Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಿಎಂ ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿ

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಎಸ್ಕಾರ್ಟ್‌ ವಾಹನ ಅಪಾಘಾತವಾಗಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕು ಕಚೇರಿಯ ಬಳಿ ಮಂಗಳವಾರದಂದು ನಡೆದಿದೆ.

ಸಿಎಂ ಬೊಮ್ಮಯಿ ಅವರ ಈ ವಾಹನವು ವಾಣಿ ವಿಲಾಸ ಡ್ಯಾಂನಿಂದ ಹಿರಿಯೂರಿನ ನೆಹರೂ ಮೈದಾನದ ಕಡೆಗೆ ಚಲಿಸುತ್ತಿದ್ದ ವಾಹನವು, ಅಡ್ಡವಾಗಿ ಬಂದ ಬೈಕ್‌ ಸವಾರನ್ನು ತಪ್ಪಿಸಲು ಹೋಗಿ ಪಟ್ಟಿ ಹೊಡೆದಿರುವ ಘಟನೆ ಸಂಭವಿಸಿದೆ. ಘಟನೆಯಿಂದ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಎಸ್ಕಾರ್‌ ವಾಹನದಲ್ಲಿ ಸಿಪಿಐ ರಮಾಕಾಂತ್‌ ಸೇರಿದಂತೆ ಹಲವರು ಇದ್ದರು ಎಂದು ಮಾಧ್ಯಮಗಳ ವರದಿಗಳ ಪ್ರಕಾರ ಹೇಳಲಾಗುತ್ತಿದೆ.

ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು