ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಿಂದ ಒಟ್ಟು 22 ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಪ್ರಕಟಿಸಿದ್ದಾರೆ.
ಅವರಿಂದ ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸಿಆರ್‌ಪಿಎಫ್‌ನ ಕೋಬ್ರಾ ತಂಡ ಮತ್ತು ಸ್ಥಳೀಯ ಪೊಲೀಸರು ಈ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಉಸುರ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಕ್ಮೆಟ್ಲಾ ಗ್ರಾಮದ ಬಳಿಯ ಕಾಡಿನಲ್ಲಿ ಮಂಗಳವಾರ ಏಳು ಕೆಳ ಹಂತದ ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅದೇ ಪ್ರದೇಶದ ಜಂಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಿಂದ ಆರು ಮಂದಿ ಕಾರ್ಯಕರ್ತರನ್ನು ಮತ್ತು ನೆಲಸ್ನಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಕರ್ಕ ಗ್ರಾಮದಿಂದ ಒಂಬತ್ತು ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಇವರೆಲ್ಲರೂ 19ರಿಂದ 45 ವರ್ಷದೊಳಗಿನವರು ಎಂದು ಹೇಳಿದರು. ಅವರಿಂದ ಜಿಲೆಟಿನ್ ಸ್ಟಿಕ್‌ಗಳು, ಟಿಫಿನ್ ಬಾಕ್ಸ್ ಬಾಂಬ್‌ಗಳು, ಡಿಟೋನೇಟರ್‌ಗಳು, ವಿದ್ಯುತ್ ತಂತಿಗಳು, ಬ್ಯಾಟರಿಗಳು, ಕರಪತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.