ಭಾರತದ ಪ್ರಮುಖ ಮಾಂಸ ರಪ್ತುದಾರ ಕಂಪನಿಯಾದ ಅಲ್ಲಾನಾ ಗ್ರೂಪ್ , ಬಿಜೆಪಿಗೆ 2 ಕೋಟಿ ರುಪಾಯಿ ಹಾಗೂ ಶಿವಸೇನೆಗೆ 5 ಕೋಟಿ ರುಪಾಯಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದೆ.
ಮಾರ್ಚ್ 21, ಗುರುವಾರದಂದು ಆಲ್ಫಾನ್ಯೂಮರಿಕ್ ಸಂಖ್ಯೆಗಳು ಅಥವಾ ಬಾಂಡ್ ಸಂಖ್ಯೆಗಳು ಸೇರಿದಂತೆ ಉಳಿದ ಎಲ್ಲಾ ಚುನಾವಣಾ ಬಾಂಡ್ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ ನಂತರ ಈ ಮಾಹಿತಿಯು ಹೊರಬಂದಿದೆ.
9 ಜುಲೈ 2019 ರಂದು ಅಲ್ಲಾನಾ ಕೋಲ್ಡ್ ಸ್ಟೋರೇಜ್, ಅಲ್ಲಾನಾ ಸನ್ಸ್ ಪ್ರೈವೇಟ್ ಲಿಮಿಟೆಡ್, ಫ್ರಿಗೊರಿಫಿಕೊ ಅಲ್ಲಾನಾ ಪ್ರೈವೇಟ್ ಲಿಮಿಟೆಡ್‌ನಿಂದ ತಲಾ ರೂ 1 ಕೋಟಿಯ ಐದು ಬಾಂಡ್‌ಗಳನ್ನು ಖರೀದಿಸಲಾಗಿದೆ. ಶಿವಸೇನೆಯು ಈ ಐದು ಚುನಾವಣಾ ಬಾಂಡ್‌ಗಳನ್ನು 11 ಜುಲೈ 2019 ರಂದು ಎನ್‌ಕ್ಯಾಶ್ ಮಾಡಿದೆ.
9 ಅಕ್ಟೋಬರ್ 2019 ರಂದು ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್ 1 ಕೋಟಿ ರುಪಾಯಿ ಮೌಲ್ಯದ ಮತ್ತೊಂದು ಬಾಂಡ್ ಅನ್ನು ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 19 ಅಕ್ಟೋಬರ್ 2019 ರಂದು ಎನ್‌ಕ್ಯಾಶ್ ಮಾಡಿದೆ.
ಫ್ರಿಗೇರಿಯೋ ಕನ್ಸೆರ್ವಾ ಅಲ್ಲಾನಾ 22 ಜನವರಿ 2020 ರಂದು 1 ಕೋಟಿ ರುಪಾಯಿ ಮೌಲ್ಯದ ಮತ್ತೊಂದು ಬಾಂಡ್ ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 3 ಫೆಬ್ರವರಿ 2020 ರಂದು ಎನ್‌ಕ್ಯಾಶ್ ಮಾಡಿದೆ.
ಜನವರಿ 2019 ರಲ್ಲಿ, ಆದಾಯ ತೆರಿಗೆ ಇಲಾಖೆಯ ಮುಂಬೈ ವಿಭಾಗವು ಅಲ್ಲಾನಾ ಗ್ರೂಪ್ಸ್ ಮೇಲೆ ದಾಳಿ ನಡೆಸಿತು. ಎಕನಾಮಿಕ್ ಟೈಮ್ಸ್ ಪ್ರಕಾರ ಎರಡು ದಿನಗಳ ಕಾಲ 100 ಕ್ಕೂ ಹೆಚ್ಚು ಘಟಕಗಳ ಮೇಲೆ ದಾಳಿ ನಡೆಸಲಾಗಿತ್ತು.
ಅದೇ ವರ್ಷ ಏಪ್ರಿಲ್‌ನಲ್ಲಿ, ಅಲ್ಲಾನಾ ಗ್ರೂಪ್ಸ್ 2,000 ಕೋಟಿ ರೂಪಾಯಿ ತೆರಿಗೆ ವಂಚಿಸಿದೆ ಎಂದು ಇಲಾಖೆ ಆರೋಪಿಸಿತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಈ ಗ್ರೂಪ್ಸ್ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.
2019 ರ ಅಕ್ಟೋಬರ್‌ನಲ್ಲಿ ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಈ ಕಂಪನಿಯ 1 ಕೋಟಿ ರೂಪಾಯಿ ಮೌಲ್ಯದ ಒಂದು ಬಾಂಡ್ ಅನ್ನು ಎನ್‌ಕ್ಯಾಶ್ ಮಾಡಿದೆ. ಇದಕ್ಕೂ ಮೊದಲು 2015ರ ಡಿಸೆಂಬರ್‌ನಲ್ಲಿ ಫ್ರಿಗೊರಿಫಿಕೊ ಅಲಾನಾ ಲಿಮಿಟೆಡ್, ಫ್ರಿಗೇರಿಯೊ ಕನ್ವರ್ವಾ ಅಲಾನಾ ಲಿಮಿಟೆಡ್ ಮತ್ತು ಇಂಡಾಗ್ರೊ ಫುಡ್ಸ್ ಲಿಮಿಟೆಡ್‌ನಿಂದ ಬಿಜೆಪಿ 2.50 ಕೋಟಿ ರೂಪಾಯಿ ದೇಣಿಗೆ ಪಡೆದಿರುವುದು ಬಹಿರಂಗವಾಗಿದೆ.
1865 ರಲ್ಲಿ ಸ್ಥಾಪಿತವಾದ ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್‌ನ ವೆಬ್‌ಸೈಟ್ ಪ್ರಕಾರ ಈ ಗ್ರೂಪ್ಸ್ “ಉನ್ನತ ಮಟ್ಟದ ರಫ್ತುದಾರರು, ತಯಾರಕರು ಮತ್ತು ಸಂಸ್ಕರಿಸಿದ ಬ್ರ್ಯಾಂಡೆಡ್ ಆಹಾರ ಉತ್ಪನ್ನಗಳು ಮತ್ತು ಕೃಷಿ ಸರಕುಗಳನ್ನು ಒದಗಿಸುವವರು.” ಇದರ ವಾರ್ಷಿಕ ವಹಿವಾಟು, ಈ ಗ್ರೂಪ್ಸ್ ಹೇಳುವಂತೆ 500 ರಿಂದ 1,000 ಕೋಟಿ ರುಪಾಯಿ.