Home ರಾಜ್ಯ ರಾಜ್ಯದ ಎಲ್ಲಾ ಶಾಲೆಗಳ SSLC ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಸಿಬಿಎಸ್ಸಿ ಮಾದರಿಯ ಪರೀಕ್ಷೆ ಜಾರಿ

ರಾಜ್ಯದ ಎಲ್ಲಾ ಶಾಲೆಗಳ SSLC ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಸಿಬಿಎಸ್ಸಿ ಮಾದರಿಯ ಪರೀಕ್ಷೆ ಜಾರಿ

0

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಎಸ್ಎಸ್ಎಲ್‌ಸಿ ವಿಧ್ಯಾರ್ಥಿಗಳಿಗೆ ಇನ್ನು ಮುಂದೆ ಸಿಬಿಎಸ್‌ಸಿ ಮಾದರಿಯ ಪರೀಕ್ಷೆ ಜಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸ್ತಾಪನೆ ಸಲ್ಲಿಸಿದೆ. ಹಾಗೊಮ್ಮೆ ಈ ನಿಯಮ ಜಾರಿಯಾದರೆ ಮುಂದಿನ ಪರೀಕ್ಷೆಗಳು ಅದೇ ಮಾದರಿಯಲ್ಲಿ ನಡೆಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಬಿಎಸ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕ ಸೇರಿ ಒಟ್ಟು ಶೇಕಡ 33 ಅಂಕ ಪಡೆದರೂ ಪಾಸ್ ಆಗುತ್ತಾರೆ. ಪ್ರತಿ ವಿಷಯಕ್ಕೆ 20 ಆಂತರಿಕ ಅಂಕಗಳು ನಿಗದಿಪಡಿಸಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಎರಡೂ ಸೇರಿ 100 ಅಂಕಗಳಿಗೆ ಕನಿಷ್ಠ 33 ಅಂಕ ಪಡೆದವರು ಪಾಸ್ ಆಗುತ್ತಾರೆ.

ಎಸ್‌ಎಸ್‌ಎಲ್ಸಿ ಪರೀಕ್ಷಾ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಪಾಸಾಗಲು ಶೇಕಡ 35 ರಷ್ಟು ಅಂಕ ಪಡೆಯಬೇಕಿದೆ. ಸಿಬಿಎಸ್‌ಇ ಮಾದರಿ ಅಳವಡಿಸಿಕೊಂಡರೆ 33 ಅಂಕ ಪಡೆದರೂ ಪಾಸ್ ಆಗುತ್ತಾರೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಪ್ರಥಮ ಭಾಷೆಯನ್ನು 125 ಅಂಕಗಳಿಗೆ ನಡೆಸಲಾಗುವುದು.

ಪ್ರಥಮ ಭಾಷೆಗೆ 25 ಆಂತರಿಕ ಅಂಕ ಇದೆ. ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಯಾಗಿವೆ.

You cannot copy content of this page

Exit mobile version