ಮುಂಬೈ : ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿ ಫೈನಲ್ ಗೇರಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಎಲಿಸಾ ಹಿಲಿ ಕೇವಲ 5 ರನ್ ಗಳಿಸಿ, ಕ್ರಾಂತಿ ಗೌಡ ಬೌಲಿಂಗಿನಲ್ಲಿ ಕ್ಲೀನ್ ಬೌಲ್ಡ್ ಆದರು.ಮೂರನೇ ವಿಕೆಟ್ ಗೆ ಫೋಬಿ ಲಿಂಚ್ ಫೀಲ್ಡ್ ಗೆ ಜೊತೆಯಾದ ಎಲಿಸ್ ಪೆರ್ರಿ, ಸ್ಫೋಟಕ ಆಟವಾಡಿದರು. ಮೂರನೇ ವಿಕೆಟ್ ಗೆ 155 ರನ್ ಕಲೆ ಹಾಕಿದರು.ಫೋಬಿ ಲಿಂಚ್ ಫೀಲ್ಡ್ 93 ಎಸೆತಗಳಲ್ಲಿ ಮೂರು ಸಿಕ್ಸರ್, 17 ಬೌಂಡರಿ ಸಮೇತ 119 ರನ್ ಸಿಡಿಸಿದರು. ಇದು 22 ವರ್ಷ ವಯಸ್ಸಿನ ಲಿಂಚ್ ಫೀಲ್ಡ್ ರವರ ಎರಡನೇ ಏಕದಿನ ಶತಕ.

ಭಾರತದ ಬೌಲರ್ ಗಳನ್ನು ಭರ್ಜರಿಯಾಗಿ ದಂಡಿಸುತ್ತಿದ್ದ ಲಿಂಚ್ ಫೀಲ್ಡ್ 119 ರನ್ ಗಳಿಸಿ ಅಮನ್ ಜೋತ್ ಕೌರ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.ಎರಡು ಸಿಕ್ಸರ್ ಆರು ಬೌಂಡರಿ ಸಮೇತ 77 ರನ್ ಗಳಿಸಿದ್ದ ಎಲ್ಲಿಸ್ ಪೆರ್ರಿ ರಾಧಾ ಯಾದವ್ ಬೌಲಿಂಗಿನಲ್ಲಿ ಬೌಲ್ಡ್ ಆದರು. ಕೊನೇ ಹಂತದಲ್ಲಿ ಅಬ್ಬರಿಸಿದ ಆ್ಯಶ್ಲೆ ಗಾರ್ಡ್ ನರ್, ಕೇವಲ 44 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಆಸ್ಟ್ರೇಲಿಯಾವನ್ನು ತಂಡದ ಸ್ಕೋರ್ 338ಕ್ಕೆ ಕೊಂಡೊಯ್ಯಲು ಸಹಾಯ ಮಾಡಿದರು.