ಮುಂಬೈ: ದೇಶದಾದ್ಯಂತ ಗಣೇಶ ಹಬ್ಬದ ಹಿನ್ನಲೆ ಸಮುದ್ರಗಳು, ಹಳ್ಳಗಳು,ನದಿ-ಕೆರೆಗಳು ಸೇರಿದಂತೆ ಹಲವಾರು ಕಡೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಈ ಕಾರಣ ಪಿಒಪಿ ಗಣೇಶ ಮೂರ್ತಿಗಳು ಜಲಮಾಲಿನ್ಯ ಉಂಟುಮಾಡುತ್ತವೆ. ಆದ್ದರಿಂದ ಮಾಲಿನ್ಯ ತಡೆಗಟ್ಟಲು ಮುಂಬೈನ ಜುಹು ಬೀಚ್‌ನಲ್ಲಿ ಗಣೇಶ ವಿಗ್ರಹಗಳ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು.
ಮುಂಬೈನಲ್ಲಿ ಶುಕ್ರವಾರ ಗಣೇಶ ಮೂರ್ತಿಗಳನ್ನು ವಿಸರ್ಜಜನೆ ಮಾಡಲಾಗಿದ್ದು, ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಎನ್ನುವ ಉದ್ದೇಶದಿಂದ ಬೀಚ್‌ನಲ್ಲಿರುವ ಗಣೇಶ ವಿಗ್ರಹಗಳನ್ನು ಹೊರ ತರುವ ಮೂಲಕ ಜಲಮಾಲಿನ್ಯವಾಗುವುದನ್ನು ತಡೆಗಟ್ಟಲಾಯಿತು. ಈ ಅಭಿಯಾನದಲ್ಲಿ ಎನ್‌ಜಿಒಗಳು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಶಾಲೆಯ ಮಕ್ಕಳು ಮತ್ತು ಇತರರು ಪಾಲ್ಗೊಂಡಿದ್ದರು.