ಚೀನೀ ಕಂಪನಿಗಳಿಗೆ ನಕಲಿ ನಿರ್ದೇಶಕರ ನೇಮಕ : ಎಂಸಿಎ ದಾಳಿ

ನವದೆಹಲಿ: ನೂರಾರು ಚೀನೀ ಶೆಲ್ ಕಂಪನಿಗಳಿಗೆ ನಕಲಿ ನಿರ್ದೇಶಕರನ್ನು ಒದಗಿಸುವ ಭಾರತೀಯ ಸಂಸ್ಥೆಗಳ ಮೇಲೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ(ಎಂಸಿಎ)ದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ದೆಹಲಿ, ಗುರುಗ್ರಾಮ್, ಬೆಂಗಳೂರು ಮತ್ತು ಹೈದರಾಬಾದ್‌ ಸೇರಿದಂತೆ, ಪ್ರತಿ ಸ್ಥಳದಲ್ಲಿ 25 ರಿಂದ 30 ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ದಾಳಿಗಳು ಮುಂದುವರೆದಿರುವ ಕಾರಣ ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು