Home ರಾಜಕೀಯ ಶೀಗ್ರದಲ್ಲಿ ಸಿ.ಎಂ ಚೇಂಜ್‌ ಅಂದ ಆರ್ ಅಶೋಕ್‌ ?

ಶೀಗ್ರದಲ್ಲಿ ಸಿ.ಎಂ ಚೇಂಜ್‌ ಅಂದ ಆರ್ ಅಶೋಕ್‌ ?

ಮಂಡ್ಯ : ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಬದಲಾವಣೆ ಬಗ್ಗೆ ಈಗಾಗಲೇ ಹೇಳಿದ್ದೇನೆ. ನಾನು ಜ್ಯೋತಿಷ್ಯ ಗಿರಾಕಿಯಂತೂ ಅಲ್ಲ. ವಿಪಕ್ಷ ನಾಯಕನಾಗಿ ನನಗೂ ಪಕ್ಕಾ ಮಾಹಿತಿ ಬರುತ್ತೆ. ಈಗ ಬಂದಿದೆ. ನಮಗೂ ದೆಹಲಿ ಸೇರಿದಂತೆ ಎಲ್ಲಾ ಕಡೆ ಲಿಂಕ್ ಇದೆ. ಸಿಎಂ ಬದಲಾವಣೆ ಚರ್ಚೆ ಕಾಂಗ್ರೆಸ್​​​ನಲ್ಲೇ ನಡೆಯುತ್ತಿದೆ. ನವೆಂಬರ್​​​ನಲ್ಲಿ ಸಿಎಂ ಚೇಂಜ್ ಆಗುವುದು ಶತಸಿದ್ಧ. ಕಾದು ನೋಡಿ ಎಂದು ಪುನರುಚ್ಚರಿಸಿದ್ದಾರೆ.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯ ಕೂಗು, ಕಮಲಪಡೆಯ ಭಿನ್ನಮತೀಯರ ಬಂಡಾಯದ ಹೋರಾಟ ಒಂದೆಡೆ ನಡೆಯುತ್ತಿದೆ. ಬಿಜೆಪಿಯಲ್ಲಿನ ಬೆಳವಣಿಗೆಗಳು ಹಾಗೂ ಇತ್ತ ಕಾಂಗ್ರೆಸ್ ಸರ್ಕಾರದಲ್ಲಿನ ಸಿಎಂ ಕುರ್ಚಿ ಫೈಟ್, ಬದಲಾವಣೆ ಮಾತುಗಳು, ಪರೋಕ್ಷವಾಗಿ ಮುಂದಿನ ಸಿಎಂ ಯಾರು ಎಂಬಂತಹ ‘ಕೈ’ಬಣಗಳ ಪರಸ್ಪರ ಟಾಂಗ್ ನೀಡುತ್ತಿರುವ ಬೆಳವಣಿಗೆಗಳನ್ನೂ ಸಾಮಾನ್ಯವಾಗಿ ರಾಜ್ಯದ ಜನ ಗಮನಿಸುತ್ತಿದ್ದಾರೆ.

ಹೀಗಿರುವಾಗ, ಇದೀಗ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಗದೊಮ್ಮೆ ಸಿಎಂ ಬದಲಾವಣೆ ಪಕ್ಕಾ ಎಂದು ಪುನರುಚ್ಚರಿಸಿದ್ದಾರೆ. ಇತ್ತೀಚೆಗೆ ಕೆಲವೇ ದಿನಗಳಲ್ಲಿ ಹಲವು ಬಾರಿ ಈ ಮಾತನ್ನೇ ಹೇಳಿರುವ ಅಶೋಕ್ ಅವರು, ಇಂದು ಮತ್ತೊಮ್ಮ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಮಾತು ಅತ್ಯಂತ ವಿಶ್ವಾಸದಿಂದ ಹೇಳಿದ್ದು ತೀವ್ರ ಕೂತೂಹಲಕ್ಕೆ ಕಾರಣವಾಗಿದೆ.

You cannot copy content of this page

Exit mobile version