಪರೀಕ್ಷೆ ಅವಳ ಕನಸುಗಳನ್ನಷ್ಟೇ ಕೊಲ್ಲದೆ ಇಡಿಯ ಸಮುದಾಯದ ಆಶಯಗಳನ್ನೇ ದಫಾನ್ ಮಾಡಿತ್ತು. ನೀಟ್ ಪರೀಕ್ಷೆಗೆ ಸಂಬಂಧಿತ ಆತ್ಮಹತ್ಯೆಗಳು ಆತಂಕದಿಂದಾಗದೆ, ಈ ಹಾಳು ಪರೀಕ್ಷೆ ಅವರ ಕನಸು, ಆಶಯಗಳಿಗೆ ಸಮಾಧಿ ಕಟ್ಟಿದ್ದರಿಂದಲೇ ಆಗಿವೆ. ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸದೆ ಆತ್ಮಹತ್ಯೆಗೆ ಶರಣಾದವರಲ್ಲಿ ಹೆಚ್ಚಿನವರು ಹಳ್ಳಿಗಾಡಿನ, ಶೋಷಿತ ವರ್ಗ/ ಜಾತಿಯವರೇ ಆಗಿದ್ದಾರೆ ಎಂಬುದು ನಾವು ಗಮನಿಸಬೇಕಾದ ಸಂಗತಿ.

ಇಂತಹ ಟೊಳ್ಳು ಪರೀಕ್ಷೆಗಳು ವಿದ್ಯಾರ್ಥಿಗಳ ನಿಜವಾದ ಪ್ರತಿಭೆಯನ್ನ ಎಂದು ಗುರುತಿಸಲಾರವು. ಒಳ್ಳೆಯ ತರಬೇತಿ ಸರಿಯಾದ ಸಮಯಕ್ಕೆ ಸಿಕ್ಕಿದರೆ ಈ ಪ್ರವೇಶ ಪರೀಕ್ಷೆಗಳನ್ನ ಯಾರು ಬೇಕಾದರೂ ಕ್ಲಿಯರ್ ಮಾಡಬಹುದು. ಈ ಪರೀಕ್ಷೆಯಲ್ಲಿನ ಅಂಕಗಳು ನೇರವಾಗಿ ನುರಿತವರಿಂದ ತರಬೇತಿ ಪಡೆದ ಸಮಯದ (training hours) ಮೇಲೆಯೇ ಅವಲಂಬಿತವಾಗಿದೆ. ಭಾರತದಲ್ಲಿನ ನುರಿತ ತರಬೇತುದಾರರಿಂದ ತರಬೇತಿ ಪಡೆಯಬೇಕೆಂದರೆ ಕನಿಷ್ಠ 75000/- ಫೀ ಕಟ್ಟಬೇಕಾಗುತ್ತದೆ. ಕೋಚಿಂಗ್ ಸೆಂಟರ್ಗಳು ಸಾಮಾನ್ಯವಾಗಿ ಮಹಾನಗರಗಳಲ್ಲೇ ಇರುತ್ತವೆ. ಶೇಕಡಾ 95 IITಗೆ ಪ್ರವೇಶ ಪಡೆಯುವವರು ಪ್ರತಿಷ್ಥಿತ ಖಾಸಗಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದವರೇ ಆಗಿರುತ್ತಾರೆಂದು 2005 ಸಮೀಕ್ಷೆ ತಿಳಿಸಿದೆ. IIT ಸೇರುವ ದೇಶದ ಪ್ರತಿ ಆರು ವಿದ್ಯಾರ್ಥಿಗಳಲ್ಲಿ ಒಬ್ಬ ಕೋಟದ ಬನ್ಸಾಲ್ ಟುಟೋರಿಯಲ್ಸ್ ಗೆ ಸೇರಿದವನೇ ಆಗಿರುತ್ತಾನೆ. ಟುಟೋರಿಯಲ್ಸ್ ಗಳು ಒಂದರಿಂದ ಎರಡು ಲಕ್ಷ ಪಡೆಯುತ್ತವೆ. ಹೀಗೆ ದುಡ್ಡು ಕೊಟ್ಟು ಉತ್ತಮ ತರಬೇತಿ ಪಡೆಯುವವರು ಧನಿಕರ ಮನೆಯವರೇ ಆಗಿರುತ್ತಾರೆ. ಇಷ್ಟೆಲ್ಲಾ ಹಣ ಹಳ್ಳಿಯ ಬಡ ದಲಿತ ಅಥವಾ ಬಡವ ಎಲ್ಲಿಂದ ಹೊಂದಿಸಲು ಸಾಧ್ಯ? ಬಡವ ಬಿಡಿ ದೇಶದ ಬಹುಪಾಲು ಜನರಿಗೆ ಈ ತರಬೇತಿ ಕೇಂದ್ರಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಿಸುವುದು ಒಂದು ಕನಸೇ ಆಗಿದೆ. ಪರಿಣಾಮ- IITಗೆ ಸೇರುವ ವಿದ್ಯಾರ್ಥಿಗಳಲ್ಲಿ ಶೇಕಡಾ 2.86ರಷ್ಟು ವಿದ್ಯಾರ್ಥಿಗಳು ಮಾತ್ರ ಬಡ/ಹಳ್ಳಿ/ ಅಶಿಕ್ಷಿತ ಕುಟುಂಬದಿಂದ ಬಂದವರಾಗಿರುತ್ತಾರೆ!

ಅಮೇರಿಕಾದಲ್ಲಿ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳೆಲ್ಲ ಶೋಷಿತ ವರ್ಗದಿಂದ ಬಂದವರಿಗೆ ಪ್ರವೇಶ ಪರೀಕ್ಷೆ ನಡೆಸದೆ ಅವರ ಸ್ಕೂಲ್ ಅಂಕಗಳ ಮೇಲೆ ಪ್ರವೇಶ ನೀಡುತ್ತಿವೆ. ಶೇಕಡ 90ರಷ್ಟು ರಾಷ್ಟ್ರಪತಿಗಳನ್ನ, ರಾಯಭಾರಿಗಳನ್ನ, ನಾಲ್ಕು ವಿಶ್ವ ಬ್ಯಾಂಕ್ ಅಧ್ಯಕ್ಷರನ್ನ ಕೊಟ್ಟಿರುವ ಫ್ರಾನ್ಸ್ ನ ವಿಶಿಷ್ಟ ಪೋ ಸಂಸ್ಥೆ ಸಂಪೂರ್ಣವಾಗಿ ಪ್ರವೇಶ ಪರೀಕ್ಷೆ ತೆಗೆದು ಹಾಕಿದೆ. ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ತರಬೇತಿ ನಿಡುವ ಲಾಲ್ ಬಹುದ್ದುರು ಶಾಸ್ತ್ರಿ ಸಂಸ್ಥೆಯು ಸಂಶೋಧನೆಗಳನ್ನ ಆಧಾರಿಸಿ ಪ್ರವೇಶ ಪರೀಕ್ಷೆಗಳನ್ನ ಕೈಬಿಟ್ಟಿದೆ. ದೇಶದ ಎಲ್ಲಾ ವಿದ್ಯಾರ್ಥಿಗಳ ಮೇಲೆ ಏಕ ರೂಪದ ನೀಟ್ ಪರೀಕ್ಷೆ ಹೇರಿದ ಮೋದಿ ಸರ್ಕಾರದ ನಿರ್ಧಾರ ನಮ್ಮಲಿನ ಗುಣಮಟ್ಟ ಹೆಚ್ಚಿಸುವುದಿಲ್ಲ, ಇಂತಹ ರಕ್ಕಸ ಪರೀಕ್ಷೆಗಳು ಯಾವುದೇ ನಂಬಲರ್ಹ ಸಂಶೋಧನೆಗಳ ಪರಿಣಾಮವೂ ಅಲ್ಲ. ಪ್ರವೇಶ ಪರೀಕ್ಷೆಗಳ ಉದ್ದೇಶ ಶೋಷಿತರನ್ನ, ದಲಿತರನ್ನ, ಹಳ್ಳಿಗರನ್ನ, ಬಡವರನ್ನ ವೈದ್ಯಕೀಯ ಶಿಕ್ಷಣದಿಂದ ಹೊರಗಿಡುವುದೇ ಆಗಿದೆ. ಜಗತ್ತಿನ ಎಲ್ಲ ಸಂಶೋಧನೆಗಳ ಪ್ರವೇಶ ಪರೀಕ್ಷೆಗಳು ಯಾವುದೇ ಗುಣಮಟ್ಟವನ್ನ ಹೆಚ್ಚಿಸಲಾರವೆಂದು ಸೂಚಿಸುವಾಗ, ನೀಟ್ ಅನ್ನು ತೆಗೆದು ಹಾಕಬಾರದೇಕೆ? ಇಲ್ಲಿರುವ ಪರೀಕ್ಷಾ ರಾಜಕೀಯ ಕಣ್ಣಿಗೆ ರಾಚುವಂತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ನೀಟ್ ಪರೀಕ್ಷೆ ದೇಶ ಸಹಕಾರಿ ಸಂಯುಕ್ತತೆಯ (co-operative federalism) ವಿರೋಧವಾಗಿಯೇ ಇದೆ. ದ್ರಾವಿಡ ಅಸ್ಮಿತೆಯನ್ನ ಪ್ರಬಲವಾಗಿ ನಂಬಿ ಅಧಿಕಾರ ನಡೆಸುತ್ತಿರುವ ತಮಿಳುನಾಡು ಸರ್ಕಾರಗಳು ದೇಶದಲ್ಲೇ ಅತ್ತ್ಯುತ್ತಮ ಅರೋಗ್ಯ ಸೌಕರ್ಯ ಜನರಿಗೆ ದೊರಕುವಂತೆ ನೋಡಿಕೊಂಡಿದೆ. ಜನಸಂಖ್ಯೆ- ವೈದ್ಯರ ಅನುಪಾತದಲ್ಲೂ ತಮಿಳುನಾಡು ಬೇರೆಯ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂದಿದೆ. ರಾಜ್ಯದ ಎಲ್ಲೆಡೆ ವೈದ್ಯಕೀಯ ಕಾಲೇಜುಗಳನ್ನ ತೆರೆದ ಪರಿಣಾಮ ವೈದ್ಯರು ರಾಜ್ಯದ ಎಲ್ಲೆಡೆ ಸಮನಾಗಿ ಹರಡಿಕೊಂಡಿದ್ದಾರೆ ಕೂಡ. ರಾಜ್ಯ ಸರ್ಕಾರದ ಸಕಾಲಿಕ ಹಸ್ತಕ್ಷೇಪದಿಂದ ಪ್ರವೇಶ ಪರೀಕ್ಷೆಗಳು ರದ್ದಾಗಿವೆ. ಜಾತಿ/ಸಮತಲ ಮೀಸಲಾತಿಗಳಿಂದ ಎಲ್ಲಾ ಸಮುದಯದವರು ವೈದ್ಯಕೀಯ ಶಿಕ್ಷಣ ಪಡೆಯುವಂತಾಗಿದೆ. ಚೆನ್ನೈ ಇಂದು ದೇಶದ ಮೆಡಿಕಲ್ ಟೂರಿಸಂನ ತಾಣವು ಆಗಿದೆ.
ವಿಷಯ ಹೀಗಿರುವಾಗ, ದೇಶದ ಬೇರೆ ರಾಜ್ಯಗಳು ಅಸೂಹೆ ಪಡುವಂತಹ ಸಾಧನೆ ತಮಿಳುನಾಡು ಮಾಡಿರುವಾಗ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಯಶಸ್ವಿ ಮಾದರಿಯನ್ನ ತೊರೆದು ತಪ್ಪು ಹಾದಿ ಹಿಡಿಯುವುದಾದರು ಏತಕ್ಕೆ? ನಿಜವಾಗಲು ಜನರ ಸಬಲೀಕರಣ, ಸಮಾನ ಶಿಕ್ಷಣ ಕೇಂದ್ರ ಸರ್ಕಾರದ ಕನಸಾದರೆ, ನೀಟ್ ಪರೀಕ್ಷೆ ತಕ್ಷಣೆವೆ ಕೈಬಿಟ್ಟು ತಮಿಳುನಾಡಿನ ಮಾದರಿಯನ್ನೇ ಎಲ್ಲರು ಅನುಸರಿಸಬೇಕೆಂದು ಆದೇಶ ಹೊರಡಿಸಬೇಕು. ಹಾಗಾದೀತೆ?

ಭಾರತ ವೈವಿದ್ಯಮಯ ರಾಷ್ಟ್ರ. ಇಲ್ಲಿನ ರಾಜ್ಯಗಳ ಅಭಿವೃದ್ದಿ, ಶಿಕ್ಷಣ ಮೂಲ ಸೌಕರ್ಯಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ತಮಿಳನಾಡಿನಲ್ಲಿ ಜನಸಂಖ್ಯೆ ಗಣನೆ ತೆಗೆದುಕೊಂಡರೆ ಜಾರ್ಕಂಡ ರಾಜ್ಯಕ್ಕಿಂತ 32ಪಟ್ಟು ಅಧಿಕ ವೈದ್ಯರಿದ್ದಾರೆ. ಇಂತಹ ವ್ಯತ್ಯಾಸಗಳಿರುವ ರಾಜ್ಯಗಳಿಗೆ ಒಂದೇ ತರಹದ ಪರೀಕ್ಷೆ ಹೇರುವುದಾದರು ಹೇಗೆ? ನಮ್ಮಂಥಹ ವೈವಿದ್ಯಮಯ ದೇಶಕ್ಕೆ ಒಂದೇ ತರಹದ ಪ್ರವೇಶ ಪ್ರಕ್ರಿಯೆಯಾದರು ಯಾಕೆ ಬೇಕು?

ಅರೋಗ್ಯ ರಾಜ್ಯದ ಸುಪರ್ಧಿಗೆ ಒಳಪಟ್ಟಿರುವುದರಿಂದ, ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ (concurrent list), ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚಿಗೆ ಅಂಗೀಕೃತವಾದ ಹೊಸ ಕಾನೂನನ್ನ ದೇಶದ ರಾಷ್ಟ್ರಪತಿಗಳು ಪ್ರಶಂಸಿಸಿ, ಸಮ್ಮತಿಸಬೇಕು. ಇಷ್ಟಾದ್ರೂ ನೀಟ್ ಪರೀಕ್ಷೆಗಳನ್ನ ತಮಿಳುನಾಡಿನಲ್ಲಿ ಮುಂದುವರೆಸಿದರೆ ಒಂದು ಕಡೆ ಅದು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಇನ್ನೊಂದೆಡೆ ಅದು ದೇಶದ ಫೆಡರಲಿಸಂಗೆ ಮಾಡಿದ ಅವಮಾನವಾಗುತ್ತದೆ.

ಮೂಲ: ಸೆಲ್ವಂ ಧರಣಿಧರನ್ (ಆಕ್ಸ್ಫರ್ಡ್ ವಿಶ್ವಾವಿದ್ಯಾಲಯ/ ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸೈಸ್ನ್ಸ್ ಹಳೆಯ ವಿದ್ಯಾರ್ಥಿ)
ಕನ್ನಡಕ್ಕೆ : ಹರೀಶ್ ಗಂಗಾಧರ್

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ; ಈ ಲಿಂಕ್ ಬಳಸಿ ಫಲಿತಾಂಶ ವೀಕ್ಷಿಸಿ
ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023 -24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಲಿದೆ.

ಈಗಾಗಲೇ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಇಂದು ಬೆಳಿಗ್ಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟ ಮಾಡಿತ್ತು. ಇಂದು ಬೆಳಗ್ಗೆ 10.30 ರ ನಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in, https://kseeb.kar.nic.in  ವೆಬ್ಸೈಟ್ ಗಳಲ್ಲಿ ವೀಕ್ಷಿಸಬಹುದು.

ಸುಮಾರು 4.41 ಲಕ್ಷ ವಿಧ್ಯಾರ್ಥಿಗಳು ಮತ್ತು 4.28 ಲಕ್ಷ ವಿಧ್ಯಾರ್ಥಿಗಳು, ಒಟ್ಟು 8.69 ಲಕ್ಷ ವಿಧ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು ಫಲಿತಾಂಶ ಇಂದು ಪ್ರಕಟವಾಗಲಿದೆ.

ಮಲೆನಾಡೆಂದರೆ…
ಹೆಂಗಸರಿಗೆ ಕೆಲಸದ ಅವಧಿ ಒಂಭತ್ತು ಗಂಟೆಯಿಂದ 3.30 ಆದರೆ ಗಂಡಸರಿಗೆ ಹೆಚ್ಚು ಕಮ್ಮಿ ಐದರ ಹೊತ್ತಾಗುತ್ತದೆ. 10.30 ರ ಚಹಾ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಅಲ್ಲೇ ಆಗುತ್ತದೆ. ಸಂಜೆ ಮನೆಗೆ ಬಂದು ಕಾಫಿ ಕುಡಿಯುವಷ್ಟು ಸಮಯ ಮಾತ್ರ ಅವರದ್ದು. ಮತ್ತೆ ಹಂಡೆಗೆ ನೀರು ತುಂಬ ಬೇಕು, ಮನೆಯವರಿಗೆ ಅಡಿಗೆ ಸಿದ್ಧವಾಗಬೇಕು. ಕೆಲವೊಮ್ಮೆ  ಇದಿಷ್ಟನ್ನು ಮಾಡಿ ಮನೆಯ ಹೆಂಗಸರು ಅಡಿಕೆ ಸುಲಿಯುವುದಕ್ಕೋ, ಉದುರು ಹೆಕ್ಕುವುದಕ್ಕೋ ಹೋಗುತ್ತಾರೆ, ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗುವಾಗ ಗಡಿಯಾರದ ಚಿಕ್ಕ ಮುಳ್ಳು ಹನ್ನೊಂದರ ಮುಂದಿರುತ್ತದೆ- ರಾಹುಲ್‌ ಆರ್‌ ಸುವರ್ಣ, ಪತ್ರಿಕೋದ್ಯಮ ವಿದ್ಯಾರ್ಥಿ

ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಮಲೆನಾಡಿನಲ್ಲಿ ಇರಲು ಇಚ್ಚಿಸುವವರು ಇದ್ದಾರೆ. ಮಲೆನಾಡೆಂದರೆ ಮೊದಲು ನೆನಪಾಗುವುದು ಅಲ್ಲಿನ ಹಸಿರು ಶ್ರೀಮಂತಿಕೆ, ಆದರೆ ಅಲ್ಲಿ ಬದುಕು ಸವೆಸುವವರ ಕುರಿತು ನಾವು ಯಾರೂ ಕೂಡ ತಿಳಿದುಕೊಳ್ಳಲು ಬಯಸುವುದೇ ಇಲ್ಲ.

