ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕಲ್ಬುರ್ಗಿ ಹೈಕೋರ್ಟ್ ಪೀಠ ಮತ್ತೊಂದು ಸುತ್ತಿನ ಮಾತುಕತೆಗೆ ಸೂಚಿಸಿದೆ. ನವೆಂಬರ್ 5 ಕ್ಕೆ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿಯೇ ಮತ್ತೊಂದು ಸಭೆ ನಡೆಸಲು ನ್ಯಾಯಾಲಯ ಸೂಚನೆ ನೀಡಿದೆ.
ಹೈಕೋರ್ಟ್ ಸೂಚಿಸಿದ ದಿನಾಂಕದಂದು ಅರ್ಜಿದಾರರೇ ಶಾಂತಿ ಸಭೆಗೆ ಹಾಜರಾಗದಕ್ಕೆ ಹೈಕೋರ್ಟ್ ಅಸಮಾಧಾನ ಹೊರಹಾಕಿತು. ಅರ್ಜಿದಾರರು ಅಥವಾ ಅವರ ವಕೀಲರು ಸಭೆಗೆ ಹಾಜರಾಗಬಹುದಿತ್ತು. ನೀವು ಅರ್ಹತೆ ಮೇಲೆ ವಾದ ಮಂಡಿಸಿ ವಿಚಾರಣೆ ನಡೆಸೋಣ ಯಾರಿಗೆ ವಿಚಾರಣೆ ಗೊತ್ತಿರುತ್ತದೆ, ಅವರೇ ಶಾಂತಿ ಸಭೆಗೆ ಹಾಜರಾಗಬೇಕಿತ್ತು ಎಂದು ಹೈಕೋರ್ಟ್ ತಿಳಿಸಿದೆ.
ವಿಚಾರಣೆಯ ವೇಳೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಶಾಂತಿ ಸಭೆಗೆ ರಿಟ್ ಅರ್ಜಿದಾರರೇ ಹಾಜರಾಗಿರಲಿಲ್ಲ ಎಂದಾಗ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿವಾದ ಶೀಘ್ರ ಮುಗಿಸಲು ಅರ್ಜಿದಾರರೇ ಸಹಕರಿಸುತ್ತಿಲ್ಲ ಬೇರೆ ವ್ಯಕ್ತಿಗಳು ಹಾಜರಾಗಿದ್ದಾರೆ ಎಂದು ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ಹೇಳಿಕೆ ನೀಡಿದರು.
ರಿಟ್ ಅರ್ಜಿದಾರರು ಶಾಂತಿ ಸಭೆಗೆ ಹೋಗೋದಕ್ಕೆ ಸಕಾರಣವಿತ್ತು ಎಂದು ಅರ್ಜಿದಾರರ ಪರ ವಕೀಲರಿಗೆ ಆಹ್ವಾನವಿರಲಿಲ್ಲ ಮತ್ತೊಂದು ಸಭೆ ನಡೆಸಿದರೆ ಹಾಜರಾಗುತ್ತೇವೆ ಎಂದು ಅರುಣ್ ಶಾಮ್ ವಾದಿಸಿದರು. ಆಗ ಎ ಜಿ ಶಶಿಕರ ಶೆಟ್ಟಿ ನವೆಂಬರ್ 5ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ಸಿದ್ಧರಿದ್ದೇವೆ. ಸಮಸ್ಯೆ ಬಗೆಹರಿಸುವುದಷ್ಟೇ ನಮ್ಮ ಉದ್ದೇಶವಾಗಿದೆ ಹಾಗಾಗಿ ನವೆಂಬರ್ 5 ರಂದು ಮತ್ತೆ ಶಾಂತಿ ಸಭೆಗೆ ತೀರ್ಮಾನಿಸಲಾಗಿದೆ ಎಂದು ಶಶಿಕಿರಣ್ ಶೆಟ್ಟಿ ತಿಳಿಸಿದರು.
ನವೆಂಬರ್ 5 ಕ್ಕೆ ಅಡ್ವೋಕೇಟ್ ಜನರಲ್ ಸಮ್ಮುಖದ ಸಭೆಯ ನಂತರವಷ್ಟೇ ಈ ರಿಟ್ ಅರ್ಜಿ ವಿಚಾರಣೆ ನಡೆಸಲಾಗುವುದು. ಹೀಗಾಗಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಹೈಕೋರ್ಟ್ ಮುಂದೂಡಿದೆ.
