Home ರಾಜ್ಯ ನೀತಿ ಸಂಹಿತೆಯಿಂದಾಗಿ ಜಡಗೊಂಡಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ನೀತಿ ಸಂಹಿತೆಯಿಂದಾಗಿ ಜಡಗೊಂಡಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ವಿಜಯನಗರ, ಜೂನ್ 21: ವಿಜಯನಗರ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಅಧಿಕಾರಿಗಳಿಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. 80 ದಿನಗಳ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳಲ್ಲಿ ಜಡತ್ವ ಬೆಳೆದಿದ್ದು ಅದನ್ನು ಬಿಡಿಸುವ ಕೆಲಸ ಸಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಡಿಡಿಪಿಐ ಅಮಾನತು
ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ಸ್ಥಾನದಲ್ಲಿದ್ದ ಜಿಲ್ಲೆ 27 ನೇ ಸ್ಥಾನಕ್ಕೆ ಕುಸಿದಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು ಪರೀಕ್ಷಾ ಅಕ್ರಮವಾಗಿರುವುದರಿಂದ ಇಷ್ಟೊಂದು ವ್ಯತ್ಯಾಸವಾಗಲು ಕಾರಣ ಎಂದು ಹೇಳಿದರು. ಈ ಕಾರಣಕ್ಕಾಗಿ ಡಿಡಿಪಿಐ ಅವರನ್ನು ಅಮಾನತು ಗೊಳಿಸಲು ಹಾಗೂ ಬಿಇಒ ಗಳಿಗೆ ನೋಟೀಸು ಜಾರಿಮಾಡಲು ಸೂಚಿಸಲಾಗಿದೆ ಎಂದರು. ಶಿಕ್ಷಕರೂ ಕೂಡ ಇದಕ್ಕೆ ಕಾರಣಕರ್ತರು. ಜಿಲ್ಲಾ ಪಂಚಾಯತಿ ಸಿಇಒ ಕೂಡ ಇದಕ್ಕೆ ಜವಾಬ್ದಾರರಾಗಿರುವುದರಿಂದ ಅವರಿಗೂ ನೋಟೀಸು ಕೊಡುವಂತೆ ಸೂಚಿಸಲಾಗಿದೆ ಎಂದರು.

ಇನ್ ಪುಟ್ ಸಬ್ಸಿಡಿಯಲ್ಲಿ ಶೇ 100ರಷ್ಟು ಸಾಧನೆ

ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಇಲಾಖೆಗಳ ಪರಿಶೀಲನೆ ನಡೆಸಲಾಗಿದೆ. ಬರಗಾಲಕ್ಕೆ ಒದಗಿಸಿದ್ದ ಇನ್ ಪುಟ್ ಸಬಸಿಡಿಯಲ್ಲಿ ಶೇ 100 ರಷ್ಟು ಸಾಧನೆಯನ್ನು ವಿಜಯನಗರ ಜಿಲ್ಲೆ ಮಾಡಿದೆ. ಎಲ್ಲ ರೈತರಿಗೂ ಸರ್ಕಾರದಿಮದ ನೀಡಲಾಗುವ ಸೌಲಭ್ಯವನ್ನುತಲುಪಿಸುವ ಕೆಲಸ ಮಾಡಿದ್ದಾರೆ. ಸುಮಾರು 130 ಕೋಟಿ ರೂ.ಗಳನ್ನು ತಲುಪಿಸಿದ್ದಾರೆ. ಸಾಮಾನ್ಯ ಜನರನ್ನು ಕಚೇರಿಗಳಿಗೆ ಅಲೆಸುವ ಕೆಲಸ ಮಾಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ವಿಳಂಬ ಭ್ರಷ್ಟಾಚಾರಕ್ಕೆ ಸಮವಾಗಿರುವುದರಿಂದ ವಿಳಂಬ ಮಾಡದೇ ಕಾಲಮಿತಿಯೊಳಗೆ ಕೆಲಸಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಲು ಸೂಚನೆ
ಅಂಗನವಾಡಿ, ಆಸ್ಪತ್ರೆ, ಶಾಲೆ ಹಾಸ್ಟಲ್‍ಗಳಿಗೆ, ಸಶ್ಮಾನಗಳಿಗೆ ನೀಡಲಾಗಿರುವ ಜಮೀನನ್ನು ಬಾಕಿ ಇಡದೇ ತಲುಪಿಸಬೇಕೆಂದು ಸೂಚಿಸಲಾಗಿದೆ. ಪ್ರತಿ ತಾಲ್ಲೂಕು ಕಚೇರಿಗಳಲ್ಲಿ ತಾಲ್ಲೂಕಿನಲ್ಲಿನ ಸರ್ಕಾರಿ ಜಮೀನನ್ನು ಗುರುತಿಸಿ ಪ್ರದರ್ಶಿಸಬೇಕು. ಸರ್ಕಾರಿ ಜಮೀನು ಅತಿಕ್ರಮಣಕ್ಕೊಳಗಾಗಿದ್ದರೆ ಅದನ್ನು ತೆರವು ಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ತಕ್ಷಣ ಕೊಡುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಎಸಿ ಯವರಿಗೆ ಸ್ಪಷ್ಟ ಸೂಚನೆ ನಿಡಲಾಗಿದೆ ಎಂದರು.
ಕೆರೆಗಳನ್ನು ಉಳಿಸಲು ಹೂಳೆತ್ತುವ ಕೆಲಸವನ್ನು ಉದ್ಯೋಗ್ಯ ಖಾತ್ರಿ ಯೋಜನೆಯ ಮೂಲಕ ಕೈಗೊಳ್ಳಬೇಕು. ಹಿನ್ನೀರು ಪ್ರದೇಶ ಒತ್ತುವರಿಯಾಗಿದ್ದರೆ ಕೂಡಲೇ ಬಿಡಿಸಬೇಕು. ನೀರು ಸಲೀಸಲಾಗಿ ಕೆರೆಗಳಿಗೆ ಹೋಗಬೇಕು ಸುತ್ತ ರಿವಿಟ್‍ಮೆಂಟ್ ಮಾಡಿ ಕಾಲುವೆ ಸ್ವಚ್ಛಗೊಳಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದರು.

ಎಸ್.ಎಸ್.ಎಲ್ ಸಿ ಕೊಚಿಂಗ್ ಸುಧಾರಿಸಲು ಸೂಚನೆ
ವಿಜಯನಗರ ಜಿಲ್ಲೆ ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಕ್ರಮಗಳನ್ನು ತಪ್ಪಿಸಿದ್ದೇವೆ ಅದಕ್ಕಾಗಿ ಫಲಿತಾಂಶ ಕಡಿಮೆಯಾಗಿದೆ ಎಂದು ಹೇಳಿದ್ದಾರೆ ಮುಂದಿನ ವರ್ಷ ಕೃಪಾಂಕವನ್ನು ನೀಡಬಾರದೆಂಬ ಸೂಚನೆ ನೀಡಲಾಗಿದೆ ಎಂದರು. ಮೆರಿಟ್ ಆಧಾರದ ಮೇಲೆ ಉತ್ತೀರ್ಣರಾನ್ನಗಿಸುವುದಲ್ಲದೇ ಕೋಚಿಂಗ್ ಕೂಡ ಸುಧಾರಣೆಯಾಗಬೇಕೆಂದು ನೀಡಬೇಕು ಎಂದು ಸೂಚಿಸಿದ್ದೇನೆ ಎಂದರು.

ಡಿಎಂಎಫ್ ಗೊಂದಲ ಇತ್ಯರ್ಥಗೊಳಿಸಲಾಗುವುದು
ಡಿಎಂಎಫ್ ಬಗ್ಗೆ ಗೊಂದಲವಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಈ ಬಗ್ಗೆ ಸಂಬಂಧ ಪಟ್ಟ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ್ದು 218 ಕೋಟಿ ರೂ.ಗಳು ಬರಬೇಕೆಂದು ಹೇಳುತ್ತಿದ್ದು ಬಳ್ಳಾರಿಯವರು ಅಷ್ಟು ಕೊಡಬೇಕಿಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲೆಗಳು ವಿಭಜನೆಯಾದ ನಂತರ 28% ವಿಜಯನಗರಕ್ಕೆ, 72 % ಬಳ್ಳಾರಿಗೆ ನೀಡಲು ತೀರ್ಮಾನವಾಗಿದೆ. ಅದರ ಪ್ರಕಾರವೂ 218 ಕೋಟಿ ರೂ.ಗಳು ಬರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿಗಳು ತಿಳಿಸಿದ್ದು, ಬಳ್ಳಾರಿ ಡಿಸಿ ಅಷ್ಟೊಂದು ಕೊಡಬೇಕಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಇತ್ಯರ್ಥ ಮಾಡಲಾಗುವುದು ಎಂದರು.