ಮಲೆನಾಡಿನ ಜನರು ಮನೆಯಲ್ಲಿ ಸ್ವಂತ ವಾಹನಗಳನ್ನು ಹೊಂದಿರುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ, ಕೃಷಿ ಭೂಮಿಯನ್ನು ಮಾತ್ರ ಹೆಚ್ಚಿನ ಎಲ್ಲಾ ಕುಟುಂಬಗಳು ಹೊಂದಿರುತ್ತವೆ. ಮಲೆನಾಡಿನ ಮುಂಜಾನೆಯ ಕುರಿತು ಸ್ವಲ್ಪ ಹೇಳುವುದಾದರೆ ಅಲ್ಲಿ ಎಲ್ಲರಿಗಿಂತ ಮೊದಲು ಬೆಳಕು ಹರಿಯುವುದು ಮನೆಯಲ್ಲಿ ಸಾಕಿದಂತಹ ಕೋಳಿಗಳಿಗೆ. ಅವುಗಳೇ ಮಲೆನಾಡಿನ ಅಲರಾಂ ಎಂದರೆ ನಿಜಕ್ಕೂ ತಪ್ಪಾಗದು. ಅಲ್ಲಿಂದ ಆರಂಭವಾಗುವ ಮಲೆನಾಡಿಗರ ದಿನಚರಿ ಅದ್ಭುತವಾಗಿ ಸಾಗುತ್ತದೆ. ಸಾಮಾನ್ಯವಾಗಿ ಒಂದು ಕುಟುಂಬ ಎಂದರೆ ಅಜ್ಜ ಅಜ್ಜಿಯರಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲರೂ ಇರುತ್ತಾರೆ. ಮಕ್ಕಳಿಗೆ ಬೆಳಗಾದರೆ ಮೊದಲ ಕೆಲಸ ಕಾಫಿ ಲೋಟ ಬಾಯಿಗಿಟ್ಟುಕೊಂಡು ಒಲೆಯ ಎದುರಿಗೆ ಕೂರುವುದು. ಅದು ಮನೆಯಲ್ಲಿ ಅಪ್ಪ ಏಳುವವರೆಗೆ ಮಾತ್ರ. ಎದ್ದ ಕೂಡಲೇ ಮಗ ಬಚ್ಚಲಿನಲ್ಲಿ ಬಾಯಿ ಮುಕ್ಕಳಿಸುತ್ತಿರುತ್ತಾನೆ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವುದು ಪಿತೃ ಪ್ರಧಾನ ಕುಟುಂಬಗಳು. ಮನೆಯ ಯಜಮಾನನಾದವನು ಮನೆಯಿಂದಾಚೆ ಹೋಗಿ ದುಡಿದು ಬರುತ್ತಾನೆ. ಆತನ ಹೆಂಡತಿ ಮನೆ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತಾಳೆ. ಈಗೀಗ ಮಹಿಳೆಯರು  ಕೂಡ ಸ್ವತಃ ತಾವೇ ದುಡಿಯುತ್ತಾರೆ. ಇದು ಒಂದು ರೀತಿಯದ್ದಾದರೆ ಇನ್ನು ಮುಂದಿನದ್ದು ಮತ್ತೊಂದು ರೀತಿಯದ್ದು.

ಚಿತ್ರ : ಗೂಗಲ್

ಬೆಳಿಗ್ಗೆ ಕೆಲಸಕ್ಕೆ ಹೋಗುವ ಗಂಡನಿಗೆ ಬುತ್ತಿ, ಶಾಲೆಗೆ ತೆರಳುವ ಮಕ್ಕಳಿಗೆ ತಿಂಡಿ, ಇವಿಷ್ಟು ಬೆಳಗ್ಗೆ 8 ರ ಒಳಗೆ ಸಿದ್ಧವಾಗಬೇಕು. ಅಂದರೆ ಆಕೆ ಎಷ್ಟು ಹೊತ್ತಿಗೆ ಹಾಸಿಗೆ ಬಿಡಬೇಕೆಂದು ನೀವೇ ಯೋಚನೆ ಮಾಡಿ ನೋಡಿ. ಅದಲ್ಲದೆ ಎಲ್ಲರೂ ಕೆಲಸಕ್ಕೆ ಹೊರಡುವ ಸಮಯಕ್ಕೇ ತಾನೂ ಹೊರಡಬೇಕು. ಜೀವನದಲ್ಲಿ ಸಣ್ಣ ಪುಟ್ಟ ಕಷ್ಟಗಳಿಗೆ ನಲುಗಿ ಹೋಗುವ ನಾವೆಲ್ಲಿ? ದಿನದ ಹಗಲಿನ ಅವಧಿ ಪೂರ್ತಿ ದುಡಿಯುವ ಅವರೆಲ್ಲಿ?

ಮನೆಯ ಯಜಮಾನನಾದವನು ಬಾವಿ ತೋಡುವುದಕ್ಕೋ ಅಥವಾ ಗಾರೆ ಕೆಲಸಕ್ಕೋ ಹೋದರೆ ಆತನ ಹೆಂಡತಿ ಊರಿನ ಎಸ್ಟೇಟ್ ಅಥವಾ ಸಣ್ಣ ಪುಟ್ಟ ತೋಟಗಳಿಗೆ ಬೇರೆ ಹೆಂಗಸರೊಂದಿಗೆ ಅತ್ತ ಹೆಜ್ಜೆ ಹಾಕಿಬಿಡುತ್ತಾಳೆ. 9 ಗಂಟೆಯ ಹೊತ್ತಿಗೆ ಕೆಲಸದ ಜಾಗಕ್ಕೆ ತಲುಪಿದರೆ, ಅಲ್ಲಿಂದ ಹೆಂಗಸರಿಗೆ ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದು, ಕಾಫಿ ಹಣ್ಣು ಕೊಯ್ಯುವುದು, ಚಿಗುರು ತೆಗೆಯುವುದು ಮುಂತಾದವು ಆಕೆಯ ಕೈಗೆ ಸಿಗುವ ಕೆಲಸಗಳು. ಹಾ…! ಆಗ ಹೇಳಿದುದರ ಕುರಿತು ಒಂದು ಸಾಲು ನೆನಪಿಗೆ ಬರುತ್ತಿದೆ. ನಾನಾಗ ಹೇಳಿದೆ ಈಗೀಗ ಮನೆಯ ಹೆಂಗಸರು ಕೆಲಸಕ್ಕೆ ಹೋಗುತ್ತಾರೆಂದು. ತಾನು ಸಮರ್ಥಳು ಹಾಗೂ ತನ್ನಿಂದ ಆಗದೆ ಇರುವುದು ಯಾವುದು ಇಲ್ಲ ಎನ್ನುವುದನ್ನು ಸಾಬೀತು  ಪಡಿಸಿಕೊಳ್ಳುವ ಉದ್ದೇಶ ಒಂದು ಕಡೆಯಾದರೆ, ಮತ್ತೊಂದು  ಕುಡಿತ ಎನ್ನುವುದು ಯಾರನ್ನು ಬಿಟ್ಟಿದೆ ಹೇಳಿ? ಎಳೆಯರಿಂದ ಹಿಡಿದು ಹಳೆಬರನ್ನೂ ತನ್ನತ್ತ ಲೀಲಾಜಾಲವಾಗಿ ಸೆಳೆದುಕೊಂಡು ಸಾವಿನ ಬಾಯಿಗೆ ಅದು ತಳ್ಳುತ್ತದೆ. ಇದಿಷ್ಟು ಹೇಳಿದ ಮೇಲೆ ಕುಡಿತದ ಚಟ ಯಾರಿಗೆ ಎಂಬ ಪ್ರಶ್ನೆ ಬೇಡ.

ಚಿತ್ರ : ಗೂಗಲ್

ಮತ್ತೆ ವಿಷಯಕ್ಕೆ ಬರೋಣ. ಹೆಂಗಸರಿಗೆ ಕೆಲಸದ ಅವಧಿ 9 ರಿಂದ 3:30 ಆದರೆ ಗಂಡಸರಿಗೆ ಹೆಚ್ಚು ಕಮ್ಮಿ 5 ರ ಹೊತ್ತಾಗುತ್ತದೆ. 10.30 ರ ಚಹಾ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಅಲ್ಲೇ ಆಗುತ್ತದೆ. ಸಂಜೆ ಮನೆಗೆ ಬಂದು ಕಾಫಿ ಕುಡಿಯುವಷ್ಟು ಸಮಯ ಮಾತ್ರ ಅವರದ್ದು. ಮತ್ತೆ ಹಂಡೆಗೆ ನೀರು, ಮನೆಯವರಿಗೆ ಅಡಿಗೆ ಸಿದ್ಧವಾಗಬೇಕು. ಕೆಲವೊಮ್ಮೆ  ಇದಿಷ್ಟನ್ನು ಮಾಡಿ ಮನೆಯ ಹೆಂಗಸರು ಅಡಿಕೆ ಸುಲಿಯುವುದಕ್ಕೋ, ಉದುರು ಹೆಕ್ಕುವುದಕ್ಕೋ ಹೋಗುತ್ತಾರೆ, ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗುವಾಗ ಗಡಿಯಾರದ ಚಿಕ್ಕ ಮುಳ್ಳು ಹನ್ನೊಂದರ ಮುಂದಿರುತ್ತದೆ.

ಇದು ಮಲೆನಾಡು ಮತ್ತದರ ಮಕ್ಕಳ ಕಥೆ. ಹೀಗೆ ಹುಡುಕುತ್ತ ಹೋದರೆ ನಮಗೆ ಅರಿವಿಗೆ ಬಾರದ ಅದೆಷ್ಟೋ ಕುತೂಹಲಕಾರಿ ವಿಷಯಗಳಿವೆ. ಅಲ್ಲಿರುವ ಜನರ ಜೀವನ ಶೈಲಿ ನಿಜಕ್ಕೂ ಒಂದು ರೀತಿ ಸಾಹಸಮಯ. ಅವರಿಗೆ ಅವರೇ ಸರಿ ಸಾಟಿ, ಜಗತ್ತು ಇಂದು ಎಷ್ಟೇ ಮುಂದೆ ಬಂದಿರಬಹುದು ಆದರೆ, ನೆಮ್ಮದಿಯ ಜೀವನ ನಡೆಸುವುದರಲ್ಲಿ ನಾವಿನ್ನು ಅಲ್ಲೇ ಇದ್ದೇವೆ.

ರಾಹುಲ್‌ ಆರ್‌ ಸುವರ್ಣ

ಪತ್ರಿಕೋದ್ಯಮ ವಿದ್ಯಾರ್ಥಿ, ಎಂಜಿಎಂ ಕಾಲೇಜು, ಉಡುಪಿ.‌

ಇದನ್ನೂ ಓದಿ  ಭಕ್ತರ ಪ್ರೀತಿ; ಸ್ವಾಮಿಗಳ ಪಜೀತಿ

ಅಲೆಮಾರಿ ಹುಡಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ | ಭಾಗ-2
ಹೊಡೆಯುತ್ತಲೇ ತಿದ್ದಿದವರು ಇವರು!

ಒಂದಿನ ಗಣಿತ ಗುಣಾಕಾರ ಭಾಗಕಾರ ಬರೆಯಿಸಿ ಬಾಯಿಪಾಠ ಮಾಡಿ ನಾಳೆ ಹೇಳಬೇಕು ಎಂದು ಹೇಳಿದ್ದರು ಅಮರಮ್ಮ ಟೀಚರ್. ನಾನು ಕಂಠಪಾಠ ಮಾಡಿರಲಿಲ್ಲ. ಎಲ್ಲಾ ಶಿಕ್ಷಕರು ನಾಲ್ಕು ಏಟು ಹೊಡೆದರೆ ಇವರು ಆರು ಏಟು ಹೊಡಿಯೋಕೆ ಶುರು ಮಾಡಿದರು. ಅವರ ಕೈ ಕೆಂಪಾಗಿ ಹೋಯಿತು. ಮತ್ತೆ ನಾಳೆ ಕೇಳುತ್ತೇನೆ ಹೇಳದಿದ್ದರೆ ಇನ್ನೂ ಹೆಚ್ಚಿಗೆ ಏಟು ಇವೆ ನೋಡೆಂದರು…ಅಲೆಮಾರಿ ಸಮುದಾಯದ ಎಸ್‌ ಕೆ ಉಮೇಶ ಶಾಲೆ ಓದಿದ ಕಥೆ-ವ್ಯಥೆಯ ಎರಡನೇ ಭಾಗ ಅವರದೇ ಮಾತುಗಳಲ್ಲಿ ಇಲ್ಲಿದೆ.

ನಾಲ್ಕನೇ ತರಗತಿಯವರೆಗೆ ಸರ್ಕಾರಿ ಶಾಲೇಲಿ ಏನೂ ಕಲಿಯದ ನನ್ನನ್ನು ಐದನೇ ಕ್ಲಾಸಿಗೆ, ಊರಿನ ಕೋಠಾ ಕ್ರಾಸ್ ಬಳಿ ಇರುವ ಶ್ರೀ ಶರಣಬಸವೇಶ್ವರ ಎಂಬ ಖಾಸಗಿ ಶಾಲೆಗೆ ಅಡ್ಮಿಷನ್ ಮಾಡೋಕೆ ಬಸವರಾಜ ಅಣ್ಣ, ಶಿವರಾಜ ಅಣ್ಣ ಕರೆದುಕೊಂಡು ಹೋದ್ರು. ಅವರು ಹೆಡ್‌ ಮೇಡಂ ಶ್ರೀಮತಿ ಸರಸ್ವತಿ ಅವರತ್ರ ಮಾತಾಡಿದರು. ಸರಸ್ವತಿ ಟೀಚರ್ ನನಗೆ ʼನಿನ್ನ ಹೆಸರು, ಅಪ್ಪನ ಹೆಸರು ಬರಿʼ ಎಂದರು. ಬರೆದೆ. ಮತ್ತೆ ಅಮ್ಮನ ಹೆಸರು ಬರಿ ಅಂದರು. ಬರಲ್ಲ, ನನ್ನ ಹೆಸರು ಮತ್ತು ಅಪ್ಪನ ಹೆಸರು ಬಿಟ್ಟು ನಂಗೇನೂ ಬರೋದಿಲ್ಲೆಂದು ನಯವಾಗಿಯೇ ಹೇಳಿ ಬಿಟ್ಟೆ. ನನ್ನ ಈ ಇಬ್ಬರು ಅಣ್ಣಂದಿರು ಆ ಮುಖ್ಯೋಪಾಧ್ಯಾಯರಿಗೆ ಇವನು ಬಹಳ ದಡ್ಡ ಇದಾನೆ ಮೇಡಂ ನೀವೇ ಸರಿ ದಾರಿಲಿ ತರಬೇಕು ಎಂದು ವಿನಂತಿ ಮಾಡ್ಕೊಂಡ್ರು. ಅಡ್ಮಿಷನ್ ಆದ ಎರಡು ದಿನಗಳ ನಂತರ ನನ್ನನ್ನು  ಶಾಲೆಗೆ ಬಿಡಲು ಬಸವರಾಜ ಅಣ್ಣ ಬಂದು ಅಶ್ವಿನಿ ಟೀಚರ್‌ ನೊಂದಿಗೆ (ಎರಡನೇ ಮುಖ್ಯಗುರುಗಳು) ಮಾತಾಡಿ ಶಾಲೆಯಲ್ಲಿ ಬಿಟ್ಟು ಮನೆಗೆ ಹೋದ.

ಅಕ್ಕ ಲಕ್ಷ್ಮೀ (ನಮಗೆ ವಯಸ್ಸಿನ ಅಂತರವಿದ್ದರೂ, ಒಂದೇ ತರಗತಿಯಲ್ಲಿದ್ದೆವು.) ಅಶ್ವಿನಿ ಟೀಚರ್ ಕೊಠಡಿ ತೋರಿಸಿ ಕ್ಲಾಸ್ ಟೀಚರ್ ಅಮರಮ್ಮ ಅವರನ್ನು ಭೇಟಿ ಮಾಡಿಸಿ ಹೋದರು. ನಾನು ಮಾತಾಡುವಾಗ ತೊದಲುವ (ಈಗಲೂ ಮಾತನಾಡುವಾಗ ತೊದಲುತ್ತೇನೆ, ತೊದಲುವುದು ಈಗ ಹೆಚ್ಚಿನಂಶ ಕಡಿಮೆಯಾಗಿದೆ. ಆದರೆ ಸಂಪೂರ್ಣ ತೊದಲುವಿಕೆ ಯಾವಾಗ ನಿಲ್ಲುವುದೋ?) ಸಂಗತಿಯನ್ನು ಎಲ್ಲಾ ಹುಡುಗರಿಗೆ ಹೇಳುತ್ತಾ ʼಇವನ ಹೆಸರು ಉಮೇಶ. ತೊದಲು ಮಾತನಾಡುತ್ತಾನೆ. ನೀವು ಯಾರಾದರೂ ಹಂಗಿಸಿದರೆ, ಅಸಹ್ಯವಾಗಿ ಅವನ ಜೊತೆ ನಡೆದು ಕೊಂಡರೆ ಕಠಿಣ ಶಿಕ್ಷೆ ಕೊಡಲಾಗುವುದು ಎಂದು ಅವರಿಗೆ ಹೇಳಿ ನನ್ನಲ್ಲಿ  ಧೈರ್ಯ ತುಂಬಿದ್ದರು ಆ ಅಮರಮ್ಮ ಟೀಚರ್!

