ಹಾಸನ: ಪ್ರಸ್ತೂತದಲ್ಲಿ ಮಕ್ಕಳು ಮೊಬೈಲ್ ಪೀಡಿತರಗುತ್ತಿದ್ದು, ಇದರಿಂದ ಕಣ್ಣಿನ ದೃಷ್ಠಿ ಸಮಸ್ಯೆ ಜೊತೆಗೆ ತನ್ನ ಭವಿಷ್ಯವನ್ನೇ ಹಾಳು ಮಾಡುವ ಪರಿಸ್ಥಿತಿಗೆ ಬರುತ್ತದೆ. ಅದನ್ನು ತಪ್ಪಿಸಿ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂದು ಪದ್ಮಶ್ರೀ ವಿಜೇತರಾದ ಡಾ. ಜೋಗತಿ ಮಂಜಮ್ಮನವರು ಸಲಹೆ ನೀಡಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸ್ಕಾಲರ್ಸ್ ಶಾಲೆಯಲ್ಲಿ 13ನೇ ವರ್ಷದ ಸ್ಕಾಲರ್ಸ್ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹಾಲಿನಿಂದ ಬೆಣ್ಣೆಯ ತನಕ ಬೆಂಕಿ ಎಂಬ ಸಂಸ್ಕಾರ ಕೊಟ್ಟಾಗ ಮಾತ್ರ ಅದು ತುಪ್ಪವಾಗಲು ಸಾಧ್ಯ. ಹಾಗೆಯೇ ವಿದ್ಯೆ ಎಂಬ ಸಂಸ್ಕಾರ ಕೊಟ್ಟಾಗ ಮಾತ್ರ ಮಕ್ಕಳು ಸುಸಂಸ್ಕತರಾಗಲು ಸಾಧ್ಯ. ಶಾಲೆಯ ಶಿಕ್ಷಕರ ಜೊತೆಗೆ ಮನೆಯಲ್ಲೂ ಕೂಡ ಗುರು ಹಿರಿಯರನ್ನ ಗೌರವಿಸುವ ಉತ್ತಮ ಸಂಸ್ಕಾರವನ್ನು ನೀಡಬೇಕು. ಮಕ್ಕಳು ಮೊಬೈಲ್ ಪೀಡಿತರಾಗುತ್ತಿದ್ದಾರೆ ಅದನ್ನು ತಪ್ಪಿಸಿ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸವ ವೇದಿಕೆಯೇ ಶಾಲಾ ವಾರ್ಷಿಕೋತ್ಸವ ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಹೆಚ್.ಪಿ. ಸ್ವರೂಪ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎಲ್. ಮಲ್ಲೇಶಗೌಡ, ನಗರಸಭಾ ಅಧ್ಯಕ್ಷರಾದ ಎಂ. ಚಂದ್ರೇಗೌಡ, ಶಾಲೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ನಾಗರಾಜ್, ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಹೆಚ್ .ಎನ್ ಚಂದ್ರಶೇಖರ್, ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಚಂದ್ರಶೇಖರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸ್ಕಾಲರ್ಸ್ ಸಂಭ್ರಮಕ್ಕೆ ಮೆರುಗನ್ನು ತಂದು ಕೊಟ್ಟರು.