ಸಂಸದ ಇ.ತುಕಾರಾಂ ಅವರು ಸಂಡೂರು ಶಾಸಕರಾಗಿದ್ದಾಗ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಪತ್ರ ಬರೆದಿರುವ ಬಗ್ಗೆ ಮಾಧ್ಯಮದವರು ಮುಖ್ಯಮಂತ್ರಿಗಳ ಗಮನ ಸೆಳೆದಾಗ ಮಾತನಾಡಿ ತುಕಾರಾಂ ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ಗಣಿಗಾರಿಕೆಗೆ ಪರವಾನಗಿ: ವರದಿ ಪಡೆದು ಸರ್ಕಾರದ ನಿಲುವು ತಿಳಿಸಲಾಗುವುದು
ದೇವದಾರಿ ಗಣಿ ಕಂಪನಿಗೆ ಹೊಸದಾಗಿ ನೀಡಿರುವ ಪರವಾನಗಿಯ ಬಗ್ಗೆ ಮಾತನಾಡಿ ಈ ಬಗ್ಗೆ ಹೊಸದಾಗಿ ಕೇಂದ್ರ ಭಾರಿ ಕೈಗಾರಿಕಾ ಹಾಗೂ ಉಕ್ಕು ಸಚಿವರು ಹೇಳಿದ್ದು, ಇದರ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ವರದಿ ಬಂದ ನಂತರ ಸರ್ಕಾರದ ಅಭಿಪ್ರಾಯವೇನು ಎಂದು ತಿಳಿಸುವುದಾಗಿ ಹೇಳಿದರು.
ಕುಮಾಸ್ವಾಮಿ ದೇವಸ್ಥಾನದ ಬಳಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಪರಿಸರಪ್ರೇಮಿಗಳು ಆಕ್ಷೇಪವೆತ್ತಿರುವ ಬಗ್ಗೆ ಪತ್ರಿಕ್ರಿಯೆ ನೀಡಿ ವರದಿ ಬರಲಿ ತಿಳಿಸುತ್ತೇನೆ ಎಂದರು.

ಬೇಡಿಕೆಗಳು
ವಿಜಯ ನಗರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಬೇಡಿಕೆ ಇರುವ ಬಗ್ಗೆ ಮಾತನಾಡಿ ಜಿಲ್ಲಾಧಿಖಾರಿಗಳ ಕಚೇರಿ, 250 ಹಾಸಿಗೆಯ ಆಸ್ಪತ್ರೆಯಿಂದ 500 ಹಾಸಿಗೆಗಳ ಆಸ್ಪತ್ರೆ ಯಾಗಬೇಕು ಎಂಬ ಬೇಡಿಕೆ ಇದಗದು, ಪರಿಶೀಲಿಸಲಾಗುವುದು ಎಂದರು.

ನವಲೆ ಜಲಾಶಯ: ಮೂರು ರಾಜ್ಯಗಳ ನಡುವೆ ಮಾತುಕತೆ
ನವಲೆ ಜಲಾಶಯದಲ್ಲಿ ಆಂಧ್ರ್ರ, ತೆಲಂಗಾಣ ಮತ್ತು ಕರ್ನಾಟಕದ ಮಧ್ಯೆ ಹಂಚಿಕೆಯಾಗಬೇಕು. ರಾಜ್ಯಕ್ಕೆ 65%, 35% ಅವರಿಗೆ ಹೋಗಬೇಕು. ನಮ್ಮ ಮಧ್ಯೆ ಮಾತುಕತೆಯಾಗುತ್ತಿದ್ದು, ಮಾತುಕತೆಯಾದ ನಂತರ ಡಿಪಿಆರ್ ಮಾಡಲಾಗುವುದು ಎಂದರು.

ಜಮೀರ್ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ
ಸಚಿವ ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಲಾಗುವುದು ಎಂದರು

You cannot copy content of this page

Exit mobile version