ಮೊದಲನೇ ದಿನ ಶಾಲೆಯಲ್ಲಿ GK ಶಿಕ್ಷಕರಾದ ಗೀತಾ ಟೀಚರ್ರು ಎಲ್ಲರನ್ನೂ ಕರೆದು ಒಬ್ಬೊಬ್ಬರಿಗೆ ಕನ್ನಡ ಓದಿಸುತ್ತಿದ್ದರು. ಓದಲು ಬಾರದವರಿಗೆ ಹೊಡೆಯುತ್ತಿದ್ದರು ಕೂಡ! ನನ್ನನ್ನು ಕರೆದರು. ಓದೋಕೆ ಬರಲ್ಲ ಟೀಚರ್ ಅಂದೆ. ಅವರು ಇಲ್ಲಿ ಬಾರೋ ಮೊದ್ಲು ಅಂದು ‘ಆನಂತರ’ ಅಂತ ಒಂದೇ ಶಬ್ದವನ್ನು ಓದು ಎಂದಾಗ ಬರಲ್ಲ ಟೀಚರ್ ಎಂದೆ. ಅವರು ಒಂದೊಂದು ಅಕ್ಷರ ಬಿಡಿಸಿ  ಹೇಳಿಕೊಟ್ಟು ನನಗೆ ಹೊಡೆಯದೇ ಕಳಿಸಿದರು.

ಆವತ್ತೆ PT ರಮೇಶ ಮಾಸ್ತರ ನಾಡಗೀತೆ ಐದು ಸಲ ಬರೆದುಕೊಂಡು ಬರಬೇಕೆಂದು ಹೋಂವರ್ಕ್ ಕೊಟ್ಟರು. ಆ ವರೆಗೆ ಒಂದಿನನೂ ಬರೆಯದ ಹುಡುಗ ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮೇಲೆ ರಾತ್ರಿ ಹತ್ತರವರೆಗೆ ಬರೆಯುತ್ತಾ ಕುಳಿತಿದ್ದೆ. ನನ್ನವ್ವ ಹೆತ್ತಮ್ಮ ಕಮಲಮ್ಮ, ಯಾವತ್ತೂ ಬರೆಯಲು ಕುಳಿತು ಕೊಳ್ಳದ ನನ್ಮಗ ಇವತ್ತು ಬರ್ಕೋಂತಾ ಕುಂತಾನೆ ಅಂದ್ರೆ ಶಾಲೆ ತುಂಬಾ ಸ್ಟ್ರಿಕ್ಟ್ ಇದೆ ಅನ್ಸುತ್ತೆ ಅಂತಿದ್ದರು.

ಬೆಳಿಗ್ಗೆ ಮನೆಪಾಠ ಕೊಟ್ಟಿದ್ದನ್ನು ಚೆಕ್ ಮಾಡುತ್ತಿದ್ದರು. ನಾನು ಆ ಹೋಂವರ್ಕ್ ಮಾಡಿದ್ದೆ. ಆದರೆ ರಾಷ್ಟ್ರಗೀತೆ ಬರೆದುಕೊಂಡು ಹೋಗಿದ್ದೆ. ಮಾಸ್ಟ್ರು ನನ್ನ ನೋಡಿ ನಕ್ಕು ರಾಷ್ಟ್ರಗೀತೆ ಅಲ್ಲಪ್ಪಾ ಉಮೇಶಾ! ನಾಡಗೀತೆ.. ನಾಳೆ ಮತ್ತೆ ಬರೆದುಕೊಂಡು ಬಾ… ಹೋಗು ಅಂದರು. ನನಗೆ ಹೊಡೆಯಲಿಲ್ಲ. ಬರೆದುಕೊಂಡು ಬರದವರಿಗೆ ಹೊಡೆಯುತ್ತಿದ್ದರು. ಗಣಿತ ಸಬ್ಜೆಕ್ಟ್‌ನ ಲೆಕ್ಕ ಬೋರ್ಡಿನ ಮೇಲೆ ಬರೆದಿದ್ದನ್ನು ನಾನು ನೋಟ್ಸ್‌ನಲ್ಲಿ ಬರೆದುಕೊಳ್ಳುತ್ತಿದ್ದೆ. ಅಮರಮ್ಮ ಟೀಚರ್ ನೋಡಿ ನೋಟ್ಸ್‌ನಲ್ಲಿ ಬರ್ಕೋಬಾರದು ಕಚ್ಚಾ ಕಾಪಿಯಲ್ಲಿ ಬರೆಯಬೇಕೆಂದು ಗದರಿಸಿದರು. ನನಗೆ ಮಾತ್ರ ನೋಟ್ಸ್ ಅಂದರೆ ಏನೆಂದೇ  ಗೊತ್ತಿರಲಿಲ್ಲ!

ಒಂದಿನ ಕ್ಲಾಸ್ ಟೀಚರ್ ಎಲ್ಲಾ ವಿಷಯಗಳ ನೋಟ್ಸ್ ಚೆಕ್ ಮಾಡುತ್ತಿದ್ದರು. ನಾನು ಒಂದು ವಿಷಯ ಕೂಡ ಬರೆದಿರಲಿಲ್ಲ. ಹೊಡೆದ್ರಪ್ಪಾ ಚೆನ್ನಾಗಿ. ಶಾಲೆ ಬಿಟ್ಟ ನಂತರ ಮನೆಯಲ್ಲಿ ಬರೆಯೋಕೆ ಅಂತ ಅಕ್ಕನ ನೋಟ್ಸ್ ಇಸ್ಕೊಂಡು ಕುಂತೆ. ನಾಲ್ಕು ಪೇಜ್ ಬರೆದೆ. ಸುಸ್ತಾಗಿ ಬೇಸರವಾಯಿತು. ಬರಿಯೋದನ್ನು ಅಲ್ಲಿಗೆ ನಿಲ್ಲಿಸಿ ಬಿಟ್ಟೆ. ಮತ್ತೆ ಬೆಳಿಗ್ಗೆ ಚೆಕ್ ಮಾಡಿದರು. ಮತ್ತೆ ಅದೆ ಗತಿನೇ. ಮತ್ತೆ ಹೊಡಿಯೋಕೆ ಶುರು ಮಾಡಿದರು. ಮನೆಗೆ ಬಂದ ತಕ್ಷಣ ಹಗಲು-ರಾತ್ರಿ ಎನ್ನದೇ ಎಲ್ಲಾ ವಿಷಯಗಳನ್ನು ಬರೆದು ಮುಗಿಸಿದೆ. ಆದರೂ ಒಂದು ವಿಷಯ ಬಾಕಿ ಇತ್ತು ಅದು ಸಮಾಜ ವಿಜ್ಞಾನ. ಆ ವಿಷಯವೇ ನನಗೆ ಗೊತ್ತಿರಲಿಲ್ಲ. ಅಕ್ಕನ ನೋಟ್ಸ್‌ ಸಹಾಯದಿಂದ ಎಲ್ಲವನ್ನೂ ಬರೆದು ಮುಗಿಸಿದೆ.

ಇದೆಲ್ಲಾ ಮುಗಿದ ನಂತರ ನಮ್ಮೂರಿನ ಜಾತ್ರೆಗೋಸ್ಕರ ನಾಲ್ಕು ದಿನ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋದ ನಂತರ ಅಮರಮ್ಮ ಟೀಚರ್ ಹೊಡಿಯಲಿಲ್ಲ. ಅದರೆ ಶಿಕ್ಷೆ ಕೊಟ್ಟರು. ಬೆಳಿಗ್ಗೆಯಿಂದ ಶಾಲೆ ಬಿಡೋವರೆಗೂ ಕೂರುವಂತಿಲ್ಲ, ನಿಂತಿರಬೇಕೆಂದು ಕಟ್ಟಪ್ಪಣ್ಣೆ  ಹೊರಡಿಸಿದಂತೆ ಹೇಳಿಯೇ ಬಿಟ್ಟರು. ನನಗೆ ನಿಂತು-ನಿಂತು ಸಾಕಾಗಿತ್ತು. ನಾನೊಬ್ಬನೇ ನಿಂತಿಲ್ಲ. ನನ್ನ ಜೊತೆಗೆ ಸಣ್ಣದಾದ ದಂಡೇ ಇತ್ತು. ನನಗಂತೂ ಕೈ-ಕಾಲು, ಬೆನ್ನು-ಸೊಂಟ ಬಹಳ ನೋವು ಬಂದಿತ್ತು. ಈ ಶಿಕ್ಷೆ ಬೇಡಪ್ಪಾ ಅಂತ  ಒಂದೆರಡು ತಿಂಗಳು ಒಂದು ದಿನವೂ ತಪ್ಪದೇ ಸರಿಯಾಗಿ ಶಾಲೆಗೆ ಹೋದೆ. ಹೋಂ ವರ್ಕ್ ಸರಿಯಾಗಿ ಮಾಡುತ್ತಿದ್ದೆ. ಮತ್ತೆ ಕೆಲವು ದಿನಗಳ ನಂತರ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಮನೆಪಾಠ ಬರೆಯುತ್ತಿರಲಿಲ್ಲ. ಆಗೆಲ್ಲ ದಿನಾಲೂ ಎಲ್ಲಾ ಟೀಚರ್‌ಗಳು ಕೈಗೆ ಬಡಿಗೆಯಿಂದ ಹೊಡೆಯುತ್ತಿದ್ದರು.

