ವಡಾಮಾಲ್ ಪೇಟ ಟೋಲ್ ಬಳಿ ಸಂಘರ್ಷ: ಕರ್ನಾಟಕ, ಆಂಧ್ರ ವಾಹನಗಳ ಮೇಲೆ ದಾಳಿ

ತಿರುಪತಿ: ತಿರುಪತಿಯಿಂದ ಚೆನ್ನೈಗೆ ಹೋಗುವ ದಾರಿಯಲ್ಲಿರುವ ವಡಾಮಾಲ್ ಪೇಟ ಟೋಲ್ ಬಳಿ ಕರ್ನಾಟಕ, ಆಂಧ್ರಪ್ರದೇಶ ವಾಹನಗಳ ಮೇಲೆ ಸ್ಥಳೀಯರು ದಾಳಿ ನಡೆಸುತ್ತಿರುವ ಘಟನೆ ನಿನ್ನೆ ನಡೆದಿದೆ.

ತಿರುಪತಿಯಿಂದ ಚೆನ್ನೈಗೆ ಕರ್ನಾಟಕ, ಆಂಧ್ರಪ್ರದೇಶದ ಪ್ರಯಾಣಿಕರು ಒಂದು ದಿನ ತಡೆದುಹೋಗುವುದು ಒಳ್ಳೆಯದು, ಟೋಲ್ ಬಳಿ ಪ್ರಕ್ಷುಬ್ಧ ವಾತಾವರಣವಿದೆ ಎಂದು ಬಳ್ಳಾರಿಯ ಪತ್ರಕರ್ತ ನವೀನ್ ಮನವಿ ಮಾಡಿದ್ದಾರೆ.

ಟೋಲ್ ಬಳಿ ನಡೆದ ಘಟನೆಯ ವಿಡಿಯೋ ಪೀಪಲ್ ಮೀಡಿಯಾಗೆ ಲಭ್ಯವಾಗಿದ್ದು, ಸ್ಥಳೀಯರು ಪ್ರಯಾಣಿಕರನ್ನು ಥಳಿಸುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಗಲಾಟೆಯಲ್ಲಿ ಸಮವಸ್ತ್ರ ಧರಿಸಿದ ಟೋಲ್ ಸಿಬ್ಬಂದಿಯೂ ತೊಡಗಿರುವ ದೃಶ್ಯಗಳು ಕಂಡುಬಂದಿವೆ.

ಅಂತಾರಾಜ್ಯ ಟೋಲ್ ಗಳ ಸಮೀಪ ಈ ರೀತಿಯ ಘಟನೆಗಳು ಪದೇಪದೇ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದ್ದು, ಟೋಲ್ ಬಳಿ ಸರಿಯಾದ ಭದ್ರತೆ ಆಯೋಜಿಸಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇದೆ.

Related Articles

ಇತ್ತೀಚಿನ ಸುದ್ದಿಗಳು