Home ದೇಶ ಕೇಂದ್ರದ ಬಜೆಟ್ ಅಧಿವೇಶನ : ಮತದಾರರ ಪಟ್ಟಿಯ ಭ್ರಷ್ಟಾಚಾರದ ಕುರಿತು ಚರ್ಚೆಗೆ ರಾಹುಲ್ ಗಾಂಧಿ ಒತ್ತಾಯ

ಕೇಂದ್ರದ ಬಜೆಟ್ ಅಧಿವೇಶನ : ಮತದಾರರ ಪಟ್ಟಿಯ ಭ್ರಷ್ಟಾಚಾರದ ಕುರಿತು ಚರ್ಚೆಗೆ ರಾಹುಲ್ ಗಾಂಧಿ ಒತ್ತಾಯ

0

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಕುರಿತು ಸದನದಲ್ಲಿ ಚರ್ಚೆ ಮಾಡಬೇಕೆಂದು ಇಂದು ಆಗ್ರಹಿಸಿದರು.

ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಲು ಎದ್ದು ನಿಂತ ಅವರು, ದೇಶದಾದ್ಯಂತ ಮತದಾರರ ಪಟ್ಟಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವಂತೆ ಕೋರುತ್ತೇವೆ ಎಂದರು.

ಲೋಕಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ನ್ಯೂಝಿಲ್ಯಾಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಪೀಕರ್ ಓಂ ಬಿರ್ಲಾ ಅಭಿನಂದನೆ ಸಲ್ಲಿಸಿದರು.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಸಂಸದರು ʼನಮಗೆ ನ್ಯಾಯ ಬೇಕುʼ ಎಂದು ಘೋಷಣೆಗಳನ್ನು ಕೂಗಿದರು. ಲೋಕಸಭೆ ಅಲ್ಪಾವಧಿಯ ಮುಂದೂಡಿಕೆ ನಂತರ ಸದನವು ಮಧ್ಯಾಹ್ನ 12 ಗಂಟೆಗೆ ಪುನರಾರಂಭವಾಯಿತು.

You cannot copy content of this page

Exit mobile version