ಇದನ್ನೂ ಓದಿ- ಅಲೆಮಾರಿ ಹುಡುಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ

ಅಶ್ವಿನಿ ಟೀಚರ್ ನನ್ನ ಹಸಿಹಸಿ ದಡ್ಡತನ ನೋಡಿ ನನಗೆ ಹೋಂವರ್ಕ್ ಪಾಠಗಳು ಬೇಡ ಅಂತ “ಅ, ಆ, ಇ, ಈ” ಎರಡು ಗೆರೆ ಕಾಪಿಯಲ್ಲಿ ಹಾಕಿಕೊಡುತ್ತಿದ್ದರು. ಅವರು ಎರಡೇ ಪೇಜ್ ಹಾಕಿ ಕೊಡುತ್ತಿದ್ದರು. ಕನ್ನಡ ವಿಷಯವೊಂದೇ ಸರಿಯಾಗಿ ಹೋಂವರ್ಕ್ ಮಾಡುತ್ತಿದ್ದೆ. ಉಳಿದ ಎಲ್ಲಾ ವಿಷಯಗಳದ್ದು ಮಾಡುತ್ತಿರಲಿಲ್ಲವಾದ್ದರಿಂದ ದಿನಾಲೂ ಹೊಡೆಸಿ ಕೊಳ್ಳುತ್ತಿದ್ದೆ.

ಒಂದಿನ ಕನ್ನಡ ಟೀಚರ್ ಅದೊಂದೇ ಹೋಂವರ್ಕ್ ಮಾಡಬೇಡಪ್ಪಾ ಎಲ್ಲ ಪಾಠಗಳು, ವಿಷಯಗಳು ಕೂಡ ಬರಿ ಎಂದರು. ನಾನು ಆವತ್ತಿನಿಂದ “ಅ ಆ ಇ ಈ” ಹಾಕಿಸಿ ಕೊಳ್ಳುತ್ತಿರಲಿಲ್ಲ. ನಮ್ಮ ಗೌರಿ ಟೀಚರ್ (ಶಾಲೇಲಿ ಇಂಗ್ಲೀಷ್-ಸಮಾಜವಿಜ್ಞಾನ ಪಾಠ ಮಾಡುತ್ತಿದ್ದರು)ಮನೆಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. ಅಲ್ಲಿ ತಿಂಗಳ ಫೀಸ್ 150 ರೂ. ಮಾತ್ರ. ನಾನು ಅಡ್ವಾನ್ಸ್ 50 ರೂ. ಕಟ್ಟಿದೆ ಕೆಲವು ದಿನ ಹೋದೆ. ಅಲ್ಲಿ ನಾನು ಕಲ್ತಿದ್ದು “ಅ ಯಿಂದ ಳ” ವರೆಗೆ ಮಾತ್ರ. 15 ದಿನಗಳು ಮಾತ್ರ ಹೋಗಿ ಆಮೇಲೆ ಯಾಕೋ ಹೋಗಲೇ ಇಲ್ಲ. ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅವರ ವಿಷಯದಲ್ಲಿ ಸೊನ್ನೆ ಮಾರ್ಕ್ಸ್ ಪಡೆದಿದ್ದೆ. ಅವರು ಕರೆದು ಯಾಕೆ ಟ್ಯೂಷನ್ಗೆ ಬರುತ್ತಿಲ್ಲ ಅಂದಾಗ, ನಾನೇನೂ ಮಾತಾಡದೆ ಸುಮ್ಮನೇ ನಿಂತೆ. ನಾನು ಉತ್ತರ ಹೇಳುತ್ತೇನೆ ಬರೀ ಎಂದರು. ಬರಲ್ಲ ಟೀಚರ್ ಅಂದೆ. ಕೆನ್ನೆಗೆ ಕೈ ಸಡ್ಲು ಬಿಟ್ಟು ಹೊಡೆದರು.

ಉಡಾಳ ಗೆಳೆಯರ ಜೊತೆ ಸೇರಿ ಟ್ಯೂಷನ್ನಿಗೆ ಹೋಗುವ ಹುಡುಗನೊಬ್ಬ ಅವರಿಗೆ ಕೆಟ್ಟದಾಗಿ ಬೈದಿದ್ದ. ಟ್ಯೂಷನ್ ಹುಡುಗರು ಆ ಟೀಚರಿಗೆ ಎಲ್ಲವನ್ನೂ ಸ್ಪಷ್ಟವಾಗಿ ಬಿಡಿಸಿ ಹೇಳಿದ್ದರು. ಬೆಳಿಗ್ಗೆ ಶಾಲೆಯಲ್ಲಿ ನಮಗೆಲ್ಲರಿಗೆ ಕಠಿಣ ಶಿಕ್ಷೆ ಕೊಟ್ಟರು. ಬೈದಿದ್ದವನ ಪೋಷಕರನ್ನು ಕರೆಸಿ ಎಚ್ಚರಿಕೆಯನ್ನು ಕೊಟ್ಟರು. ನಂತರ ನನ್ನ ಮನೆಯಲ್ಲಿ ಇವನನ್ನೂ ಹೀಗೆ ಬಿಟ್ಟರೆ ಉದ್ದಾರ ಆಗಲ್ಲ ಅಂತ ಅಣ್ಣ ಶಿವರಾಜ ನನಗೆ ಕನ್ನಡ ಓದುವುದು, ಬರೆಯುವುದು ತಿದ್ದುತ್ತಾ ನಗುನಗುತ್ತ ಕಲಿಸಿದರು. ಕಲಿಸುವ ಸಮಯದಲ್ಲಿ ಒಂದಿನ ಕೂಡ ಹೊಡೆದಿಲ್ಲ. ಬಹಳ ಸಲ ಬೈದಿದ್ದಾನೆ ಅಷ್ಟೇ! ಆತನೆ ನನಗೆ ಕನ್ನಡ ಕಲಿಸಿದ್ದು. ಆದರೂ ಕನ್ನಡ ಓದೋಕೆ ಸರಿಯಾಗಿ ಬರುತ್ತಿರಲಿಲ್ಲ ಒತ್ತಕ್ಷರ ಓದೋಕೆ ಬರುತ್ತಿರಲಿಲ್ಲ. ಶಾಲೆಯಲ್ಲಿ ಒಂದನೇ ಕಿರು ಪರೀಕ್ಷೆ ಇಟ್ಟಿದ್ದರು. ಅವುಗಳಲ್ಲಿ ನಾನು ಗಳಿಸಿದ್ದ ಅಂಕಗಳು ಜೀರೋ ಮಾತ್ರ. ಅದನ್ನು ಟೀಚರ್ ಅಮರಮ್ಮ ಗಮನಿಸಿ ಪಾಲಕರನ್ನು ಕರೆದುಕೊಂಡು ಬರಬೇಕೆಂದು ಹೇಳಿದರು. ಬೆಳಿಗ್ಗೆ ಬಸವರಾಜ ಅಣ್ಣನ್ನ ಕರೆದುಕೊಂಡು ಹೋದೆ. ನನ್ನ ದಡ್ಡತನವನ್ನು ವಿಸ್ತಾರವಾಗಿ ಅಣ್ಣನ ಮುಂದೆ ಬಿಚ್ಚಿಟ್ಟರು. ಓದಲ್ಲ, ಬರೆಯಲ್ಲ ಜೀರೋ ಮಾರ್ಕ್ಸ್ ಗಳಿಸಿದ್ದಾನೆ ನೋಡಿ ಎಂದು ಪೇಪರ್ ಕೊಟ್ಟರು. ಅದನ್ನು ನೋಡಿ ಅಣ್ಣ ಸುಮ್ಮನಾದ. ಪೋಷಕರ ಸಹಿ ಮಾಡಿ ಮನೆಗೆ ಬಂದ.

ಇಲ್ಲೊಂದು ವಿಷಯ ನಿಮಗೆ ಹೇಳಲೇಬೇಕು. ನನ್ನ ತೊದಲುವಿಕೆ ನನ್ನಿಂದ ಬಂದಿಲ್ಲ. ನನ್ನಪ್ಪ ತೊದಲುತ್ತಿದ್ದ. ಆತನ ತೊದಲುವಿಕೆಯೇ ವಂಶ-ಪಾರಂಪರ್ಯವಾಗಿ ಒಬ್ಬ ಅಣ್ಣ, ಅಕ್ಕ, ನನಗೂ ಬಳುವಳಿಯಾಗಿ ಬಂದುಬಿಟ್ಟಿತ್ತು. ಅವರಿಬ್ಬರೂ ಸುಧಾರಿಸಿದರೆ, ನಾನು ಮಾತ್ರ ಸ್ಪಷ್ಟವಾಗಿ ಮಾತನಾಡುವ ಹಂತದಲ್ಲಿದ್ದೇನೆ ಅಷ್ಟೆ  ಎಂದು ಹೇಳಬಹುದು.

ಅದೊಂದು ದಿನ ಗಣಿತ ನೋಟ್ಸ್ ಚೆಕ್ ಮಾಡಿ ಹುಡುಗರಿಗೆ ಹೊಡೆಯುತ್ತಿದ್ದರು ‘ದನಕ ಬಡದ್ಹಂಗಾ’ ಮುಂದಿನ ಪಾಳೆ(ಸರದಿ) ನನ್ನದೆ ಇದೆ ಎಂದು ನೆನೆದೇ ನನಗೆ ತುಂಬಾ ಭಯವಾಗಿ ಉಗುಳು ನುಂಗಿಕೊಳ್ಳುತ್ತಿದ್ದೆ. ನನ್ನ ಅದೃಷ್ಟ ಅದೇ ಸಮಯದಲ್ಲಿ ರೆಸ್ಟ್‌ಗೆ ಸಮಯ ಆಯಿತು ಉಮೇಶಾ ನಿಮಗೆ ನಾಳೆ ಚೆಕ್ ಮಾಡಿ ನೋಡಿಕೊಳ್ಳುತ್ತೇನೆ ಅಂದರು. ನಾನು ಹೊರಗೆ ಬಂದು ದೇವರಿಗೆ ಕೈ ಮುಗಿದೆ. ಶಾಲೆಯಿಂದ ಮನೆಗೆ ಬಂದ ತಕ್ಷಣ ಊಟ ಮಾಡಿ ಮನೆ ಮೇಲೆ ಒಬ್ಬನೇ ಬರ್ಕೋಂತ ಕುಳಿತು ನಾಲ್ಕರಿಂದ ಎಂಟು ಗಂಟೆಯವರೆಗೆ ಬರೆದು ಮುಗಿಸಿದೆ. ಬೆಳಿಗ್ಗೆ ಬಂದು ತೋರಿಸಿ ಅಂದು ಪೆಟ್ಟಿನಿಂದ ತಪ್ಪಿಸಿಕೊಂಡೆ. ಬಡಿಸಿಕೊಳ್ಳದ ದಿನವೆಂದರೆ ಅದು ನಮ್ಮ ಅದೃಷ್ಟದ ದಿನವೇ ಸರಿ. ಒಂದಿನ ಗಣಿತ ಗುಣಾಕಾರ ಭಾಗಕಾರ ಬರೆಯಿಸಿ ಬಾಯಿಪಾಠ ಮಾಡಿ ನಾಳೆ ಹೇಳಬೇಕು ಎಂದು ಹೇಳಿದ್ದರು ಅಮರಮ್ಮ ಟೀಚರ್. ನಾನು ಕಂಠಪಾಠ ಮಾಡಿರಲಿಲ್ಲ. ಎಲ್ಲಾ ಶಿಕ್ಷಕರು ನಾಲ್ಕು ಏಟು ಹೊಡೆದರೆ ಇವರು ಆರು ಏಟು ಹೊಡಿಯೋಕೆ ಶುರು ಮಾಡಿದರು. ಅವರ ಕೈ ಕೆಂಪಾಗಿ ಹೋಯಿತು. ಮತ್ತೆ ನಾಳೆ ಕೇಳುತ್ತೇನೆ ಹೇಳದಿದ್ದರೆ ಇನ್ನೂ ಹೆಚ್ಚಿಗೆ ಏಟು ಇವೆ ನೋಡೆಂದಾಗ, ಮರುದಿನ ಬಾಯಿಪಾಠ ಮಾಡಿ ಎಲ್ಲರೂ ಹೇಳಿದ ನಂತರ ತೊದಲುತ್ತಾ ಹೇಳಿದೆ. ನನ್ನನ್ನು ಎಬ್ಬಿಸಿ ನಿಲ್ಲಿಸಿ ಚಪ್ಪಾಳೆ ತಟ್ಟಿಸಿದರು.

ಹಂಗೂ ಹಿಂಗೂ ಮಾಡಿ 7ನೇ ಕ್ಲಾಸ್ ಮುಕ್ತಾಯ ಮಾಡಿಯೇ ಬಿಟ್ಟೆ. ಅಶ್ವಿನಿ ಟೀಚರ್ ಒಮ್ಮೆ ಪ್ರೈಮರಿಯಲ್ಲಿ ನಾಲ್ಕು ಜನರನ್ನು ಎಬ್ಬಿಸಿ (ಅದರಲ್ಲಿ ನಾನೂ ಒಬ್ಬ) ನೀವು ಸತ್ರೂ ಹತ್ತನೇ ತರಗತಿ ಪಾಸ್ ಆಗಲ್ಲ. ಬರೆದು ಕೊಡುತ್ತೇನೆ ಅಂದಿದ್ದರು. SSLCಯ ರಿಸಲ್ಟ್ ಬಂದಾಗ ರಸ್ತೆಯಲ್ಲಿ ಸಿಕ್ಕಿ ಅವರೇ ಅಭಿನಂದನೆಗಳು ತಿಳಿಸಿದ್ದರು.

ಒಂದಿನ ಯಾಕೋ ಅವರ ಮನೆಗೆ ಹೋಗಿದ್ದೆ ಕೆಲಸದ ವೇಳೆ ನನಗೆ ಡೈರಿ ಮಿಲ್ಕ್ ಚಾಕೂಲೇಟ್ ಕೊಟ್ಟಿದ್ದರು. ಏಳನೇ ಕ್ಲಾಸ್ ಮಾರ್ಕ್ಸ್‌ಕಾರ್ಡ್ ತರುವುದಕ್ಕೆ ಹೋದಾಗ ಅಶ್ವಿನಿ ಟೀಚರ್ ಯಾವ ಶಾಲೆಗೆ ಹಚ್ಚಿದಿ ಪಾ ಉಮೇಶ ಎಂದು ಕೇಳಿದರು. ನಾನು ವಿನಾಯಕ ಶಾಲೆ ಟೀಚರ್ರ್ ಅಂತ ತೊದಲುತ್ತಾ ಹೇಳಿದೆ. ಸರಿ, ಚೆನ್ನಾಗಿ ಓದು ಇಲ್ಲಿನ ತರಹ ಆ ಶಾಲೆಯಲ್ಲಿ ಮಾಡಿದರೆ “ಹುಚ್ಚನಾಯಿಗೆ ಒದ್ಹಂಗಾ ಒದಿತಾರ” ನೋಡು ಚೆನ್ನಾಗಿ ಅಭ್ಯಾಸ ಮಾಡೆಂದು ಶಾಲೆಯಲ್ಲಿ ಕೊನೆಯದಾಗಿ ಮಾತನಾಡಿದ್ದರು.

ಆ ಶಾಲೆಯಲ್ಲಿ ನನ್ನ ಪ್ರೀತಿಯ ಅಭಿಮಾನದ ಶಿಕ್ಷಕರು ಅಮರಮ್ಮ, ಅಶ್ವಿನಿ, ಗೌರಿ, ರೇಷ್ಮಾ, ದೌಲಮ್ಮ ಟೀಚರ್. ಇವರೇ ನನ್ನನ್ನು ದನಕ್ಕೆ ಹೊಡೆದ್ಹಂಗ ಹೊಡೆಯುತ್ತಿದ್ದರು. ಆದರೂ ನಾನು ಇವರನ್ನೇ ಪ್ರೀತಿಯಿಂದ ಇಷ್ಟಪಡುತ್ತೇನೆ. ಇವರ ಬಗ್ಗೆ ದೊಡ್ಡ ಅಭಿಮಾನವಿದೆ. ಹೊಡೆಯುತ್ತಲೇ ತಿದ್ದಿದವರು ಇವರು!

