ಹಾಸನ : ಬಾಲ ಕಾರ್ಮಿಕ ಪದ್ಧತಿ ಎಂಬುದು ಸಾಮಾಜಿಕ ಪಿಡುಗು ಆಗಿದ್ದು, ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದ್ದು, ಈ ಪದ್ಧತಿಯನ್ನು ಬೇರು ಸಮೇತ ಕಿತ್ತು ಹೊರ ಹಾಕಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಕರೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತೂತದಲ್ಲಿ ಕಾನೂನು ಇಷ್ಟೊಂದು ಕಠಿಣವಾಗಿದ್ದರೂ ಕೂಡ ಇವತ್ತಿಗೂ ಕೂಡ ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ನಾವು ನೋಡುತ್ತಾ ಬಂದಿದ್ದೆವೆ. ಇದು ಶಿಕ್ಷಾರ್ಹ ಅಪರಾಧ.
ಮೊದಲ ಅಪರಾಧಕ್ಕೆ 20 ಸಾವಿರ ದಂಢ ಹಾಗೂ 6 ತಿಂಗಳ ಶಿಕ್ಷೆ ವಿಧಿಸಲಾಗುವುದು. ಆದರೂ ಕೂಡ ಪ್ರತಿದಿನ ಈ ಬಗುಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಬಾಲಕರನ್ನು ರಕ್ಷಿಸಿ ಅವರಿಗೆ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳು ಇದ್ದರೇ ಹೋಗುವಾಗೆ ಮಾಡುತ್ತಿದ್ದಾರೆ ಎಂದರು. ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಇದು ಸಮಾಜದ ಮೇಲೆ ಒಂದು ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಬಾಲ್ಯ ವ್ಯವಸ್ಥೆ ಪ್ರಮುಖ ಹಂತ. ಈ ಸಮಯದಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವುದು ಸಂವಿಧಾನ ಕೂಡ ಈ ಪದ್ಧತಿ ತಪ್ಪು ಎಂದು ಹೇಳಿದೆ. ಹೀಗೆ ನಿಷೇಧ ಇದ್ದರೂ ಕೂಡ ಬಾಲ ಕಾರ್ಮಿಕ ಪದ್ಧತಿ ಅನಿಷ್ಟವನ್ನು ಸಮಾಜದಲ್ಲಿ ನೋಡುತ್ತಿದ್ದೇವೆ. ಇದನ್ನ ಸಮಾಜದಲ್ಲಿ ಸಂಪೂರ್ಣವಾಗಿ ತಿಡೆದು ಹಾಕಬೇಕು ಎಂದು ಸಲಹೆ ನೀಡಿದರು. ಎಲ್ಲಾ ಉದ್ದಿಮೆದಾರರು ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವುದು ಶಿಕ್ಷರ್ಹ ಅಪರಾಧ ಎಂಬುದು ಎಲ್ಲಾರಿಗೂ ಜಾಗೃತಿ ಬರಬೇಕು ಎಂಬುದು ಈ ಜಾಥದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಯಮುನಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಸದಸ್ಯರಾದ ಲೀಲಾವತಿ, ಕೆ.ಟಿ. ಜಯಶ್ರೀ, ಅಧಿಕಾರಿ ಮುರುಳೀದರ್, ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.