ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನದ ಮೇಲಿನ ರಫ್ತು ಸುಂಕ ಭಾರಿ ಕಡಿತ: ಜೂನ್ 1 ರಿಂದಲೇ ಹೊಸ ದರ ಜಾರಿ

ದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ (ATF) ಮೇಲಿನ ರಫ್ತು ಸುಂಕವನ್ನು (Export Duty) ಗಣನೀಯವಾಗಿ ಕಡಿತಗೊಳಿಸಿ ಭಾನುವಾರ ತಡರಾತ್ರಿ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ಆದೇಶದ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು 3 ರೂಪಾಯಿಗಳಿಂದ 1.5 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ, ಪ್ರತಿ ಲೀಟರ್ ಡೀಸೆಲ್ ಮೇಲಿನ ರಫ್ತು ಸುಂಕವನ್ನು 16.5 ರೂಪಾಯಿಗಳಿಂದ 13.5 ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ.

ಇನ್ನು ವಿಮಾನಗಳಲ್ಲಿ ಬಳಸಲಾಗುವ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 16 ರೂಪಾಯಿಗಳಿಂದ 9.5 ರೂಪಾಯಿಗಳವರೆಗೆ ಕಡಿತಗೊಳಿಸಿ ಕೇಂದ್ರ ಸರ್ಕಾರ ಜಾಗತಿಕ ಮಾರುಕಟ್ಟೆಗೆ ಸಮಾಧಾನಕರ ಸುದ್ದಿ ನೀಡಿದೆ.

ಪರಿಷ್ಕರಿಸಲಾದ ಈ ಹೊಸ ರಫ್ತು ಸುಂಕದ ದರಗಳು ಜೂನ್ 1 ರಿಂದಲೇ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ದೇಶೀಯ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿ ಪ್ರತಿ 15 ದಿನಗಳಿಗೊಮ್ಮೆ ಕೇಂದ್ರ ಸರ್ಕಾರವು ಈ ರಫ್ತು ಸುಂಕದ ದರಗಳನ್ನು ಪರಿಷ್ಕರಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು