Monday, September 29, 2025

ಸತ್ಯ | ನ್ಯಾಯ |ಧರ್ಮ

ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ನೇಮಕದಲ್ಲಿ ಮಹತ್ವದ ಬದಲಾವಣೆ; ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ. ಆ ಮೂಲಕ ಕೆಲವು ಪ್ರಮುಖ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದವರಿಗೆ ಉಪಾಧ್ಯಕ್ಷ ಸ್ಥಾನ, ಉಪಾಧ್ಯಕ್ಷರಾಗಿ ನೇಮಕ ಆದವರಿಗೆ ಅಧ್ಯಕ್ಷ ಸ್ಥಾನವನ್ನು ಮರುಹಂಚಿಕೆ ಮಾಡಲಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮರು ವಿಂಗಡಣೆ ಬಗ್ಗೆ ಸೋಮವಾರ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅದರಂತೆ ಬಿಎಂಟಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದ ನಿಕೇತ್ ರಾಜ್​​ಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಅದೇ ಅಧ್ಯಕ್ಷ ಸ್ಥಾನಕ್ಕೆ ವಿ.ಎಸ್.ಆರಾಧ್ಯ ಅವರನ್ನು ನೇಮಿಸಲಾಗಿದೆ.

5 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಮರು ನೇಮಕ ಮಾಡಲಾಗಿದ್ದು, ಬೀಜ ನಿಗಮ ನಿಯಮಿತಕ್ಕೆ ಆಂಜನಪ್ಪ ಅಧ್ಯಕ್ಷ, ನೀಲಕಂಠರಾವ್-ಸಾಂಬಾರು ಅಭಿವೃದ್ಧಿ ನಿಗಮ, ಅನಿಲ್ ಜಮಾದಾರ್-ಉಪಾಧ್ಯಕ್ಷ, ಬಾಲಭವನ.. ಶರಣಪ್ಪ ಸಲಾದ್​​​​ಪುರ್​​-ಅಧ್ಯಕ್ಷರು ಮದ್ಯಪಾನ ಮಂಡಳಿ, ಸೈಯದ್​ ಚಿಸ್ವಿ-ಅಧ್ಯಕ್ಷರು, ದ್ವಿದಳ ಧಾನ್ಯ ನಿಗಮಕ್ಕೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಬದಲಾವಣೆಯನ್ನು ಸರ್ಕಾರ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page