ಎಸ್‌ ಕೆ ಉಮೇಶ

ರಾಯಚೂರು ಜಿಲ್ಲೆಯ ಲಿಂಗಸಗೂರಿನ ಹಟ್ಟಿ ಚಿನ್ನದ ಗಣಿಯವರಾದ ಇವರು ಅಲೆಮಾರಿ ಸಮುದಾಯದಕ್ಕೆ ಸೇರಿದವರು. ಪ್ರಸ್ತುತ ಧಾರವಾಡದ ಕೆಇ ಬೋರ್ಡ್‌ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಪರಿಸರ ಸ್ನೇಹಿ ದೀಪಾವಳಿ ಆಚರಣೆ ಇರಲಿ
ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಗಾಯ, ಪ್ರಾಣಿಗಳಿಗೆ ಹಾನಿಯಾಗುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡ್ತಾನೇ ಇರುತ್ತೇವೆ. ಹೀಗಾಗಿ ಪಟಾಕಿಗಳ ಬಳಕೆ ಕಡಿಮೆ ಮಾಡಿ, ಮಾಲಿನ್ಯವನ್ನು ಸಹ ಕಡಿಮೆ ಮಾಡಿ ಉತ್ತಮವಾದ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಆಚರಣೆಯನ್ನು ಮಾಡೋಣ ಅನ್ನೋದು ನನ್ನ ಆಶಯ – ಅಭಿಷೇಕ್ ಚವ್ಹಾಣ, ವಿಜಯಪುರ

ಪ್ರತಿ ವರ್ಷದ ಕೊನೆಯಲ್ಲಿ ಬಲು ವಿಜೃಂಭಣೆಯಿಂದ ಆಚರಣೆ ಮಾಡುವ ಹಬ್ಬ ದೀಪಾವಳಿ. ತುಂಬಾ ಸಡಗರದಿಂದ ಮನೆ ಮಂದಿ ಎಲ್ಲರೂ ಸೇರಿ ಮನೆಯನ್ನು ಸ್ವಚ್ಛಗೊಳಿಸಿ ದೀಪಗಳಿಂದ ಅಲಂಕಾರ ಮಾಡುತ್ತಾರೆ ಜೊತೆಗೆ ಮನೆ ಮೇಲೊಂದು ಆಕಾಶ ಬುಟ್ಟಿ ಕಟ್ಟಿ ಅದಕ್ಕೂ ಅಲಂಕಾರ ಮಾಡುತ್ತಾರೆ.  ದೀಪಾವಳಿ ಹಬ್ಬ ಎಂದರೆ ಹಿಂದೆ ನಾವು ಮನೆ ಮಂದಿ ಎಲ್ಲರೂ ಸೇರಿ  ತಮ್ಮ ದುಡಿಮೆಯ ಕೆಲಸಗಳನ್ನು ಬಿಟ್ಟು ಪರಸ್ಪರ ಜೊತೆಗೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ  ಜನರು ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಇಂತಹ ವಿಶೇಷವಾದ ಹಬ್ಬಗಳನ್ನು ಆಚರಿಸದೆ ತಮ್ಮ ಮನೆಮಂದಿಗೆ  ಮಕ್ಕಳಿಗೆ ಸರಿಯಾದ ಸಮಯನ್ನು ಕೊಡದೆ, ಒತ್ತಡದಲ್ಲಿ ಜೀವನವನ್ನು ಸಾಗಿಸುತ್ತಿರುವುದನ್ನು ನೋಡಿ ತುಂಬಾ ವಿಷಾದವೆನಿಸುತ್ತದೆ.

ಮೊನ್ನೆ  ಸುಮ್ನೆ ಹಾಗೇ ಮಾರ್ಕೆಟ್ ಗೆ ಹೋಗಿದ್ದೆ. ಇಡೀ ಮಾರ್ಕೆಟ್ ಜನರಿಂದ ತುಂಬಿತ್ತು. ಹೆಣ್ಣುಮಕ್ಳು, ಗಂಡಮಕ್ಳು ಜೊತೆಗೆ ಮಕ್ಕಳಿಂದ ಹಬ್ಬದ ಖರೀದಿ ಜೋರು  ನಡೆದಿತ್ತು. ಅದರಲ್ಲಿ ಮುಸ್ಲಿಂ ಹಾಗೂ ಇನ್ನೂ ಬೇರೆ ಧರ್ಮದ, ಬೇರೆ ರಾಜ್ಯದ ಜನರು ಪಟಾಕಿ ಅಂಗಡಿ, ಬಟ್ಟೆ ಅಂಗಡಿ, ಸ್ಟೇಷನರಿ ಅಂಗಡಿ, ಹಾಗೂ ಹೂವು ಹಣ್ಣುಗಳ ಅಂಗಡಿಗಳಿಗೆ ಮುಗಿಬಿದ್ದಿದ್ದರು. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರು ಸರ್ವೆ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಸ್ನೇಹ, ಆತ್ಮೀಯತೆಯಿಂದ   ಹಬ್ಬ ಹರಿದಿನಗಳಲ್ಲಿ ಕೂಡಿ ಸಂಭ್ರಮಿಸುವುದನ್ನು ಹೆಚ್ಚಾಗಿ ನೋಡಬಹುದು. ಯಾವುದೇ ಭೇದ ಇಲ್ಲದೆ, ಯಾವುದೇ ಉಚ್ಚ ನೀಚ ಭಾವ ಇಲ್ಲದೆ ಜನರು ವಸ್ತುಗಳ ಖರೀದಿಯಲ್ಲಿ ತಲ್ಲೀನರಾಗಿರುವುದನ್ನು ನೋಡಿ ತುಂಬಾ ಖುಷಿಯಾಯ್ತು. ಬಹುತ್ವದ ಗಾಳಿಯ ಉಸಿರನ್ನು ತೆಗೆದುಕೊಳ್ಳುತ್ತಾ ಮುಂದೆ ಸಾಗಿದೆ.

ಹಿಂದಿನ ಕಾಲದಿಂದಲೂ ದೀಪಾವಳಿ ಹಬ್ಬದ ವಿಶೇಷವೇ ಬೇರೆ. ಮನೆ  ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ ಇಟ್ಟು ಕತ್ತಲಾದಂತೆ ಎಣ್ಣೆಯ  ಹಣತೆ ( ಹಿಟ್ಟಿನಿಂದ ಮಾಡಿದ ಹಣತೆ ಅಥವಾ ಮಣ್ಣಿನ ಹಣತೆ )  ಸಜ್ಜು ಮಾಡಿ ಮನೆ  ಹೊಸ್ತಿಲಿಗೆರಡು ಮನೆಯ ಮಾಡಗಳಲ್ಲಿ ಹಾಗೂ ಮಾಳಿಗೆಯ ಮೇಲೆ ಇಡುತ್ತಿದ್ದೆವು. ಆದರೆ ಕಾಲ ಕ್ರಮೇಣವಾಗಿ ಬದಲಾಗಿ ಎಣ್ಣೆಯ ದೀಪ ಹಾಗೂ ಮಣ್ಣಿನ  ಹಣತೆಗಳು  ಮಾಯವಾಗುತ್ತಿವೆ. ಬದಲಾಗಿ ಕೃತಕವಾದ ಕಲರ್ ಕಲರ್ ವಿದ್ಯುತ್ತಿನ ದೀಪಗಳು, ಸಣ್ಣ ಸಣ್ಣ ಎಲ್ ಇಡಿ ಬಲ್ಬ್ ಗಳು ಬಂದು ನಿಸರ್ಗ ಪ್ರಿಯ ನಮ್ಮ ಹಳೆಯ ದೀಪಾವಳಿ ಸೊಗಡನ್ನು ಮರೆಯಾಗಿಸುತ್ತಿದೆ. ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಗಾಯ, ಪ್ರಾಣಿಗಳಿಗೆ ಹಾನಿಯಾಗುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡ್ತಾನೇ ಇರುತ್ತೇವೆ. ಹೀಗಾಗಿ ಪಟಾಕಿಗಳ ಬಳಕೆ ಕಡಿಮೆ ಮಾಡಿ, ಮಾಲಿನ್ಯವನ್ನು ಸಹ ಕಡಿಮೆ ಮಾಡಿ ಉತ್ತಮವಾದ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಆಚರಣೆಯನ್ನು ಮಾಡೋಣ ಅನ್ನೋದು ನನ್ನ ಆಶಯ.

ವರ್ಷಗಳು ಕಳೆದಂತೆ ಎಲ್ಲವೂ ಬದಲಾಗುತ್ತಿದೆ. ಬದಲಾವಣೆಯೇ ಪ್ರಕೃತಿ ನಿಯಮ ಹೌದು. ಆದರೆ ನಮ್ಮಿಂದ ಇತರರರು, ಪ್ರಕೃತಿ ಹಾಗೂ ಪ್ರಾಣಿಗಳು ನಮ್ಮೊಡನೆ ಬದುಕುತ್ತಿವೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಅವರಿಗೆ ತೊಂದರೆಯಾಗದಂತೆ ಮುಂದಿನ ದೀಪಾವಳಿ ಹಬ್ಬವನ್ನು ಆಚರಿಸೋಣ.

ಅಭಿಷೇಕ್ ಚವ್ಹಾಣ, ವಿಜಯಪುರ

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ- ಜನ ಮರುಳೋ ಜಾತ್ರೆ ಮರುಳೋ ಹಾಸನಾಂಬಾ