Home ರಾಜಕೀಯ ಮಹುವಾ ಮೊಯಿತ್ರಾ ಮನೆ ಮೇಲೆ ಸಿಬಿಐ ದಾಳಿ

ಮಹುವಾ ಮೊಯಿತ್ರಾ ಮನೆ ಮೇಲೆ ಸಿಬಿಐ ದಾಳಿ

0
ಫೋಟೋ:PTI

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಪಶ್ಚಿಮ ಬಂಗಾಳದಲ್ಲಿರುವ ಅವರ ನಿವಾಸದ ಮೇಲೆ ವಿಚಾರಣೆಗೆ ನಗದು ಪ್ರಕರಣಕ್ಕೆ (cash-for-query case) ಸಂಬಂಧಿಸಿದಂತೆ ಸಿಬಿಐ ಶೋಧಕಾರ್ಯ ಆರಂಭಿಸಿದೆ.

ಕೇಂದ್ರ ತನಿಖಾ ಸಂಸ್ಥೆಯ ತಂಡಗಳು ಮಾರ್ಚ್‌ 23, ಶನಿವಾರ ಬೆಳಗ್ಗೆ ಮೊಯಿತ್ರಾ ಅವರ ಕೋಲ್ಕತ್ತಾದ ಮನೆ ಮತ್ತು ಇತರ ನಗರಗಳಲ್ಲಿ ಶೋಧ ಕಾರ್ಯಾಚರಣೆಗಾಗಿ ತಲುಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ನಿರ್ದೇಶನದ ಮೇರೆಗೆ ಸಿಬಿಐ ಗುರುವಾರ ಟಿಎಂಸಿ ಮಾಜಿ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಪ್ರತಿ ತಿಂಗಳು ತನಿಖೆಯ ಸ್ಥಿತಿಗತಿಗಳ ಬಗ್ಗೆ ವರದಿಗಳನ್ನು ಸಲ್ಲಿಸುವಂತೆ ಸಿಬಿಐಗೆ ತಿಳಿಸಲಾಗಿತ್ತು.

“ದಾಖಲೆಯಲ್ಲಿರುವ ಸಂಪೂರ್ಣ ವಿಚಾರವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ನಡೆಸಿ, ಪರಿಗಣಿಸಿದ ನಂತರ, ಸಾರ್ವಜನಿಕ ಸೇವಕರಾಗಿರುವ ( Respondent Public Servant – RPS) ಇವರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಯಾವುದೇ ಸಂದೇಹವಿಲ್ಲ. ಹೆಚ್ಚಿನವುಗಳಿಗೆ ಸಾಕ್ಷಿಗಳಿವೆ. ಇದು ಅತ್ಯಂತ ಗಂಭೀರ ವಿಚಾರವಾಗಿದೆ, ಅದರಲ್ಲೂ ಅವರು ಇರುವ ಉನ್ನತ ಸ್ಥಾನದ ದೃಷ್ಟಿಯಿಂದ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಸತ್ಯವನ್ನು ಸಾಬೀತು ಮಾಡಲು ಆಳವಾದ ತನಿಖೆಯ ಅಗತ್ಯವಿದೆ, ”ಎಂದು ಲೋಕಪಾಲ್ ಹೇಳಿದೆ. (ANI)

ಡಿಸೆಂಬರ್‌ನಲ್ಲಿ, ಮೋಹುವಾ ಮೊಯಿತ್ರಾ ಅವರನ್ನು “ಅನುಚಿತ ನಡವಳಿಕೆ” ಗಾಗಿ ಲೋಕಸಭೆಯಿಂದ ಹೊರಹಾಕಲಾಯಿತು. ಅವರು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದರು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಮಾಡಿದ ಆರೋಪಗಳ ಪ್ರಾಥಮಿಕ ತನಿಖೆಯ ಫಲಿತಾಂಶಗಳನ್ನು ಸ್ವೀಕರಿಸಿದ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಪಾಲ್, ಸಿಬಿಐಗೆ ನಿರ್ದೇಶನಗಳನ್ನು ನೀಡಿದೆ.

ದುಬೈನಲ್ಲಿ ನೆಲೆಸಿರುವ ಉದ್ಯಮಿ ದರ್ಶನ್ ಹೀರಾನಂದಾನಿ ಅವರಿಂದ ಹಣ ಮತ್ತು ಉಡುಗೊರೆ ಪಡೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಸೇರಿದಂತೆ ಇತರರ ಮೇಲೆ ವಾಗ್ದಾಳಿ ನಡೆಸಿ ಮೊಯಿತ್ರಾ ಸದನದಲ್ಲಿ ಶಾಸಕರನ್ನು ಪ್ರಶ್ನಿಸಿದ್ದಾರೆ ಎಂದು ಲೋಕಸಭೆ ಸದಸ್ಯ ದುಬೆ ಆರೋಪಿಸಿದ್ದರು.

You cannot copy content of this page

Exit mobile version